ತೆಲುಗು ಕಿರುತರೆ ಲೋಕದಲ್ಲಿ ರಶ್ಮಿ ಗೌತಮ್ ಅವರದು ಹೆಸರು ಬಹಳ ಫೇಮಸ್. ಎಕ್ಸ್ಟ್ರಾ ಜಬರ್ದಸ್ತ್ ರಿಯಾಲಿಟಿ ಶೋವನ್ನು ಜಬರ್ದಸ್ತ್ ಆಗಿ ರಶ್ಮಿ ಗೌತಮ್ ನಡೆಸಿಕೊಡುತ್ತಿದ್ದಾರೆ. ಇದರಲ್ಲಿ ರಶ್ಮಿ ಹಾಗೂ ಸುಧೀರ್ ಅವರ ಕಾಂಬಿನೇಷನ್ ಜನರಿಗೆ ತುಂಬಾನೇ ಇಷ್ಟವಾಗುತ್ತಿದೆ. ಆಗಾಗ ರಶ್ಮಿ ಹೋಸ್ಟಿಂಗ್ ಅಥವಾ ನಿರೂಪಣೆ ಮಾಡುವಾಗ ಹಾರಿಸುವ ಹಾಸ್ಯ ಚಟಾಕಿಗಳು ಜನರನ್ನ ಹೆಚ್ಚು ರಂಜಿಸುತ್ತಿವೆ.
ಇನ್ನು ಇತ್ತೀಚಿನ ಒಂದು ಸಂಚಿಕೆಯ ಪ್ರೋಮೋ ಬಿಡುಗಡೆ ಮಾಡಲಾಗಿತ್ತು. ಈ ಪ್ರೋಮೋ ದಲ್ಲಿ ರಶ್ಮಿ ಹೇಳಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗಿವೆ.ಪ್ರಮೋದಲ್ಲಿ ಏನಿತ್ತು? ರೋಹಿಣಿ ಸತ್ತಿ ಪಾಂಡು ಬಳಿ ತನ್ನ ತಂದೆ ಮಗುವನ್ನ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳುತ್ತಾಳೆ. ಆದರೆ ಅವಳು ಗರ್ಭಧಾರಣೆ ಮಾಡಲು ಸಾಧ್ಯವಾಗದೆ ಸಮಸ್ಯೆ ಎದುರಿಸುತ್ತಾಳೆ.
ಇದಕ್ಕೆ ರಶ್ಮಿ ತಮಾಷೆಯಾಗಿ ಮಗು ಆಗಲು ಸತ್ತಿ ಪಾಂಡು ಮಂಚದ ಬಳಿ ಇರಬೇಕು ಎಂದು ಹೇಳುತ್ತಾರೆ. 5000 ಅಥವಾ 10,000 ಖರ್ಚು ಮಾಡಿ ಪೂಜೆ ಮಾಡಿಸಿದರೆ ಮಗು ಆಗುತ್ತೆ ಎಂದು ಹೇಳುತ್ತಾರೆ.ಸದ್ಯ ಈ ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಎರಡು ಮಿಲಿಯನ್ ಗು ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಜೊತೆಗೆ ಸಾಕಷ್ಟು ಜನ ಈ ಪ್ರೊಮೋಗೆ ಕಾಮೆಂಟ್ ಮಾಡಿದ್ದು ಮಾತ್ರವಲ್ಲದೆ ಶೇರ್ ಕೂಡ ಮಾಡುತ್ತಿದ್ದಾರೆ. ಇನ್ನು ಈ ಸಂಚಿಕೆಯಲ್ಲಿ ಖ್ಯಾತ ನಟಿ ಖುಷ್ಬು ಹಾಗೂ ಹಾಸ್ಯ ನಟ ಕೃಷ್ಣ ಭಗವಾನ್ ಅತಿಥಿ ತೀರ್ಪುಗಾರರಾಗಿ ಆಗಮಿಸಿದ್ದರು. ಜಬರ್ದಸ್ತ್ ಕಾರ್ಯಕ್ರಮಕ್ಕೆ ಹಿಂದಿನಿಂದಲೂ ವ್ಯಾಪಕವಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇದರಲ್ಲಿ ಇರುವ ಹಾಸ್ಯ, ಕಾರ್ಯಕ್ರಮದ ಮೇಕಿಂಗ್, ಸ್ಪರ್ಧಿಗಳು, ನಿರೂಪಣೆ ಎಲ್ಲವೂ ಚೆನ್ನಾಗಿಯೇ ಇದ್ದರು ಕೂಡ ಇತ್ತೀಚಿಗೆ ಎಕ್ಸ್ಟ್ರಾ ಜಬರ್ದಸ್ತ್ ಶೋ ದ ರೇಟಿಂಗ್ ಕುಸಿದಿದೆ. ಅದೇನೇ ಇರಲಿ ರಶ್ಮಿ ಗೌತಮ್ ಹಾಗೂ ಸುಧೀರ್ ಇಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬರುವ ನಿರೂಪಣೆಯನ್ನು ಮಾತ್ರ ಜನ ಬಹುವಾಗಿ ಮೆಚ್ಚಿಕೊಂಡಿದ್ದಾರೆ.