ರಮ್ಯಾ ಕೃಷ್ಣನ್ ಬಹುಭಾಷಾ ನಟಿ ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅವರಿಗೆ ವರ್ಷ 52 ಆಗಿದ್ದರು ನೋಡೋದಕ್ಕೆ ಮಾತ್ರ ಹಾಗೆ ಕಾಣಿಸುವುದೇ ಇಲ್ಲ. ಈಗಲೂ ಸಾಕಷ್ಟು ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿರುವ ರಮ್ಯಕೃಷ್ಣ ಹಲವು ಫೋಟೋಗಳನ್ನು ಕೂಡ ಶೇರ್ ಮಾಡುತ್ತಾರೆ. ಇದೀಗ ರಮ್ಯಾ ಕೃಷ್ಣನ್ ಅವರ ಬಗ್ಗೆ ಹೊಸದೊಂದು ಗಾಸಿಪ್ ಕೇಳಿ ಬರುತ್ತಿದೆ.
ನಟಿ ರಮ್ಯಾ ಕೃಷ್ಣನ್ ಈಗಲೂ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಅಭಿನಯಿಸುತ್ತಾರೆ ಅವರ ಬೇಡಿಕೆ ಈಗಲೂ ಕಡಿಮೆ ಆಗಿಲ್ಲ. ಬಾಹುಬಲಿ ಸಿನಿಮಾದ ನಂತರ ರಮ್ಯಕೃಷ್ಣನ್ ಅವರ ಗ್ರಾಫ್ ಇನ್ನು ಮೇಲಕ್ಕೆ ಏರಿದೆ. ಇಂತಿಪ್ಪ ರಮ್ಯಕೃಷ್ಣನ್ ಅವರ ಲವ್ ಲೈಫ್ ಬಗ್ಗೆ ಇದೀಗ ಸುದ್ದಿಯೊಂದು ಹರಿದಾಡುತ್ತಿದೆ. ಹಿರಿಯ ನಟಿ ರಮ್ಯ ಕೃಷ್ಣನ್ ಹಾಗೂ ನಿರ್ದೇಶಕ ನಟ ಕೆ ಎಸ್ ರವಿಕುಮಾರ್ ಅವರ ನಡುವೆ ಅಫೇರ್ ಇರುವ ಬಗ್ಗೆ ಈಗಾಗಲೇ ಸುದ್ದಿ ಆಗಿತ್ತು.
ನಟಿ ರಮ್ಯಾ ಕೃಷ್ಣನ್ ಹಾಗೂ ಕೆ ಎಸ್ ರವಿಕುಮಾರ್ ಅವರು ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಇವರಿಬ್ಬರೂ ಕೆಲಸ ಮಾಡಿದ ಆರಂಭದಿಂದಲೂ ಇವರಿಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇತ್ತು ಎಂದು ಹೇಳಲಾಗುತ್ತಿದೆ. ಹೌದು, ನಟಿ ರಮ್ಯಾ ಕೃಷ್ಣನ್ ನಿರ್ದೇಶಕ ಕೆ ಎಸ್ ರವಿಕುಮಾರ್ ಅವರ ಪ್ರೀತಿಯಲ್ಲಿ ಬಿದ್ದಿದ್ದಾರಂತೆ.
ಅಷ್ಟೇ ಅಲ್ಲದೆ ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮದುವೆಗೂ ಮೊದಲೇ ರಮ್ಯಾ ಕೃಷ್ಣನ್ ಗರ್ಭಿಣಿ ಆಗಿದ್ದರು ಎನ್ನಲಾಗಿದೆ. ಪ್ರೀತಿಯ ಛಾಯೆ ರವಿಕುಮಾರ್ ಅವರ ಮನೆಯ ಮೇಲೆ ಭೀಕರ ಪರಿಣಾಮವನ್ನು ಬೀರಿದೆ. ಇವರಿಬ್ಬರ ಪ್ರೇಮ ಪ್ರಕರಣ ರವಿಕುಮಾರ್ ಅವರ ಹೆಂಡತಿಗೆ ಗೊತ್ತಾಗಿ ರವಿಕುಮಾರ್ ಹಾಗೂ ಅವರ ಪತ್ನಿಯ ನಡುವೆ ದೊಡ್ಡ ಜಗಳವೇ ಆಗಿದೆ ಎಂದು ವರದಿ ಆಗಿದೆ.
ಅಫೇರ್ ಇರುವುದು ಮಾತ್ರವಲ್ಲದೆ ರಮ್ಯಾ ಕೃಷ್ಣನ ಮದುವೆಗೂ ಮೊದಲೇ ಪ್ರಗ್ನೆಂಟ್ ಆಗಿದ್ದಾರೆ ಎನ್ನುವ ಸುದ್ದಿಯು ಹರಿದಾಡುತ್ತಿದೆ ಹಾಗಾಗಿ ರವಿಕುಮಾರ್ ಅವರ ಹೆಂಡತಿ ರವಿಕುಮಾರ್ ಜೊತೆಗೆ ಸಂಬಂಧ ಉಳಿಸಿಕೊಳ್ಳಲು ಇಷ್ಟಪಡುತ್ತಿಲ್ಲ ಎನ್ನುವ ಮಾಹಿತಿಯು ಇತ್ತು.
ಜೊತೆಗೆ ಹೆಂಡತಿಯನ್ನು ತನ್ನ ಜೊತೆ ಇರಿಸಿಕೊಳ್ಳುವ ಸಲುವಾಗಿ ರಮ್ಯ ಕೃಷ್ಣನ್ ಅವರ ಜೊತೆಗೆ ಸಂಬಂಧ ಕಡಿದುಕೊಳ್ಳಲು ರವಿಕುಮಾರ್ ಮುಂದಾಗಿದ್ದರು ಎನ್ನಲಾಗಿದೆ. ಹಾಗಾಗಿ ರಮ್ಯಕೃಷ್ಣನ್ ಅವರ ಗರ್ಭಪಾತ ಮಾಡಿಸಲು ರಮ್ಯ ಕೃಷ್ಣನ್ ಅವರ ಮನವೊಲಿಸಲು ಪ್ರಯತ್ನಿಸಿದಾಗ, ರಮ್ಯಕೃಷ್ಣನ್ ಅವರು ತಾನು ಹಾಗೆ ಮಾಡುವುದಕ್ಕೆ 75 ಲಕ್ಷ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರಂತೆ.
ಆದರೆ ಈ ವಿಷಯ ಎಲ್ಲೆಡೆ ಹಬ್ಬುತ್ತಿದ್ದ ಹಾಗೆ ರಮ್ಯಕೃಷ್ಣನ್ ಅವರ ಬಳಿ ಈ ಪ್ರಶ್ನೆ ಕೇಳಲಾಗಿದೆ ಆದರೆ ಇದೆಲ್ಲವೂ ಸುಳ್ಳು ಸುದ್ದಿ ಎಂದು ರಮ್ಯಾ ಕೃಷ್ಣನ್ ಮೆಲ್ಲಗೆ ವಿಷಯವನ್ನು ತಳ್ಳಿ ಹಾಕಿದ್ದಾರೆ. ಹಾಗಾಗಿ ಈ ವಿಷಯ ಕೇವಲ ಗಾಸಿಸಿಪ್ಪೋ ಅಥವಾ ನಿಜವಾಗಿಯೂ ರಮ್ಯಾ ಕೃಷ್ಣನ್ ಅವರ ಜೀವನದಲ್ಲಿ ಇಂತಹ ಒಂದು ಘಟನೆ ನಡೆದಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸದ್ಯ ರಮ್ಯಾ ಕೃಷ್ಣನ್ ಅವರು ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದಿಂದಾಗಿಯೂ ಹೆಚ್ಚು ಸುದ್ದಿಯಲ್ಲಿ ಇದ್ದಾರೆ.