ಭಾರತ ಚಿತ್ರರಂಗದ ವಿಶಿಷ್ಟ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು. ಇವರು ತಾವು ನಿರ್ದೇಶಿಸುವ ಸಿನಿಮಾಗಳಷ್ಟೇ ವಿವಾದಗಳಿಗೂ ಹೆಸರುವಾಸಿಯಾಗಿರುವವರು. ಸದಾ ಒಂದಲ್ಲ ಒಂದು ವಿಚಾರದಿಂದ ರಾಮ್ ಗೋಪಾಲ್ ವರ್ಮಾ ಅವರು ಸುದ್ದಿಯಾಗುತ್ತಾರೆ. ಇದೀಗ ಇವರು ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ. ಅಂಥದ್ದೇನಿದೆ ಈ ವಿಡಿಯೋದಲ್ಲಿ ಎಂದು ತಿಳಿಸುತ್ತೇವೆ ನೋಡಿ.
ರಾಮ್ ಗೋಪಾಲ್ ವರ್ಮಾ ಅವರು ಪ್ರಯೋಗಾತ್ಮಕ ಸಿನಿಮಾಗಳಿಂದ ಹೆಸರುವಾಸಿ ಆಗಿರುವವರು. ಜೊತೆಗೆ, ಸಿನಿಮಾಗಳಲ್ಲಿ ಬೇರೆ ನಿರ್ದೇಶಕರಿಗಿಂತ ಒಂದಲ್ಲ ಒಂದು ಬೇರೆ ರೀತಿಯ ಹೊಸ ಅಂಶಗಳನ್ನು ಇಟ್ಟಿರುತ್ತಾರೆ. ಹಾರರ್, ಥ್ರಿಲ್ಲರ್ ಸಿನಿಮಾಗಳನ್ನು ಇವರು ಹೆಚ್ಚು ನಿರ್ದೇಶನ ಮಾಡಿದ್ದಾರೆ. ನಿರ್ದೇಶಕನಾಗಿ ಇವರಿಗೆ ಒಳ್ಳೆಯ ಹೆಸರು ಇದ್ದರು ಸಹ, ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ರಾಮ್ ಗೋಪಾಲ್ ವರ್ಮಾ ಅವರು ಕಲಾವಿದರ ಬಗ್ಗೆ ಹೇಳಿಕೆ ಕೊಡುವ ಮೂಲಕ ಸುದ್ದಿಯಾಗುತ್ತಾರೆ, ಟ್ವಿಟರ್ ನಲ್ಲಿ ಕಲಾವಿದರ ಬಗ್ಗೆ ಟ್ವೀಟ್ ಮಾಡುವ ಮೂಲಕ, ವಿಚಿತ್ರವಾಗಿ ಬರೆಯುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ನಟಿಯ ಜೊತೆಗೆ ಶೇರ್ ಮಾಡಿರುವ ವಿಡಿಯೋ ಇಂದ ಭಾರಿ ಸುದ್ದಿಯಾಗುತ್ತಿದ್ದಾರೆ ರಾಮ್ ಗೋಪಾಲ್ ವರ್ಮಾ ಅವರು. ಟ್ವಿಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಜೊತೆಗೆ ಇರುವುದು ನಟಿ ಮತ್ತು ಮಾಡೆಲ್ ಆಶು ರೆಡ್ಡಿ ಅವರು. ಈ ನಟಿ ಕಾಫಿ ಶಾಪ್ ನಲ್ಲಿ ಕುಳಿತಿರುವಾಗ, ಐಷಾರಾಮಿ ಕಾರ್ ನಲ್ಲಿ ಎಂಟ್ರಿ ಕೊಡುವ ರಾಮ್ ಗೋಪಾಲ್ ವರ್ಮಾ ಅವರು, ನಾನು ಯಾರು ಅಂತ ಗೊತ್ತಾಯ್ತಾ ಎಂದು ಹೇಳುತ್ತಾರೆ, ಆಗ ಆಕೆ ಗೊತ್ತಾಗಲಿಲ್ಲ ಎನ್ನುತ್ತಾರೆ. ಆಗ ರಾಮ್ ಗೋಪಾಲ್ ಅವರು ಅವರ ಎದುರು ಕುಳಿತು ಮಾತನಾಡಲು ಶುರುಮಾಡುತ್ತಾರೆ. ಇಬ್ಬರು ಮಾತನಾಡುತ್ತಾ ಇರುವಾಗ ನಿಮ್ಮ ತೊ’ಡೆ ಚೆನ್ನಾಗಿದೆ ಎಂದು ಹೇಳುತ್ತಾರೆ. ತಕ್ಷಣವೇ ಆ ನಟಿ ರಾಮ್ ಗೋಪಾಲ್ ವರ್ಮಾ ಅವರ ಕೆನ್ನೆಗೆ ಭಾರಿಸುತ್ತಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದ್ದು, ಆದರೆ ಇದು ನಿಜವಾದ ಘಟನೆ ಅಲ್ಲ, ಸ್ಕ್ರಿಪ್ಟೆಡ್ ಆಗಿದೆ. ಆಶು ರೆಡ್ಡಿ ಅವರೊಡನೆ ರಾಮ್ ಗೋಪಾಲ್ ವರ್ಮಾ ಅವರು ಕಾಣಿಸಿಕೊಂಡಿರುವ ಇಂಟರ್ವ್ಯೂ ಪ್ರೋಮೋ ಇದಾಗಿದ್ದು, ಪೂರ್ತಿ ಸಂದರ್ಶನದ ವಿಡಿಯೋ ಕೆಲವು ದಿನಗಳಲ್ಲಿ ಬರಲಿದೆ.
ಈ ವಿಡಿಯೋ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ರಾಮ್ ಗೋಪಾಲ್ ವರ್ಮಾ. ಇದಕ್ಕಿಂತ ಮೊದಲು ನಟಿ ಇನಾಯಾ ಸುಲ್ತಾನ ಅವರೊಡನೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇಂದ ಸುದ್ದಿಯಾಗಿದ್ದರು. ಆದರೆ ಆ ವಿಡಿಯೋದಲ್ಲಿ ಇರುವುದು ನಾನಲ್ಲ, ಆ ಹುಡುಗಿ ಇನಾಯಾ ಸುಲ್ತಾನ ಅಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.