PhotoGrid Site 1678698774120

ನನಗೆ ನಟರ ಜೊತೆ ಲಿಪ್ ಟು ಲಿಪ್ ಕಿಸ್ ಮಾಡುವುದು ತುಂಬಾ ಇಷ್ಟ! ಬೆಡ್ ರೂಮ್ ಸಿನ್ ಕೂಡ ತುಂಬಾ ಆಸಕ್ತಿ ಇದೆ ಎಂದ ಖ್ಯಾತ ನಟಿ ರಕುಲ್ ಪ್ರೀತ್! ಸಿನೆಮಾದಲ್ಲಿ ತನಗಾದ ಅನುಭವ ಹಂಚಿಕೊಂಡ ನಟಿ ನೋಡಿ!!

ಸುದ್ದಿ

ಸಿನಿಮಾ ಅಂದಮೇಲೆ ಅಲ್ಲಿ ಗ್ಲಾಮರಸ್ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರುತ್ತೆ. ಸಾಕಷ್ಟು ಸಿನಿಮಾಗಳಲ್ಲಿ ಹೀರೋಯಿನ್ ಹಾಗೂ ಹೀರೋಗಳ ಲಿಪ್ ಲಾಕ್ ಸೀನ್ ಕೂಡ ಇರುತ್ತೆ. ಮೊದಲೆಲ್ಲ ಇಂತಹ ಸೀನ್ ಗಳನ್ನು ಬಹಳ ನಾಜೂಕಾಗಿ ಚತ್ರೀಕರಿಸುತ್ತಿದ್ದರು. ಆದರೆ ಈಗ ನಿಜವಾಗಿಯೂ ಲಿಪ್ ಲಾಕ್ ಗಳ ಸೀನ್ ಚಿತ್ರೀಕರಣ ಮಾಡಲಾಗುತ್ತೆ. ಈ ಒಂದು ಪರ್ಟಿಕ್ಯುಲರ್ ಸೀನ್ ಬಗ್ಗೆ ನಟಿ ರಾಹುಲ್ ಪ್ರೀತ್ ಸಿಂಗ್ ಸೆನ್ಸೇಶನ್ ಹೇಳಿಕೆ ಒಂದನ್ನು ನೀಡಿದ್ದಾರೆ.

ಸಿನಿಮಾರಂಗದಲ್ಲಿ ಬಣ್ಣ ಹಚ್ಚಿ ಸಾಕಷ್ಟು ವರ್ಷಗಳ ಕಾಲ ಅಲ್ಲಿಯೇ ವೃತ್ತಿ ಜೀವನ ಮುಂದುವರಿಸಬೇಕು ಎಂದರೆ ಅಷ್ಟು ಸುಲಭವಲ್ಲ. ಕೆಲವು ನಟಿಯರು ಮಾಡಲಿಂಗ್ ಜಗತ್ತಿನಿಂದ ಸಿನಿಮಾ ರಂಗದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬರುತ್ತಾರೆ. ಕೆಲವರು ಸಿನಿಮಾರಂಗದ ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಆದರೆ ಈ ಯಶಸ್ಸಿನ ಹಿಂದೆ ಅವರು ಸಾಕಷ್ಟು ಕಷ್ಟ ಪಟ್ಟಿರುತ್ತಾರೆ ಎಂಬುದನ್ನು ಮರೆಯುವ ಹಾಗಿಲ್ಲ. ಹೀಗೆ ಸಿನಿಮಾರಂಗದಲ್ಲಿ ತಮ್ಮ ವೃತ್ತಿ ಜೀವನವನ್ನು ಕಟ್ಟಿಕೊಂಡಿರುವ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಕೂಡ ಒಬ್ಬರು.

ನಟಿ ರಕುಲ್ ಪ್ರೀತ್ ಸಿಂಗ್ ತೆಲುಗು ಸಿನಿಮಾ ರಂಗದಿಂದ ತಮ್ಮ ವೃತಿ ಜೀವನವನ್ನು ಆರಂಭಿಸಿ ಬಾಲಿವುಡ್ ನಲ್ಲಿಯೂ ಕೂಡ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಂತೂ ಅವರನ್ನ ಹಿಡಿಯುವವರೇ ಇಲ್ಲ. ಒಂದಲ್ಲ ಒಂದು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ರಕುಲ್ ಪ್ರೀತ್ ಸಿಂಗ್ ಅವರ ಬಗ್ಗೆ ಹೇಳುವುದಾದರೆ, ಅವರು ಜನಿಸಿದ್ದು 1990 ಅಕ್ಟೋಬರ್ 12. ರಕುಲ್ ಅವರ ತಂದೆ ರಾಜೇಂದ್ರ ಸಿಂಗ್ ಹಾಗೂ ತಾಯಿ ಸುಲ್ವಿಂದರ್ ಸಿಂಗ್.

ರಕುಲ್ ಪ್ರೀತ್ ಸಿಂಗ್ ಅವರ ತಂದೆ ಆರ್ಮಿಯಲ್ಲಿ ಇದ್ದವರು ಹಾಗಾಗಿ ಅವರು ದೆಹಲಿಯಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದರು. ರಕುಲ್ ಕೂಡ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಆರ್ಮಿ ಸ್ಕೂಲ್ನಲ್ಲಿ ಮುಗಿಸಿದ್ದಾರೆ. ಇನ್ನು ರಕುಲ್ ಕೇವಲ ನಟಿ ಮಾತ್ರವಲ್ಲ ಅದಕ್ಕಿಂತಲೂ ಮೊದಲು ಒಬ್ಬ ಅತ್ಯುತ್ತಮ ಗಾಲ್ಫ್ ಆಟಗಾರ್ತಿ ಆಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರು.

ನಟಿ ರಕುಲ್ ಕೂಡ ಮಾಡಲಿಂಗ್ ಜಗತ್ತಿನಿಂದ ಸಿನಿಮಾರಂಗಕ್ಕೆ ಬಂದವರೇ. ತಮ ಕಾಲೇಜು ಜೀವನದಿಂದಲೇ ಅವರು ಮಾಡೆಲಿಂಗ್ ಅನ್ನು ಆರಂಭಿಸಿದ್ದರು. ಅಂದ ಹಾಗೆ ರಕುಲ್ ಅವರು 2009ರಲ್ಲಿ ಕನ್ನಡದ ಗಿಲ್ಲಿ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

ಅಲ್ಲಿಂದ ರಕುಲ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ದುರದೃಷ್ಟವಶಾತ್ ರಕುಲ್ ಅವರ ಇತ್ತೀಚಿನ ಸಿನಿಮಾಗಳು ಅಷ್ಟು ಹಿಟ್ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಇತ್ತೀಚಿಗೆ ಇಂಗ್ಲಿಷ್ ನ ಸಂದರ್ಶನ ಒಂದರಲ್ಲಿ ಪ್ರತಿ ಜೀವನದ ಹಲವು ಮಜಲುಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕೆ ಬಾಕ್ಸ್ ಆಫೀಸ್ ಸಂಖ್ಯೆ ಎಷ್ಟು ಮುಖ್ಯವಾಗುತ್ತೆ ಎನ್ನುವ ಪ್ರಶ್ನೆ ರಕುಲ್ ಅವರಿಗೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ರಕುಲ್ ಜನರ ಬಳಿ ಹಣವಿಲ್ಲ.

ಹಾಗಾಗಿ ಅವರು ತಿಂಗಳಿಗೆ ಒಂದು ಸಿನಿಮಾವನ್ನು ಮಾತ್ರ ನೋಡುತ್ತಾರೆ ಎಂದು ಉತ್ತರಿಸುತ್ತಾರೆ. ಚಲನಚಿತ್ರ ವೀಕ್ಷಣೆ ದುಬಾರಿ ವ್ಯವಹಾರವು ಆಗಿದೆ ವಾರದಲ್ಲಿ ಒಂದಕ್ಕಿಂತ ಹೆಚ್ಚು ಸಿನಿಮಾ ಬಿಡುಗಡೆ ಆದರೆ ಎಲ್ಲಾ ಪ್ರೇಕ್ಷಕರು ಈ ಎಲ್ಲಾ ಸಿನಿಮಾವನ್ನು ನೋಡಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಸಿನಿಮಾ ಚೆನ್ನಾಗಿಲ್ಲ ಎಂದು ಅರ್ಥವಲ್ಲ. ದುಬಾರಿ ದುನಿಯಾದಲ್ಲಿ ಎಲ್ಲರಿಗೂ ಎಲ್ಲಾ ಸಿನಿಮಾವನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಥ.

ಇನ್ನು ಸಿನಿಮಾಗಳಲ್ಲಿ ಇಂಟಿಮೇಟ್ ಸೀನ್ ನ್ನು ಮಾಡುವಾಗ ನಟರೂ ಕೂಡ ನಾಚಿಕೆ ಪಟ್ಟುಕೊಳ್ಳುತ್ತಾರೆ. ಚುಂಬನದ ಸೀನ್ ಮುಗಿಯುತ್ತಿದ್ದ ಹಾಗೆ ಎರಡು ನಿಮಿಷಗಳ ಕಾಲ ಮನಸ್ಸಿನಲ್ಲಿ ತಳಮಳ ಆಗುತ್ತದೆ ಎಂದು ರಕುಲ್ ಪ್ರೀತಿ ಸಿಂಗ್ ಹೇಳಿದ್ದಾರೆ. ಒಟ್ಟಿನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಅಂತೂ ಒಂದಲ್ಲ ಒಂದು ಸಿನಿಮಾಗಳಲ್ಲಿ ಸದ್ಯ ಬ್ಯುಸಿ ಆಗಿದ್ದಾರೆ.

Leave a Reply

Your email address will not be published. Required fields are marked *