ರಾಖಿ ಸಾವಂತ್ ಅವರನ್ನು ವಿವಾದಾತ್ಮಕ ನಟಿ ಎಂದೇ ಕರೆಯಬಹುದು. ಯಾಕೆಂದರೆ ಅವರು ಸಿನಿಮಾ (Film)ದಲ್ಲಿ ಅಭಿನಯಿಸಿದ್ದಕ್ಕಿಂತ ಹೆಚ್ಚಾಗಿ ತಮ್ಮ ವಿವಾಧಾತ್ಮಕ ಹೇಳಿಕೆಗಳಿಂದ, ನಡೆಗಳಿಂದ ಹೆಚ್ಚು ಫೇಮಸ್ ಆಗಿದ್ದಾರೆ. ಇವರಷ್ಟು ಬಾಲಿವುಡ್ (Bollywood) ನಲ್ಲಿರುವ ಟ್ರೋಲ್ ಆದ ನಟಿ ಬೇರೊಬ್ಬರಿಲ್ಲ ಎಂದರು ತಪ್ಪಾಗಲ್ಲ.
ಇನ್ನು ತಮ್ಮ ವೈಯಕ್ತಿಕ ವಿಚಾರಕ್ಕಾಗಿ ಕೂಡ ರಾಖಿ ಸಾವಂತ್ ಸಿಕ್ಕಾಪಟ್ಟೆ ಸುದ್ದಿ ಆಗುತ್ತಾರೆ ಈ ಹಿಂದೆ ಲಿವ್ ಇನ್ ರಿಲೇಷನ್ಶಿಪ್ (Live in relationship) ನಲ್ಲಿ ಇದ್ದ ಹುಡುಗ ಕೈಕೊಟ್ಟು ಓಡಿ ಹೋದಾಗ ರಾಖಿ ಮಾಧ್ಯಮದ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅದಾದ ಬಳಿಕ ಬಿಗ್ ಬಾಸ್ ಕೂಡ ಪ್ರವೇಶ ಮಾಡಿದ್ರು.
ಇನ್ ಬಿಗ್ ಬಾಸ್ ನಿಂದ ಹೊರಬಂದ ಬಳಿಕ ರಾಖಿ ಸಾವಂತ್ ಮೈಸೂರು ಮೂಲದ ಆದಿಲ್ ಖಾನ್ ದುರಾನಿ (Adil Khan durrani) ಎಂಬವರ ಜೊತೆ ಪ್ರೀತಿಯಲ್ಲಿ ಬಿದ್ರು. ಆತನು ರಾಖಿ ಸಾವಂತ್ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದಾಗಿ ಹೇಳಿಕೊಂಡಿದ್ದ ದುರಾನಿ. ಈ ನಡುವೆ ಆದಿಲ್ ಮಾಜಿ ಸ್ನೇಹಿತೆ ಕೂಡ ಇವರಿಬ್ಬರ ರಿಲೇಶನ್ ಶಿಪ್ ಬಗ್ಗೆ ಮಾತನಾಡಿದರು.
ಕೊನೆಗೂ ರಾಖಿ ಸಾಮಂತ್, ಆದಿಲ್ ಖಾನ್ ದುರಾನಿ ಅವರನ್ನು ಮದುವೆ ಆಗಿದ್ದಾರೆ. ಆದರೆ ಈ ಮದುವೆ ಸಾಕಷ್ಟು ದಿನ ಗುಟ್ಟಾಗಿಯೇ ಇತ್ತು, ಆದಿಲ್ ತಾನು ಇನ್ನೂ ಮದುವೆ ಆಗಿಲ್ಲ ಎಂದು ಹೇಳಿಕೆ ನೀಡಿದ್ದರು. ಕೊನೆಗೆ ತಮ್ಮಿಬ್ಬರ ಮದುವೆಯ ರಿಜಿಸ್ಟರ್ ಆಗಿರುವ ಫೋಟೋ ಹಾಗೂ ವಿಡಿಯೋಗಳನ್ನು ರಾಖಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಈ ಘಟನೆಯ ಬಳಿಕ ಆದಿಲ್ ಖಾನ್ ಮದುವೆ ಆಗಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ.
ಇನ್ನು ಇತ್ತೀಚಿಗೆ ಮುಂಬೈನಲ್ಲಿ ಅಭಿಮಾನಿಯೊಬ್ಬ ರಾಖಿ ಸಾವಂತ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಬಂದಿದ್ದಾನೆ ಈ ಸಮಯದಲ್ಲಿ ರಾಖಿ ಸಾವಂತ್ ಅವರ ವರ್ತನೆ ಅಭಿಮಾನಿಗೆ ಮುಜುಗರ ತಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ರಾಖಿ ಸಾವಂತ್ ಅವರ ಅಭಿಮಾನಿ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದಾನೆ.
ನನಗೆ ಮದುವೆಯಾಗಿದೆ ನಾನು ವಿವಾಹಿತ ಮಹಿಳೆ ನೀವು ನನ್ನನ್ನು ಮುಟ್ಟಬಾರದು ಎಂದು ಹೇಳಿದ್ದಾರೆ ರಾಖಿ. ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ ರಾಖಿ ಹತ್ತಿರ ನಿಂತಿದ್ದರು ಅಭಿಮಾನಿ ಆಗ ಸ್ವಲ್ಪ ದೂರ ನಿಲ್ಲಿ ನನ್ನನ್ನು ಮುಟ್ಟಬೇಡಿ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಈಗ ಯಾವುದು ಹಿಂದಿನ ಹಾಗಿಲ್ಲ ಆ ಕಥೆ ಮುಗಿದಿದೆ.
ನೀವು ನನ್ನನ್ನು ಮುಟ್ಟಬಾರದು ಎಂದು ರಾಖಿ ದೂರ ದೂರ ಹೋಗುತ್ತಿದ್ದಾರೆ. ಸದ್ಯ ರಾಖಿ ಸಾವಂತ್ ಅವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ ಜೊತೆಗೆ ಅಕ್ಕ ನಿಮ್ಮ ಸಮಸ್ಯೆಗೆ ರಸ್ತೆಯ ಬದಿಯಲ್ಲಿ ಪರಿಹಾರವನ್ನು ಹುಡುಕುತ್ತಿದ್ದೀರಾ ಎಂದು ನೆಟ್ಟಿಗರು ರಾಖಿ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ರಾಖಿ ಸಾವಂತ್ ಇಂತಹ ಒಂದಲ್ಲ ಒಂದು ಸುದ್ದಿಗೆ ಟ್ರೊಲ್ ಆಗುತ್ತಲೇ ಇರುತ್ತಾರೆ.