ಬಾಲಿವುಡ್ ನಟಿ ರಾಖಿ ಸಾವಂತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರು ಸಿನಿಮಾಗಳಲ್ಲಿ ಅಭಿನಯಿಸಿದ್ದಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಜನರ ಗಮನ ತನ್ನೆಡೆಗೆ ಸೆಳೆದುಕೊಳ್ಳುವ ರಾಖಿ ಸಾವಂತ್ ಅವರು ತಮ್ಮ ಮದುವೆಯನ್ನು ಮಾತ್ರ ಗುಟ್ಟಾಗಿ ಇಟ್ಟಿದ್ದರು.
ನಟಿ ರಾಖಿ ಸಾವಂತ್ ಮೈಸೂರು (Mysore) ಮೂಲದ ಆದಿಲ್ ಖಾನ್ ದುರಾನಿ (Adil Khan Durrani) ಎಂಬ ಉದ್ಯಮಿಯನ್ನು ಪ್ರೀತಿಸ್ತಾ ಇದ್ದಿದ್ದು ಎಲ್ಲರಿಗೂ ಗೊತ್ತು. ನಾವಿಬ್ಬರೂ ಮದುವೆ ಆಗುತ್ತಿವೆ ಅಂತ ರಾಖಿ ಸಾವಂತ್ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾ (Social Media) ದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಆದಿಲ್ ಖಾನ್ ರಾಖಿ ಸಾವಂತ್ ಗೆ ದುಬಾರಿ ಗಿಫ್ಟ್ ಗಳನ್ನೂ ಕೂಡ ಕೊಟ್ಟಿದ್ದ.
ರಾಖಿ ಸಾವಂತ ಹಾಗೂ ಆದಿಲ್ ಖಾನ್ ದುರಾನಿ ಮದುವೆಯಾಗುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದ ಹಾಗೆ ಮಾಜಿ ಪ್ರೇಯಸಿ ತಕರಾರು ಕೂಡ ಮಾಡಿದ್ದರು. ಅದೇನೇ ಇರಲಿ ಕೊನೆಗೆ ರಾಖಿ ಸಾವಂತ್ ಆದಿಲ್ ಖಾನ್ ದುರಾನಿಯನ್ನು ರಿಜಿಸ್ಟರ್ ಮ್ಯಾರೇಜ್ (Register Marriage) ಆಗಿದ್ದಾರೆ. ಆದರೆ ಮದುವೆಯಾದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ಆದಿಲ್ ಕೊನೆಗೆ ಮದುವೆ ಆಗಿದ್ದೇ ಸುಳ್ಳು ಎಂದಿದ್ದರು. ಹಾಗಾಗಿ ರಾಖಿ ಸಾವಂತ್ ಅವರಿಬ್ಬರ ಮದುವೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಆದ್ಲ್ ಖಾನ್ ದುರಾನಿ ಅನಿವಾರ್ಯವಾಗಿ ಮದುವೆಯ ಬಗ್ಗೆ ಸತ್ಯ ಒಪ್ಪಿಕೊಳ್ಳುವಂತೆ ಆಗಿದೆ.
ಇನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ರಾಖಿ ಸಾವಂತ್ ಆದಿಲ್ ಖಾನ್ ದುರಾನಿಯನ್ನು ಮದುವೆಯಾದ ಫೋಟೋ ಹಾಗೂ ಮ್ಯಾರೇಜ್ ಸರ್ಟಿಫಿಕೇಟ್ ಗೆ ಸಹಿ ಮಾಡುತ್ತಿದ್ದ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಅಲ್ಲ ದೇವರು ಎಲ್ಲರಿಗೂ ಒಳ್ಳೆಯದನ್ನ ಮಾಡಲಿ ಎಂದು ಬರೆದುಕೊಂಡಿದ್ದಾರೆ ಅದರ ಜೊತೆಗೆ ಆದಿಲ್ ಗೆ ಇದ್ದ ಕೆಲವು ಸಮಸ್ಯೆಗಳಿಂದ ನಾವಿಬ್ಬರು ಮದುವೆಯಾದ ವಿಚಾರವನ್ನು ಹೇಳುವಂತೆ ಇರಲಿಲ್ಲ ಎಂಬುದಾಗಿ ನಟಿ ರಾಖಿ ಸಾವಂತ್ ಬರೆದುಕೊಂಡಿದ್ದಾರೆ.
ರಾಖಿ ಸಾವಂತ್ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹೇಳುತ್ತಿದಂತೆ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದಾರೆ. ಇನ್ನು ರಾಖಿ ಸಾವಂತ್ ಕೇಸರಿ ಬಣ್ಣದ ಹಿಜಾಬ್ ಧರಿಸಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಮದುವೆ ರಿಜಿಸ್ಟರ್ ನಲ್ಲಿ ರಾಖಿ ಅನಂತ್ ಸಾವಂತ್ ಎಂದು ಹಾಕಿಕೊಂಡಿದ್ದ ರಾಖಿ ಇದೀಗ ಫಾತಿಮಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.
ಆದರೆ ಇದೀಗ ಹೆಸರು ಬದಲಾಯಿಸಿಕೊಂಡು ತಮ್ಮ ಧರ್ಮವನ್ನು ಬದಲಾಯಿಸಿದ್ದಾರಾ? ಎಂದು ನೆಟ್ಟಿಗರು ರಾಖಿ ಸಾವಂತ್ ಅವರನ್ನ ಪ್ರಶ್ನೆ ಮಾಡಿದ್ದಾರೆ. ಸದ್ಯ ರಾಖಿ ಸಾವಂತ್ ಕ್ಯಾ-ನ್ಸ-ರ್ ಇಂದ ಬಳಲುತ್ತಿರುವ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ. ರಾಖಿ ಸಾವಂತ್ ಗೆ ಬರುವ ಅವಕಾಶಗಳು ಕೂಡ ಕಡಿಮೆಯಾಗಿದ್ದು, ಹಣಕ್ಕಾಗಿ ಸಣ್ಣ ಪುಟ್ಟ ಅವಕಾಶಗಳನ್ನೂ ಕೂಡ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಮದುವೆ ಸಂಬಂಧ ಎಷ್ಟು ದಿನಗಳವರೆಗೆ ಇರುತ್ತೋ ಗೊತ್ತಿಲ. ಒಟ್ಟಿನಲ್ಲಿ ರಾಖಿ ಹಾಗೂ ಆದಿಲ್ ಮದುವೆಯ ಗುಟ್ಟು ರಟ್ಟಾಗಿದೆ.