ಇತ್ತೀಚಿಗೆ ಇಂತಹ ಪ್ರಕರಣಗಳು ಜಾಸ್ತಿ ಆಗ್ತಾ ಇವೆ. ಮದುವೆಯಾಗಿ ಜೊತೆಯಲ್ಲಿ ಗಂಡ ಮಕ್ಕಳು ಇದ್ದರೂ ಕೂಡ ಬೇರೆ ಒಬ್ಬರ ಜೊತೆ ಪ್ರೀತಿ ಪ್ರೇಮ ಪ್ರಣಯ ಅಂತ ಓಡಾಡುವ ಆಂಟಿಯರೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಈ ಹಿಂದೆ ಗಂಡಸರಿಗೆ ಅ-ಕ್ರ-ಮ ಸಂ-ಬಂ-ಧ ಇರುತ್ತೆ ಎನ್ನುವ ಕಾರಣಕ್ಕೆ ವಿ-ಚ್ಛೇ-ದ-ನಗಳು ನಡೆಯುತ್ತಿದ್ದವು ಆದರೆ ಈಗೀಗ ಹೆಂಗಸರಿಗೆ ಅ-ಕ್ರ-ಮ ಸಂ-ಬಂ-ಧ ಇರುವ ಕೇಸ್ಗಳು ಹೆಚ್ಚು ದಾಖಲಾಗುತ್ತಿವೆ.
ಇತ್ತೀಚಿಗೆ ಒಬ್ಬ ಅಂಗನವಾಡಿ ಶಿಕ್ಷಕಿ ತನ್ನ ಅ-ನೈ-ತಿಕ ಸಂಬಂಧಕ್ಕೆ ಗಂಡ ಅಡ್ಡಿ ಆಗಬಹುದು ಎನ್ನುವ ಕಾರಣಕ್ಕೆ ಆತನಿಗೆ ಗುಂಡಿ ತೋಡಿದ್ದಾಳೆ. ವಿಜಯಪುರ ನಗರದಲ್ಲಿ ನಡೆದ ಅನುಮಾನಾಸ್ಪದ ಸಾ-ವಿನ ಕುರಿತು ಇರುವ ಪ್ರಕರಣ ಇದು. ಅಂಗನವಾಡಿ ಶಿಕ್ಷಕಿ ಒಬ್ಬಳು ತನ್ನ ಅ-ನೈ-ತಿಕ ಸಂಬಂಧಕ್ಕೆ ಗಂಡ ಅಡ್ದಿಪಡಿಸಬಹುದು ಎನ್ನುವ ಕಾರಣದಿಂದ ಆತನಿಗೆ ಪ್ರಜ್ಞೆ ತಪ್ಪಿಸಿ ಕೊನೆಗೆ ಪ್ರಿಯಕರನ ಜೊತೆ ಸೇರಿ ಕೊ-ಲೆ ಮಾಡಿಸಿದ್ದಾಳೆ.
ವಿಜಯಪುರದ ನಗರದ ನಿವಾಸಿ 40 ವರ್ಷದ ಪ್ರಕಾಶ್ ಹಳ್ಳಿ ಎಂಬಾತ ಹ-ತ್ಯೆಯಾದ ದುರ್ದೈವಿ. ಆಕೆ ಹೆಸರು ರಾಜೇಶ್ವರಿ ಹೊಸಮನಿ ಹಾಗೂ ಆಕೆಯ ಪ್ರಿಯಕರ ರವಿ ತಳವಾರ. ರಾಜೇಶ್ವರಿಗೆ 35 ವರ್ಷ ವಯಸ್ಸು ಮದುವೆಯಾಗಿ ಮೂರು ಜನ ಮಕ್ಕಳು ಇದ್ದಾರೆ. ಇನ್ನು ಆಕೆಯ ಪ್ರಿಯಕರ ರವಿ 25 ವರ್ಷ ವಯಸ್ಸಿನ ಹುಡುಗ ಕೆಲಸವಿಲ್ಲದೆ ಊರೂರು ಸುತ್ತಾಡುತ್ತಿದ್ದ ರವಿ ಹೇಗೂ ರಾಜೇಶ್ವರಿ ಜೊತೆ ತಳುಕು ಹಾಕಿಕೊಂಡಿದ್ದಾನೆ.
ಆತನ ಮೇಲೆ ಅಪಾರವಾದ ಪ್ರೀತಿ ಬೆಳೆಸಿಕೊಂಡ ರಾಜೇಶ್ವರಿ ಗಂಡನಿಗೆ ಗುಂಡಿ ತೊಡಲು ಪ್ರಿಯಕರನ ಜೊತೆ ಸೇರಿ ಸ್ಕೆಚ್ ಹಾಕಿದಳು. ರಾಜೇಶ್ವರಿ ಹಾಗೂ ರವಿ ಅವರದ್ದು ಐದಾರು ವರ್ಷಗಳ ಅನೈತಿಕ ಸಂಬಂಧ ಈಗಾಗಲೇ ಮನೆಯಲ್ಲಿ ಹೆದರಿಸಿ ರವಿಯೊಂದಿಗೆ ಓಡಿ ಹೋಗಿ ತಿಂಗಳುಗಳ ಕಾಲ ಆತನೊಂದಿಗೆ ಇದ್ದು ಮತ್ತೆ ಮನೆಗೆ ವಾಪಸ್ ಬರುತ್ತಿದ್ದಳು ರಾಜೇಶ್ವರಿ.
ರಾಜೇಶ್ವರಿಯ ಈ ದುರ್ಬುದ್ಧಿ ಗೊತ್ತಿದ್ದರೂ ಕೂಡ ಪ್ರಕಾಶ್ ಹಳ್ಳಿ ಹೆಂಡತಿಯನ್ನು ಪ್ರೀತಿಸುತ್ತಿದ್ದ. ಜೊತೆಗೆ ಆಕೆಯನ್ನು ಒಪ್ಪಿಕೊಂಡು ಮತ್ತೆ ಆಕೆಯೊಂದಿಗೆ ಸಂಸಾರ ಸಾಗಿಸುತ್ತಿದ್ದ. ಪ್ರಕಾಶ್ ವಿಜಯಪುರದಲ್ಲಿ ಪಾನ್ ಶಾಪ್ ಒಂದನ್ನು ಇಟ್ಟುಕೊಂಡಿದ್ದ. ಒಂದು ದಿನ ಶಾಪ್ ಬಾಗಿಲು ಮುಚ್ಚಿ ರಾತ್ರಿ ಮನೆಗೆ ಬಂದಾಗ ಹೆಂಡತಿ ಆತನಿಗೆ ಚಿಕನ್ ಸಾರು ಮಾಡಿ ಬಡಿಸಿದ್ದಾಳೆ ಆದರೆ ಅದರಲ್ಲಿ ನಿದ್ದೆ ಮಾತ್ರೆ ಬೆರೆಸಿ ಆತ ಪ್ರಜ್ಞೆ ತಪ್ಪುವಂತೆ ಮಾಡಿದ್ದಾಳೆ.
ಇನ್ನು ಮೊದಲೇ ಪ್ಲಾನ್ ಮಾಡಿದ ಹಾಗೆ ಪ್ರಕಾಶ್ ಪ್ರಜ್ಞೆ ತಪ್ಪಿದ ನಂತರ ರಾಜೇಶ್ವರಿಯ ಪ್ರಿಯಕರ ರವಿ ತಳವಾರ್ ತನ್ನ ಸ್ನೇಹಿತ ಗುರುಪಾದ ದಳವಾಯಿ ಜೊತೆ ಸೇರಿ ಮನೆಗೆ ಬಂದಿದ್ದಾನೆ. ಕೊನೆಗೆ ರಾತ್ರಿ ವೇಳೆ ಮನೆಗೆ ಬಂದರು. ರಾಜೇಶ್ವರಿ ಹಾಗೂ ರವಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಕಾಶ್ ನನ್ನು ಕೈಕಾಲು ಹಿಡಿದುಕೊಂಡಿದ್ದರು ಅದೇ ವೇಳೆ ರವಿ ಜೊತೆ ಬಂದಿದ್ದ ಗುರುಪಾದ ದಳವಾಯಿ ಸೀರೆಯಿಂದ ಆತನ ಕುತ್ತಿಗೆಗೆ ಬಿಗಿಯಾಗಿ ಬಿಗಿದು ಕೊಲೆ ಮಾಡಿದ.
ಕೊ-ಲೆ ಮಾಡಿದ ನಂತರ ರಾಜೇಶ್ವರಿಯಕರ ಹಾಗೂ ಸ್ನೇಹಿತ ಇಬ್ಬರು ಪರಾರಿಯಾಗಿದ್ದಾರೆ ರಾಜೇಶ್ವರಿ ಮಾತ್ರ ಬೆಳಕಿನವರೆಗೂ ಗಂಡನ ಶವದೊಂದಿಗೆ ಕುಳಿತಿದ್ದಾಳೆ ನಂತರ ಬೆಳಿಗ್ಗೆ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರನ್ನ ನಂಬಿಸಿದ್ದಾಳೆ. ಆದರೆ ಪ್ರಕಾಶ ತಂದೆ ಲಕ್ಷ್ಮಣ್ ಜಲನಗರ ಅವರಿಗೆ ಇವರಿಬ್ಬರ ಸಂಸಾರ ಸರಿ ಇಲ್ಲ ಎನ್ನುವುದು ಗೊತ್ತಿತ್ತು. ಹಾಗಾಗಿ ಪ್ರಕಾಶನ ಸಾವಿನ ಬಗ್ಗೆ ಸಂಶಯ ಮೂಡಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ನಂತರ ಪ್ರಕಾಶ ನನ್ನ ಕೊ-ಲೆ ಮಾಡಿರುವ ರಾಜೇಶ್ವರಿ ರವಿ ಹಾಗೂ ಗುರುಪಾದ ಇದೀಗ ಪೊಲೀಸರ ವಶದಲ್ಲಿದ್ದಾರೆ.
ಪ್ರಕಾಶ್ ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದ ಆಕೆಯನ್ನು 10ನೇ ತರಗತಿ ಫೇಲ್ ಆಗಿದ್ದರೂ ಕೂಡ ಮತ್ತೆ ಮದುವೆಯಾದ ನಂತರ ಓದಿಸಿ ಪಿಯುಸಿ ಪಾಸ್ ಮಾಡಿಸಿ ಅಂಗನವಾಡಿ ಕಾರ್ಯಕರ್ತೆಯ ನೌಕರಿಯನ್ನು ಕೂಡ ಕೊಡಿಸಿದ್ದ ಆದರೆ ಈ ಕಿರಾತಕಿ ತನ್ನ ಪತಿಯನ್ನೇ ಕೊಂ-ದು ಇದೀಗ ಜೈಲಿನ ಊಟ ತಿನ್ನುತ್ತಿದ್ದಾಳೆ.