ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಶಂ-ಕಿ-ಸಿದ ಪುರುಷನೊಬ್ಬ ಪತ್ನಿಯ ಕ-ತ್ತು ಸೀ-ಳಿ ಜೀವ ತೆಗೆದಿದ್ದಾನೆ. ಸಾ-ವಿ-ಗೀಡಾದವರನ್ನು ಇಡುಕ್ಕಿಯ ಪೀರುಮೇಡುವಿನ ಪ್ರಿಯದರ್ಶಿನಿ ಕಾಲೋನಿಯ ನಿವಾಸಿ ರಾಜಲಕ್ಷ್ಮಿ ಎಂದು ಗುರುತಿಸಲಾಗಿದೆ. ಆಕೆಗೆ 30 ವರ್ಷ ವಯಸ್ಸಾಗಿತ್ತು. 36 ವರ್ಷದ ಆಕೆಯ ಪತಿ ರಾಜಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ರಾತ್ರಿ ಘಟನೆ ನಡೆದಿದ್ದು, ಪೋಲಿಸ್ ವಿಚಾರಣೆಯಲ್ಲಿ ಕಹಾನಿಗೆ ಟ್ವಿಸ್ಟ್ ಕೊಟ್ಟಿದ್ದಾನೆ ಆರೋಪಿ ರಾಜಾ.
ರಾಜಾ ಹಾಗೂ ರಾಜಲಕ್ಷ್ಮಿ ಆರು ವರ್ಷಗಳಿಂದ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ರಾಜಲಕ್ಷ್ಮಿ ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದ ಪತಿ ಹಾಗೂ ಮಗಳನ್ನು ಬಿಟ್ಟು ಈಗ ಜೊತೆಯಾಗಿದ್ದ ರಾಜನ ಜೊತೆಗೆ ಓಡಿಬಂದಿದ್ದಳು ಎನ್ನಲಾಗಿದೆ. ರಾಜಾ ಹಾಗೂ ರಾಜಲಕ್ಷ್ಮಿಗೂ ಕೂಡ ಆರು ವರ್ಷಗಳ ಒಂದು ಪುಟ್ಟ ಹೆಣ್ಣು ಮಗು ಇದೆ. ರಾಜಲಕ್ಷ್ಮಿಯ ಮೆಲೆ ಇತ್ತೀಚಿಗೆ ರಾಜನಿಗೆ ಅನುಮಾನ ಶುರು ಮಾಗಿತ್ತು.
ಆಕೆ ಬೇರೊಬ್ಬನ ಜೊತೆ ಸಾಂಬಂಧ ಇಟ್ಟುಕೊಂಡಿದ್ದಾಳೆ ಎನ್ನುವ ಅನುಮಾನ ಆತನಲ್ಲಿ ಬಲವಾಗಿತ್ತು. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ದಿನವೂ ರಾತ್ರಿ ಮನೆಗೆ ಕುಡಿದು ಬಂದು ಹೆಂಡತಿಯ ಜೊತೆ ಜಗಳ ಮಾಡುತ್ತಿದ್ದ. ಇವರಿಬ್ಬರ ಜಗಳ ಅಕ್ಕಪಕ್ಕದ ಮನೆಗೂ ಕೇಳಿಸುತ್ತಿತು. ಅದೇ ರೀತಿ ಬುಧವಾರವೂ ಕೂಡ ಹೆಂಡತಿಯ ಜೊತೆ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಕೊನೆಗೆ ಇಬ್ಬರ ನಡುವೆ ವಾಗ್ವಾದ ನಡೆದು ಜಗಳ ವಿಕೋಪಕ್ಕೆ ತಿರುಗಿದೆ.
ಕೋಪದ ಬರದಲ್ಲಿ ಚಾಕುವಿನಿಂದ ಪತ್ನಿ ರಾಜಲಕ್ಷ್ಮಿಯ ಕತ್ತು ಸೀ-ಳಿದ್ದಾನೆ. ರಾಜ. ತಕ್ಷಣ ರಾಜಲಕ್ಷ್ಮಿ ರ-ಕ್ತ-ದ ಮಡುವಿನಲ್ಲಿ ಬಿದ್ದಿದ್ದಾಳೆ. ಕೋಪದ ಕೈಗೆ ಬುದ್ದಿಕೊಟ್ಟು ಕೃ-ತ್ಯ ಎಸಗಿದ ಬಳಿಕ ಸ್ಥಳದಿಂದ ರಾಜಾ ಪರಾರಿಯಾಗುವ ಪ್ರಯತ್ನ ಮಾದ್ದಾನೆ. ಸ್ಥಳೀಯರ ನೆರವಿನಿಂದ ಆತನನ್ನು ಹಿಡಿಯಲಾಗಿದೆ. ಇನ್ನು ಈ ಘಟನೆ ನಡೆಯುವ ಸಮಯದಲ್ಲಿ ಆರು ವರ್ಷದ ಹೆಣ್ನು ಮಗುವೂ ಸ್ಥಳದಲ್ಲಿಯೇ ಇದ್ದು, ಅರಚಿಕೊಳ್ಳುತ್ತಿತ್ತು. ಇದನ್ನು ಕೇಳಿಯೇ ಸುತ್ತಲಿನ ಜನರೂ ಕೂಡ ಸ್ಥಳಕ್ಕೆ ಬಂದಿದ್ದಾರೆ.
ಆರೋಪಿ ರಾಜಾ ತನ್ನ ಆರು ವರ್ಷದ ಮಗಳ ಎದುರೇ ಪತ್ನಿಯನ್ನು ಕೊಂ-ದಿ-ದ್ದಾನೆ. ಪತ್ನಿಗೆ ವಿ-ವಾ-ಹೇ-ತರ ಸಂ-ಬಂ-ಧವಿದೆ ಎಂದು ರಾಜಾ ಶಂಕಿಸಿದ್ದ. ಈ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳವೂ ಕೂಡ ನಡೆಯುತ್ತಿತ್ತು. ಇದೇ ವಿಷಯಕ್ಕೆ ರಾಜಾ ಈ ಕೃ-ತ್ಯ ಎಸಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಇದೀಗ ಪೋಲಿಸರ ವಶದಲ್ಲಿ ಇರುವ ರಾಜಾ ನನ್ನು ಇನ್ನಷ್ಟು ತನಿಖೆ ಮಾಡಲಾಗುತ್ತಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಆ ಪುಟ್ಟ ಹೆಣ್ಣುಮಗಳು ಮಾತ್ರ ಅನಾಥವಾಗಿದೆ.