ಟೀಮ್ ಇಂಡಿಯಾದ ಬೆಸ್ಟ್ ಪ್ಲೇಯರ್ ಆಗಿದ್ದ ರಾಹುಲ್ ದ್ರಾವಿಡ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರನ್ನು ಕ್ರಿಕೆಟ್ (Cricket) ನಲ್ಲಿ ಮಹಾಗೋಡೆ ಎಂದೇ ಕರೆಯುತ್ತಿದ್ದರು. ಬಹುಶಃ ಕ್ರಿಕೆಟ್ ಹಿಸ್ಟರಿ ತೆಗೆದು ನೋಡಿದರೆ ರಾಹುಲ್ ದ್ರಾವಿಡ್ ಅವರಷ್ಟು ಅದ್ಭುತವಾಗಿ ಟೆಸ್ಟ್ ಮ್ಯಾಚ್ (Test Match) ಗಳನ್ನು ಆಡಿದವರು ಬೇರೆ ಯಾರು ಸಿಗಲಿಕ್ಕಿಲ್ಲ. ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ.
ರಾಹುಲ್ ದ್ರಾವಿಡ್ ಅವರು ಬೆಂಗಳೂರಿನ ದಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ತರಬೇತಿ ಕೇಂದ್ರದಲ್ಲಿ ಮಹಾರಾಷ್ಟ್ರದ ಸಂಪ್ರದಾಯಿಕ ರೀತಿಯಲ್ಲಿ ವಿಜೇತ ಪೆಂಡಾರ್ಕರ್ (Vijeta Pandarkar) ಎಂಬುವರನ್ನು 2003 ಮೇ ನಾಲ್ಕರಂದು ವಿವಾಹವಾಗಿದ್ದಾರೆ. ವಿಜೇತಾಳಿಗಿಂತ ರಾಹುಲ್ ದ್ರಾವಿಡ್ ಮೂರು ವರ್ಷ ದೊಡ್ಡವರು. ಆದರೆ ಪ್ರೀತಿಯ ವಿಷಯಕ್ಕೆ ಬಂದರೆ ಇವರಿಬ್ಬರದು ಅಗಾಧವಾದ ಪ್ರೀತಿ. ರಾಹುಲ್ ದ್ರಾವಿಡ್ ಹಾಗೂ ವಿಜೇತ ದಂಪತಿಗಳಿಗೆ ಸಮಿತ್ ಹಾಗೂ ಅನ್ವಯ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ಇನ್ನು ವಿಜೇತ ಜೊತೆ ರಾಹುಲ್ ಅವರ ನಂಟು ಬೆಸೆದುಕೊಂಡಿದ್ದು ಹೇಗೆ ಗೊತ್ತಾ? ವಿಜೇತ ಅವರ ತಂದೆಗೆ ಬೆಂಗಳೂರಿಗೆ ವರ್ಗಾವಣೆಯಾದಾಗ ವಿಜೇತ ಹಾಗೂ ರಾಹುಲ್ ಅವರ ಕುಟುಂಬ ಪರಸ್ಪರ ಭೇಟಿಯಾಗಿತ್ತು. ಅಲ್ಲಿಂದ ಮುಂದೆ ರಾಹುಲ್ ಹಾಗೂ ವಿಜೇತ ನಡುವೆ ಸ್ನೇಹದ ಸಂಬಂಧ ಆರಂಭವಾಯಿತು. ಕೊನೆಗೆ ಇಬ್ಬರು ಒಬ್ಬರನ್ನೊಬ್ಬರು ಪರಸ್ಪರ ಒಪ್ಪಿ ಮದುವೆಯಾಗುವುದಕ್ಕೆ ಮನಸ್ಸು ಮಾಡಿದರು.
ಇದಕ್ಕೆ ಮನೆಯವರ ಸಂಪೂರ್ಣ ಒಪ್ಪಿಗೆ ಇದ್ದು, 2002ರಲ್ಲಿಯೇ ಇವರ ವಿವಾಹ ನಡೆಯಬೇಕಿತ್ತು, ಆದರೆ ವಿಜೇತ ಸ್ನಾತಕೋತ್ತರ ಪದವಿಯ ಕೊನೆಯ ಹಂತದಲ್ಲಿ ಇದ್ರು. ಜೊತೆಗೆ ರಾಹುಲ್ ದ್ರಾವಿಡ್ ಕೂಡ ಐಸಿಸಿ ವಿಶ್ವ ಕಪ್ ಗಾಗಿ ತಯಾರಿ ನಡೆಸುತ್ತಿದ್ದರು ಹಾಗಾಗಿ ವೈಯಕ್ತಿಕ ಜೀವನಕ್ಕಿಂತ ಓದು ಹಾಗೂ ವೃತ್ತಿಯ ಬಗ್ಗೆ ಗಮನ ಹರಿಸಿದ ದಂಪತಿಗಳು 2003ರಲ್ಲಿ ಹಸೆಮಣೆ ಏರುತ್ತಾರೆ.
ಸ್ನಾತಕೋತ್ತರ ಪದವಿಯನ್ನು ಮುಗಿಸಿದ ವಿಜೇತ ಪೆಂಡಾರ್ಕರ್ ಇದೀಗ ವೈದ್ಯಕೀಯ ಶಸ್ತ್ರ ಚಿಕಿತ್ಸೆಯಾಗಿ ವೃತ್ತಿಯನ್ನ ಮಾಡಿದ್ದಾರೆ. ವಿಜೇತ ಅವರ ತಂದೆ ವಾಯುಪಡೆಯ ವಿಂಗ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರು. ಹಾಗಾಗಿ ವಿಜೇತ ತಮ್ಮ ಬಾಲ್ಯದ ಶಿಕ್ಷಣವನ್ನು ಬಾಲ ಭಾರತಿ ದೆಹಲಿ ಶಾಲೆಯಲ್ಲಿ ಮುಗಿಸುತ್ತಾರೆ. ನಾಗ್ಪುರದ ಶ್ರೀ ಶಿವಾಜಿ ವಿಜ್ಞಾನ ಕಾಲೇಜ್ ನಲ್ಲಿ ಸೈನ್ಸ್ ಮುಗಿಸಿ ನಂತರ ವೈದ್ಯಕೀಯ ಶಿಕ್ಷಣದ ಬಗ್ಗೆ ಗಮನಹರಿಸುತ್ತಾರೆ.
ವಿಜೇತ ಅವರು ನಾಗ್ಪುಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದು ಶಸ್ತ್ರ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸಿದರು. ಮದುವೆಯಾಗಿ ಕೆಲವು ವರ್ಷಗಳ ಬಳಿಕ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಆಟಕ್ಕೆ ಸಪೋರ್ಟ್ ಮಾಡುತ್ತಾ ತನ್ನ ಕುಟುಂಬದ ಜವಾಬ್ದಾರಿಯನ್ನ ಹೊತ್ತ ವಿಜೇತ ಮಕ್ಕಳ ಸಂಪೂರ್ಣ ಜವಾಬ್ದಾರಿ ನೋಡಿಕೊಂಡು ತಮ್ಮ ವೃತ್ತಿ ಜೀವನದಿಂದ ದೂರಾದರು.
ರಾಹುಲ್ ದ್ರಾವಿಡ್ ಹಾಗೂ ವಿಜೇತ ಇಬ್ಬರು ಒಬ್ಬರಿಗೊಬ್ಬರು ಪರಸ್ಪರ ಬಹಳ ಪ್ರೀತಿಸುತ್ತಾರೆ ಹಾಗಾಗಿ ಒಬ್ಬರಿಗೊಬ್ಬರು ಸದಾ ಸಪೋರ್ಟಿವ್ ಆಗಿ ಇರುತ್ತಾರೆ. ರಾಹುಲ್ ದ್ರಾವಿಡ್ ಅವರ ಏಳು ಬೀಳುಗಳಲ್ಲಿ ಜೊತೆಯಾಗಿ ನಿಂತ ವಿಜೇತ ಕುಟುಂಬದ ಸಂಪೂರ್ಣ ಯೋಗ ಕ್ಷೇಮವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ.
ಅದರಂತೆ, ವಿಜೇತ ಮನೆಯಲ್ಲಿ ಜವಾಬ್ದಾರಿ ವಹಿಸಿಕೊಂಡ್ರೆ ರಾಹುಲ್ ದ್ರಾವಿಡ್ ಅವರು ಸಿಪಾಯಿಯಂತೆ ಕ್ರಿಕೆಟ್ ನಲ್ಲಿ ತಮ್ಮ ಪ್ರತಿಭೆ ತೋರಿಸುವುದಕ್ಕೆ ಸಾಧ್ಯವಾಯಿತು. ರಾಹುಲ್ ದ್ರಾವಿಡ್ ಹಾಗೂ ವಿಜೇತ ಅವರ ಪರಿಪೂರ್ಣ ಕುಟುಂಬಕ್ಕೆ ನೀವು ಎಷ್ಟು ಮಾರ್ಕ್ಸ್ ಕೊಡುತ್ತೀರಿ? ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.