ಇದ್ದಕ್ಕಿದ್ದ ಹಾಗೆ ಮನೆಯಿಂದ ಆಕೆ ನಾಪತ್ತೆ ಆಗಿದ್ದಳು. ಅದರಲ್ಲೂ ಸಿ ಆರ್ ಎಫ್ ಯೋಧನ ಪತ್ನಿ ಆಗಿದ್ದಕ್ಕೆ ಮನೆಯವರು, ಜನರು ಕೂಡ ತಲೆಕೆಡಿಸಿಕೊಂಡಿದ್ದರು. ಕೊನೆಗೆ ತನಿಖೆ ಮಾಡಿದಾಗ ತಿಳಿದ ಸತ್ಯವೇ ಬೇರೆ. ಇಂಥ ಒಂದು ಕೃ-ತ್ಯ ನಡೆದಿರುವುದು ಕಾನ್ಪುರದ ಪಂಕಿ ರತನ್ಪುರ ಕಾಲೋನಿಯಲ್ಲಿ.
ಖಾನ್ಪುರ ಗ್ರಾಮದ ಭೌಪೂರ್ ಮೈತಾ ಎನ್ನುವ ಪ್ರದೇಶದ ಬಳಿ ಇರುವ ಚರಂಡಿಯಲ್ಲಿ ಮೃ-ತ ದೇಹ ಒಂದು ಪತ್ತೆಯಾಗಿತ್ತು. ಅದು ಸಿ ಆರ್ ಎಫ್ ಯೋಧನ ಪತ್ನಿಯ ಶ-ವ ಎಂದು ಪತ್ತೆಹಚ್ಚಲಾಗಿದೆ. ಆಕೆಯ ಪತಿ ರತನ್ಪುರದ ನಿವಾಸಿ ಇಂದರ್ ಪಾಲ್, ಸಿ ಆರ್ ಸಿ ಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚುನಾವಣೆಯ ಕಾರಣದಿಂದ ಅವರನ್ನು ಮೈನುಪುರಿ ಪ್ರದೇಶಕ್ಕೆ ಕರ್ತವ್ಯ ನಿರ್ವಹಣೆಗೆ ಕಳುಹಿಸಲಾಗಿತ್ತು. ಇತ್ತ ಮನೆಯಲ್ಲಿ ಆತನ ಪತ್ನಿ 34 ವರ್ಷದ ಗೀತಾದೇವಿ ಹಾಗೂ ಇಬ್ಬರು ಮಕ್ಕಳಾದ ಸುಶಾಂತ್ ಮತ್ತು ಸಿದ್ದಾರ್ಥ್ ಇದ್ದರು. ಫೆಬ್ರುವರಿ 20ನೇ ತಾರೀಕಿನಂದು ಮೈನುಪುರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದರ್ ಪಾಲ್ ಪತ್ನಿಯ ಮೊಬೈಲ್ ಗೆ ಕರೆ ಮಾಡಿದ್ದಾರೆ.
ಅವರು ಅದು ಎಷ್ಟೇ ಕರೆ ಮಾಡಿದರು ಆಕೆ ಸ್ವೀಕರಿಸಲಿಲ್ಲ ಇದರಿಂದ ಯಾವುದೋ ಅಹಿತಕರ ಘಟನೆ ನಡೆದಿರುವುದು ಬಗ್ಗೆ ಪಂಕಿ ಪೊಲೀಸರಿಗೆ ಇಂದೋರ್ ಪಾಲ್ ಮಾಹಿತಿ ನೀಡಿದ್ದರು. ಪೊಲೀಸರು ಇಂದರ್ ಪಾಲ್ ಹೇಳಿಕೆಯಂತೆ ಅವರ ಮನೆಗೆ ಬಂದು ನೋಡಿದರೆ ಅಲ್ಲಿ ಆತನ ಪತ್ನಿ ಇರಲಿಲ್ಲ. ಇನ್ನು ಮನೆಯಲ್ಲಿ ಬಿಯರ್ ಕ್ಯಾನ್ ಗಳು, ಗ್ಲಾಸ್, ಮತ್ತಿತರ ಸಾಕ್ಷಾಧಾರಗಳು ಲಭ್ಯವಾಗಿವೆ.
ನಂತರ ಫೆಬ್ರುವರಿ 21ರಂದು ವಾಪಸ್ ಬಂದ ಇಂದರ್ ಪಾಲ್ ಪೊಲೀಸರಿಗೆ ಕಂಪ್ಲೇಂಟ್ ನೀಡುತ್ತಾರೆ.. ಕೊನೆಗೆ ಪೊಲೀಸರು ಆ ಮಹಿಳೆಯ ಮೊಬೈಲ್ ಪರಿಶೀಲಿಸಿದಾಗ ಕೊನೆಯ ಕರೆ ಮೆಕಾನಿಕ್ ಮುಖ್ತಾರ್ ಎನ್ನುವ ಹೆಸರಿನಿಂದ ಬಂದಿತ್ತು. ಆತನನ್ನು ವಶಪಡಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಭಯಾನಕ ಸತ್ಯ ಹೊರ ಬಿದ್ದಿದೆ.
ತನಗೂ ಹಾಗೂ ಗೀತಳಿಗೂ ಪ್ರೇಮ ಸಂಬಂಧವಿತ್ತು ಎಂದು ಮುಖ್ತಾರ್ ಹೇಳಿದ್ದಾನೆ. ಗೀತಾ ಇತ್ತೀಚಿಗೆ ಬೇರೆಯವರ ಜೊತೆ ಮಾತನಾಡುತ್ತಿದ್ದಳು ಇದನ್ನ ಸಹಿಸದಾದ ಮುಖ್ತಾರ್ ಆಕೆಯನ್ನು ಘಟನೆ ನಡೆದ ದಿನ ಸಂಜೆ ಕಾರಿನಲ್ಲಿ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊ-ಲೆ ಮಾಡಿದ್ದು ಅಲ್ಲದೆ ಆಕೆಯ ಮೃ-ತ ದೇಹವನ್ನು ಚರಂಡಿಗೆ ಎಸೆದಿದ್ದಾನೆ. ಪೊಲೀಸರು ಶವವನ್ನು ಹೊರ ತೆಗೆದು ತನಿಖೆ ನಡೆಸಿದ್ದಾರೆ.
ಗೀತಾಳನ್ನು ಹ-ತ್ಯೆ ಮಾಡಿದ ಮುಖ್ತಾರ್ ಆಕೆಯ ಮದುವೆಗಿಂತಲೂ ಮೊದಲೇ ಆಕೆಯ ಜೊತೆಗೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದ. ಇನ್ನು ಪತಿ ಡ್ಯೂಟಿಗೆ ಹೋದಾಗಲೆಲ್ಲ ಗೀತಾ ಜೊತೆಗೆ ದೈ-ಹಿ-ಕ ಸಂಬಂಧ ಕೂಡ ಇಟ್ಟುಕೊಂಡಿದ್ದ. ಇತ್ತೀಚೆಗೆ ಗಂಗಾ ಗಂಜ್ ನಲ್ಲಿ ವಾಸವಾಗಿದ್ದ ಪ್ರಾಪರ್ಟಿ ಡೀಲರ್ ಪುಷ್ಪೇಂದ್ರ ಸಿಂಗ್ ಜೊತೆನೂ ಗೀತಾ ಮಾತನಾಡುತ್ತಿದ್ದಳು.
ಅಪ್ಪ ಮನೆಯಲ್ಲಿ ಇಲ್ಲದೆ ಇದ್ದಾಗ ಈ ಪುಷ್ಪೇಂದ್ರ ಸಿಂಗ್ ಹಾಗೂ ಮುಖ್ತಾರ್ ಆಗಾಗ ಮನೆಗೆ ಬರುತ್ತಿದ್ದರು ಎಂದು ಗೀತಾಳ ಮಕ್ಕಳು ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಗೀತಾಳ ಹ-ತ್ಯೆಗೆ ಸಂಬಂಧ ಪಟ್ಟ ಹಾಗೆ ಆಕೆಯ ಹಿರಿಯ ಮಗ ಪೊಲೀಸರಿಗೆ ತಿಳಿಸಿರುವ ಪ್ರಕಾರ ಮುಖ್ತಾರ್ ಗೀತಾಳನ ಕರೆದುಕೊಂಡು ಹೋದ ಕಾರಿನಲ್ಲಿ ಆತನನ್ನು ಹೊರತುಪಡಿಸಿ ಇನ್ನೂ ಇಬ್ಬರು ಇದ್ದರು ಎಂದು ತಿಳಿದು ಬಂದಿದೆ. ಅವರನ್ನು ಪತ್ತೆಹಚ್ಚಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.