PhotoGrid Site 1672803255323

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ ನಟಿ ಪೂಜಾ ಹೆಗ್ಡೆ ಡಾನ್ಸ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ! ಅಬ್ಬಬ್ಬಾ ಹೇಗಿದೆ ಗೊತ್ತಾ?

News

Pooja Hegde: ತೆಲುಗು ಸ್ಟಾರ್ ನಟಿ (Star actress) ಪೂಜಾ ಹೆಗ್ಡೆ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಬ್ಬ ಮಾಡೆಲ್ ಆಗಿ ಮಿಸ್ ಯೂನಿವರ್ಸ್ (Miss universe India runner up) ರನ್ನರ್ ಅಪ್ ಪಟ್ಟವನ್ನ ಗಿಟ್ಟಿಸಿಕೊಂಡ ಪೂಜಾ ಹೆಗ್ಡೆ ಇದೀಗ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ.

ತೆಲುಗು ತಮಿಳು ಹಿಂದಿ ಮೊದಲಾದ ಭಾಷೆಗಳಲ್ಲಿ ಅಭಿನಯಿಸುತ್ತಿರುವ ಪೂಜಾ ಹೆಗ್ಡೆ ಮುಂಬೈನಲ್ಲಿ 1990ರಲ್ಲಿ ಜನಿಸಿದ್ದಾರೆ. ಮೂಲತಃ ಕರಾವಳಿಯವರು. ಮಿಸ್ ಯೂನಿವರ್ಸ್ ರನ್ನರ್ ಅಪ್ ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡ ನಟಿ ಪೂಜಾ ಹೆಗ್ಡೆ ತಮ್ಮ ವೃತ್ತಿ (career) ಜೀವನವನ್ನು ಮಾಡಲಿಂಗ್ (Modelling) ಮೂಲಕವೇ ಆರಂಭಿಸಿದರು.

ನಂತರ ಪೂಜಾ ಹೆಗ್ಡೆ 2012ರಲ್ಲಿ ತಮಿಳಿನ ಮುಗಮೂಡು ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ರು. ಇದಾದ ನಂತರ ಪೂಜಾ ಹೆಗ್ಡೆ, ಬಾಲಿವುಡ್ (Bollywood) ನಲ್ಲಿ ಹೃತಿಕ್ ರೋಷನ್ (Hrithik Roshan) ಅವರ ಜೊತೆಗೆ ಮಹೆಂಜೋದಾರೋ ಏನು ಸಿನಿಮಾದಲ್ಲಿ ಅಭಿನಯಿಸಿದ್ರು. ಈ ಸಿನಿಮಾ ಅಷ್ಟು ಹಿಟ್ ಕಾಣದೇ ಇದ್ದರೂ ಪೂಜಾ ಹೆಗ್ಡೆಡೆ ಮಾತ್ರ ಬಹು ಬೇಡಿಕೆಯ ನಟಿ ಎನಿಸಿದರು.

ಇದಾದ ಬಳಿಕ ಅಕ್ಕಿನೇನಿ ನಾಗಚೈತನ್ಯ ಅವರ ಜೊತೆ ಒಕ ಲೈಲಾ ಕೋಸಂ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಈ ಸಿನಿಮಾದ ಮೂಲಕ ಪೂಜಾ ಹೆಗ್ಡೆ ಅವರಿಗೆ ಅವಕಾಶಗಳು ಅರಸಿಕೊಂಡು ಬರುತ್ತವೆ. ಈ ಸಿನಿಮಾದ ನಟನೆಯ ಬಳಿಕ ಪೂಜಾ ಅವರಿಗೆ ತೆಲುಗಿನಲ್ಲಿ ಸಿನಿಮಾ ಅವಕಾಶಗಳು ಅರಸಿಕೊಂಡು ಬರುತ್ತವೆ. ಇದೀಗ ತೆಲುಗಿನ ಸ್ಟಾರ್ ನಟಿ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆದು ಪೂಜಾ ಹೆಗ್ಡೆ ಮುಂಚೂಣಿಯಲ್ಲಿ ಇದ್ದಾರೆ.

ಸಾಮಾನ್ಯವಾಗಿ ಪೂಜಾ ಹೆಗ್ಡೆ ನಟಿಸಿರುವ ಇವರೆಗಿನ ಎಲ್ಲಾ ಚಿತ್ರಗಳು ಬಿಗ್ ಬಜೆಟ್ ಚಿತ್ರಗಳೆ ಆಗಿವೆ. ಏನು ಬಾಲಿವುಡ್ ನಲ್ಲಿ ಕೂಡ ನಟಿ ಪೂಜಾ ಹೆಗ್ಡೆ ಸಕ್ರಿಯರಾಗಿದ್ದಾರೆ. ಇದೀಗ ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಎನಿಸಿಕೊಂಡಿರುವ ಸಲ್ಮಾನ್ ಖಾನ್ ಅವರ ಜೊತೆ ಪೂಜಾ ಹೆಗ್ಡೆ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ ಜೊತೆಗೆ ಇವರಿಬ್ಬರ ನಡುವೆ ಗಾಸಿಪ್ ಗಳು ಕೂಡ ಹುಟ್ಟಿಕೊಂಡಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್! ಇವರೇ ನೋಡಿ ಹಾಸ್ಯ ನಟನ ಮನಗೆದ್ದ ಹುಡುಗಿ!!

ಇನ್ನು ಪೂಜಾ ಹೆಗ್ಡೆ ಅವರ ಇನ್ನಷ್ಟು ಸಿನಿಮಾಗಳನ್ನ ನೋಡುವುದಾದರೆ, ನಟ ವಿಜಯ್ ಅವರ ಜೊತೆಗೆ ಬೀಸ್ಟ್, ರಣವೀರ್ ಸಿಂಗ್ ಜೊತೆಗೆ ಹಾಸ್ಯ ಚಿತ್ರ ಸರ್ಕಸ್ , ಪ್ರಭಾಸ್ ಜೊತೆಗಿನ ರೋಮ್ಯಾಂಟಿಕ್ ಬಹುಭಾಷಾ ಚಿತ್ರ ರಾಧೆ ಶ್ಯಾಮ್, ಅಖಿಲ್ ಅಕ್ಕಿನೇನಿ ಜೊತೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಮತ್ತು ರಾಮ್ ಚರಣ್ ತೇಜಾ ಜೊತೆ ಆಚಾರ್ಯ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಪೂಜಾ ಹೆಗ್ಡೆ ಅಭಿನಯದ ಸಿನಿಮಾಗಳು ಇತ್ತೀಚಿಗೆ ಸೋಲುತ್ತಿವೆ.

ಆದರೆ ಇದಕ್ಕೆ ಪೂಜಾ ಹೆಗ್ಡೆ ಅವರ ಬೇಡಿಕೆಯಾಗಲಿ ಅಥವಾ ಅವರ ಚಾರ್ಮ್ ಆಗಲಿ ಕಡಿಮೆ ಆಗಿಲ್ಲ. ಸಲ್ಮಾನ್ ಖಾನ್ (Samlam Khan) ಜೊತೆ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ (2023) ನಲ್ಲಿಯೂ ಬಣ್ಣ ಹಚ್ಚಿದ್ದಾರೆ. ವಿಜಯ್ ಅವರ ಜೊತೆಗೆ ಬೀಸ್ಟ್ ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಅದರಲ್ಲಿಯೂ ಹಬೀಬೋ ಎನ್ನುವ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ಇತ್ತೀಚಿಗೆ ಈ ಸಿನಿಮಾದ ಹಾಡಿನ ಪ್ರಾಕ್ಟೀಸ್ ಸಮಯದಲ್ಲಿ ಪೂಜಾ ಹೆಗ್ಡೆ ನೃತ್ಯದ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿಕೊಂಡಿದೆ.

Leave a Reply

Your email address will not be published. Required fields are marked *