ಸ್ನೇಹಿತರೆ ಭಾರತಕ್ಕೆ ಎರಡನೇ ಅಲೆಯಾಗಿ ದಿನೇ ದಿನೇ ಹೆಚ್ಚಾಗಿ ಹಬ್ಬುತ್ತಿರುವ ಮಹಾಮಾರಿ ಕೊರೋಣಗೆ ಅದೆಷ್ಟು ಜನರ ಜೀವಗಳನ್ನು ಬಲಿ ಪಡೆದಿದೆ ಲೆಕ್ಕಕ್ಕೆ ಇಲ್ಲ. ಭಾರತದಲ್ಲಿ ಈ ಮಟ್ಟಕ್ಕೆ ಕೋರೋಣ ಹಬ್ಬುತ್ತದೆ ಎಂದು ಯಾರು ಸಹ ಊಹಿಸಿರಲಿಲ್ಲ ಅಷ್ಟರ ಮಟ್ಟಿಗೆ ಕೋರೋಣ ಹಬ್ಬುತ್ತಿದೆ. ಕೋರೋಣದಿಂದ ಅದೆಷ್ಟು ಜನ ತಮ್ಮ ಕುಟುಂಬದವರನ್ನು ಕಳೆದುಕೊಂಡು ದುಃಖ ಅನುಭವಿಸುತ್ತಿದ್ದಾರೆ ಲೆಕ್ಕವೇ ಇಲ್ಲ. ಪಬ್ಲಿಕ್ ಟಿವಿ ಶುರುವಿನಿಂದಲು ಅದರಲ್ಲಿ ನಿರೂಪಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅರುಣ್ ಬಡಿಗೇರ್ ಅವರಿಗೆ ಕೋರೋಣ ದೊಡ್ಡ ಪೆಟ್ಟನ್ನೆ ಕೊಟ್ಟಿದೆ. ಹೌದು ಸ್ನೇಹಿತರೆ ಕೋರೋಣದಿಂದ ನಿರೂಪಕ ಅರುಣ್ ಬಡಿಗೇರ್ ಅವರ ತಂದೆ ತಾಯಿ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಅರುಣ್ ಅವರ ದುಃಖ ಊಹಿಸಲು ಸಾಧ್ಯವಿಲ್ಲ.
ಇನ್ನು ಅದೆಷ್ಟೋ ಜನ ತಮ್ಮ ಹೆಂಡತಿ, ಅಮ್ಮ,ಅಪ್ಪ,ಮಕ್ಕಳನ್ನು ಕಳೆದುಕೊಂಡು ರೋದಿಸುತ್ತಿರುವ ಸಾಕಷ್ಟು ವೀಡಿಯೊಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇವೆ. ಕೋರೋಣ ತಡೆಯಲು ಲಸಿಕೆ ಅತ್ಯಗತ್ಯವಾಗಿ ಹಾಕಿಸಿಕೊಳ್ಳಲು ಸರ್ಕಾರ ಆದೇಶ ಪಡಿಸಿದೆ. ಹೌದು ಕೋರೋಣ ಲಸಿಕೆ ಹಾಕಿಸಿಕೊಳ್ಳುವುದರಿಂದ ನಿಮಗೆ ಮರಳಿ ಕೋರೋಣ ಬರಬಹುದು, ಆದರೆ ಇದರಿಂದ ನಿಮ್ಮ ಜೀವಕ್ಕೆ ಆಗುವ ಹಾನಿಯನ್ನು ಖಂಡಿತಾ ತಪ್ಪಿಸಬಹುದು.
ಆದ್ದರಿಂದ ಪ್ರತಿಯೊಬ್ಬರು ಕೋರೋಣ ಲಸಿಕೆ ಪಡೆಯುವುದು ಉತ್ತಮ. ಇದರಿಂದ ನಮ್ಮ ಕುಟುಂಬವನ್ನು ಕೋರೋಣ ಇಂದ ನಾವು ಕಾಪಾಡಿಕೊಳ್ಳಬಹುದು. ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ ಇದರಿಂದ ನಿಮ್ಮ ಮೇಲೆ ತಕ್ಷಣ ಕೋರೋಣ ಪರಿಣಾಮ ಬೀರದೆ ಇದ್ದರೂ ದಿನೇ ದಿನೇ ಹೆಚ್ಚುತ್ತದೆ. ಇನ್ನು ನಿಮ್ಮಿಂದ ನಿಮ್ಮ ಕುಟುಂಬದ ಮಧ್ಯ ವಯಸ್ಸಿನವರಿಗೆ ಕೋರೋಣ ಹಬ್ಬಿದರೆ ಕೂಡಲೇ ಅವರ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಪ್ರತಿಯೊಬ್ಬ ಭಾರತೀಯರು ಲಸಿಕೆ ಪಡೆದು ನಮ್ಮ ದೇಶಕ್ಕೆ ವಕ್ಕರಿಸಿರುವ ಕೋರೋಣವನ್ನು ಓಡಿಸಲು ಸರ್ಕಾರಕ್ಕೆ ನೇರವಾಗಿ ಪ್ರತಿಯೊಬ್ಬರು ನಿಲ್ಲೋಣ.