ಕನ್ನಡದಲ್ಲಿ ಇವರಿಗೆ ಬೇರೆ ಭಾಷೆಯಿಂದ ಸಾಕಷ್ಟು ಜನ ನಟಿಯರು ಬಂದಿದ್ದಾರೆ. ಕೆಲವರು ಕನ್ನಡದಲ್ಲಿ ಬಂದು ಅಭಿನಯಿಸಿ (Actress) ವಾಪಸ್ ಹೋಗಿದ್ರೆ ಇನ್ನು ಕೆಲವರು ಇಲ್ಲಿಗೆ ಇದ್ದು, ಕನ್ನಡಿಗರೇ ಆಗಿ ಹೋಗಿದ್ದಾರೆ. ಕನ್ನಡದ ಹುಡುಗನನ್ನೇ ಮದುವೆಯಾಗಿ ಕನ್ನಡ ಸಿನಿಮಾಗಳ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ನಟಿಯರಲ್ಲಿ ಪ್ರಿಯಾಂಕ ಉಪೇಂದ್ರ (Priyanka Upendra) ಹೆಸರು ಈ ಲಿಸ್ಟ್ ನಲ್ಲಿ ಮೊದಲಿಗೆ ಕಣ್ಮುಂದೆ ಬರತ್ತೆ.
ಪ್ರಿಯಾಂಕ ಉಪೇಂದ್ರ (Upendra) h2o ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ಅಭಿನಯಿಸಿದ್ರು. ನಂತರ ಪ್ರಿಯಾಂಕ ಉಪೇಂದ್ರ ಕನ್ನಡದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದು ರವಿಚಂದ್ರನ್ (Ravichandran) ಅವರ ಜೊತೆಗೆ ಮಲ್ಲ (Malla) ಸಿನಿಮಾದಲ್ಲಿ ಅಭಿನಯಿಸಿದ ನಂತರ. ಹೌದು ಮಲ್ಲ ಸಿನಿಮಾದಲ್ಲಿ ಸಕ್ಕತ್ ಗ್ಲಾಮರಸ್ ಆಗಿ ಪ್ರಿಯಾಂಕ ಉಪೇಂದ್ರ ಅವರು ಕಾಣಿಸಿಕೊಂಡಿದ್ದರು.
ಇದಾದ ಬಳಿಕ ಹಲವಾರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಸಿನಿಮಾದಲ್ಲಿ ಪರಿಚಿತರಾದ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಮದುವೆ ಆಗಿ ಇದೀಗ ಇಬ್ಬರು ಮಕ್ಕಳ ತಾಯಿ ಪ್ರಿಯಾಂಕ ಉಪೇಂದ್ರ. ಆದರೆ ಮದುವೆಯಾದ ನಂತರ ಸಿನಿಮಾ ರಂಗದಿಂದ ಮಾತ್ರ ಪ್ರಿಯಾಂಕಾ ದೂರ ಸರಿದಿಲ್ಲ ಈಗಲೂ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾ (Film) ಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡ ಮಾತ್ರವಲತೆ ಬೇರೆ ಭಾಷೆಯಲ್ಲಿಯೂ ಕೂಡ ಪ್ರಿಯಾಂಕ ಬಣ್ಣ ಹಚ್ಚಿದ್ದಾರೆ ಈಗಲೂ ಕೂಡ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.
ಪ್ರಿಯಾಂಕ ಉಪೇಂದ್ರ ಅವರ ಬಗ್ಗೆ ಸಣ್ಣ ಪರಿಚಯ ಹೇಳುವುದಾದರೆ ಅವರು ಜನಿಸಿದ್ದು ಕೋಲ್ಕತ್ತಾದಲ್ಲಿ. ಪಕ್ಕಾ ಬಂಗಾಳಿ ಕುಟುಂಬದ ಹುಡುಗಿ ಈಕೆ. ಬಂಗಾರ ಬೆಡಗಿ ಪ್ರಿಯಾಂಕಾ ಮಾಡಲಿಂಗ್ ನಲ್ಲಿ ಕೂಡ ಹೆಚ್ಚು ಆಸಕ್ತಿ ಹೊಂದಿದ್ರು 1996ರಲ್ಲಿ ಮಿಸ್ ಕೊಲ್ಕತ್ತಾ (Kolkata) ಆಗಿ ಕೂಡ ಕಿರೀಟ ಮುಡಿಗೇರಿಸಿಕೊಂಡವರು ಪ್ರಿಯಾಂಕಾ. ಕನ್ನಡ, ತಮಿಳು, ತೆಲುಗು, ಬಂಗಾಳಿ ಮೊದಲಾದ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.
ಅನೇಕ ಸಿನಿಮಾದಲ್ಲಿ ನಾಯಕಿ ಮಾತ್ರವಲ್ಲದೆ ನಿರ್ಮಾಪಕಿ (Producer) ವಾಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಪ್ರಿಯಾಂಕ ಅವರು ಮಿಸ್ ನಂದಿನಿ, ದೇವಕಿ, ಸೆಕೆಂಡ್ ಹಾಫ್, ಖೈಮರ, 1980, ಪ್ರಿಯಾಂಕ, ಮಮ್ಮಿ ಸೇವ್ ಮಿ, ಶ್ರೀಮತಿ, ರೌಡಿ ಅಳಿಯ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಅತ್ಯುತ್ತಮ ಅಭಿನೇತ್ರಿ ಎನಿಸಿಕೊಂಡಿದ್ದಾರೆ.
ಲಾಕ್ ಡೌನ್ (Lock Down) ಸಮಯದ ನಂತರ ಪ್ರಿಯಾಂಕ ಅಭಿನಯದ 1980 ಸಿನಿಮಾ ಓಟಿಟಿಯಲ್ಲಿ ಬಿಡುಗಡೆಗೊಂಡಿತ್ತು. ಈ ಸಿನಿಮಾದ ನಿರ್ದೇಶಕ ಜೆ ರಾಜ ಕಿರಣ್. ಒಂದು ರೆಟ್ರೂ ಲುಕ್ ನಲ್ಲಿ ಪ್ರಿಯಾಂಕ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಇದು ಕಾಲ್ಪನಿಕ ಕಥೆಯಾಗಿದ್ದರು ಅದ್ಭುತ ನಿರೂಪಣ ಶೈಲಿ ಈ ಸಿನಿಮಾದಲ್ಲಿ ಕಾಣಿಸುತ್ತೆ. ಬಿಳಿ ತೆರೆಯ ಮೇಲೆ ಈ ಚಿತ್ರ ಬಿಡುಗಡೆ ಆಗಬೇಕಿತ್ತು ಆದರೆ ಕಾರಣಾಂತರಗಳಿಂದ ಈ ಸಿನಿಮಾ ಓಟಿಟಿ (OTT) ಎಲ್ಲಿ ರಿಲೀಸ್ ಆಗಿತ್ತು. ಇನ್ನು ಈ ಸಿನಿಮಾದ ರಿಲೀಸ್ ಸಮಯದಲ್ಲಿ ಕಿಚ್ಚ ಸುದೀಪ್ (Kichha Sudeep) ಪ್ರಿಯಾಂಕ ಹಾಗೂ ಉಪೇಂದ್ರ ಅವರಿಗೆ ಸಾತ್ ನೀಡಿದ್ದರು.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುರಳಿ ಮಾಧವ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಅನ್ನು ಜನ ಬಹುವಾಗಿ ಮೆಚ್ಚಿದ್ದರು. ಇದೀಗ ಮತ್ತೆ ಇದೆ ಜೋಡಿ ಕಬ್ಜ ಸಿನಿಮಾದ ಮೂಲಕ ಜನರನ್ನ ಆರಂಭಿಸಲು ಬರುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಬ್ಜಾ ಇನ್ನೇನು ರಿಲೀಸ್ ಆಗಲಿದೆ.
ಇನ್ನು 1980 ಸಿನಿಮಾದ ಪತ್ರಿಕಾಗೋಷ್ಠಿಯ ಸಮಯದಲ್ಲಿ ಪ್ರಿಯಾಂಕ ಒಂದು ಅಚ್ಚರಿ ವಿಚಾರವನ್ನು ಹೇಳಿದ್ದಾರೆ. “ನನಗೆ ವೈಯಕ್ತಿಕವಾಗಿ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಇಬ್ಬರ ಕಾಂಬಿನೇಷನ್ ನ ಸಿನಿಮ ನೋಡೋದು ಅಂದ್ರೆ ಇಷ್ಟ ನಾನು ಕಿಚ್ಚ ಸುದೀಪ್ ಅವರ ಫ್ಯಾನ್ ಕೂಡ ಹೌದು. ಮುಂಬರುವ ದಿನಗಳಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಸೇರಿ ಸಿನಿಮಾ ಮಾಡುವ ಬಹು ನಿರೀಕ್ಷೆ ಇದೆ” ಎಂಬುದಾಗಿ ಪ್ರಿಯಾಂಕ ಉಪೇಂದ್ರ ತಿಳಿಸಿದ್ದಾರೆ. ಹಾಗಾಗಿ ಪ್ರಿಯಾಂಕ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಇವರಿಬ್ಬರೂ ಸಿನಿಮಾರಂಗದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಮೂಡಿರುವ ಕುತೂಹಲ.