ಸಿನಿಮಾ ರಂಗದಲ್ಲಿ ಬಾಡಿ ಶೇವಿಂಗ್ ಹಾಗೂ ಕಾಸ್ಟಿಂಗ್ ಕೌಚ್ ಬಹುತೇಕ ಎಲ್ಲಾ ನಟಿಯರು ಒಳಗಾಗಿರುತ್ತಾರೆ. ಅದರಲ್ಲೂ ಸ್ಟಾರ್ ನಟಿಯರು ಕೂಡ ಇಂತಹ ಸಮಸ್ಯೆಗಳನ್ನು ಅನುಭವಿಸಿದ್ದರು ಅಂದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಈಗಾಗಲೇ ಸಾಕಷ್ಟು ನಟಿಯರು ತಮಗೆ ಸಿನಿಮಾರಂಗದಲ್ಲಿ ಆದ ಅನುಭವಗಳನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. ಇದೀಗ ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಕೂಡ ಬಾಡಿ ಶೇವಿಂಗ್ ನಿಂದ ತಾನು ಅನುಭವಿಸಿದ ನೋವಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಬಾಲಿವುಡ್ ನಲ್ಲಿ ಪ್ರಿಯಾಂಕ ಚೋಪ್ರಾ ಅವರು ಸಾಕಷ್ಟು ಸಿನಿಮಾಗಳನ್ನ ಮಾಡಿ ಹೆಸರು ಮಾಡಿದ್ದಾರೆ ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ ನಲ್ಲಿಯೂ ಕೂಡ ಪ್ರಿಯಾಂಕ ಚೋಪ್ರಾ ಅವರು ಬೇಡಿಕೆಯ ನಟಿ ಆಗಿದ್ದಾರೆ. ದಕ್ಷಿಣ ಏಷ್ಯಾ ಸಭೆಯಲ್ಲಿ ಮಾತನಾಡಿದ ಅವರು ತಮಗೆ ಬಾಡಿ ಶೇಮಿಂಗ್ ಆಗಿರುವ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ನಾನು ಸಿನಿಮಾ ರಂಗಕ್ಕೆ ಬಂದಾಗ ಸ್ವಲ್ಪ ದಪ್ಪವಾಗಿದೆ ನನ್ನ ಮೈಬಣ್ಣ ಕಪ್ಪು.
ಈ ಕಾರಣಕ್ಕೆ ನಾನು ತುಂಬಾನೇ ಅವಮಾನ ಎದುರಿಸಿದ್ದೇನೆ. ಬಾಡಿ ಶೇವಿಂಗ್ ಅನುಭವಿಸಿದ್ದೇನೆ. ನನ್ನನ್ನು ಪ್ರಾಣಿಗೆ ಹೋಲಿಕೆ ಮಾಡುತ್ತಿದ್ದರು. ನಾನು ಕಪ್ಪಾಗಿದ್ದೇನೆ ಎನ್ನುವ ಕಾರಣಕ್ಕೆ ಕರಿಬೆಕ್ಕು ಎಂದೇ ಕರೆಯುತ್ತಿದ್ದರು. ನನ್ನ ಮೈಬಣ್ಣ ಹಾಗೂ ತೂಕವನ್ನು ಆಯುಧವನ್ನಾಗಿ ಬಳಸಿಕೊಂಡರು. ಇದರಿಂದ ನನಗೆ ಬಹಳ ನೋವಾಗಿತ್ತು. ನಾನು ಸಾಕಷ್ಟು ಬಾರಿ ಅತ್ತಿದ್ದೇನೆ. ಎಂಬುದಾಗಿ ಪ್ರಿಯಾಂಕಾ ಚೋಪ್ರಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪ್ರಿಯಾಂಕ ಚೋಪ್ರಾ ಅವರು ಹೇಳಿದ ಮಾತು ಕೇಳಿದರೆ ಇದು ಸಿನಿಮಾ ಉದ್ಯಮದಲ್ಲಿ ಇರುವಂತಹ ಅತಿ ದೊಡ್ಡ ಸಮಸ್ಯೆಯನ್ನು ತೋರಿಸುತ್ತದೆ. ಇಂದು ಯಶಸ್ಸಿನ ಉತ್ತುಂಗದಲ್ಲಿ ಇರುವ ಪ್ರಿಯಾಂಕಾ ಚೋಪ್ರಾ ಕೂಡ ತಮ್ಮ ದೇಹದ ತೂಕ ಹಾಗೂ ಮೈಬಣ್ಣದ ಕಾರಣಕ್ಕೆ ಅತಿಯಾದ ಅವಮಾನವನ್ನ ಎದುರಿಸಬೇಕಾಗಿತ್ತು. ಇಲ್ಲಿ ಪ್ರತಿಭೆಗಿಂತ ನೋಟಕ್ಕ್ ಎಷ್ಟು ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂಬುದನ್ನ ನೀವು ಗಮನಿಸಬಹುದು.
ಬಾಡಿ ಶೇಮಿಂಗ್ ಇರಬಹುದು ಅಥವಾ ಕಾ-ಸ್ಟಿಂಗ್ ಕೌಚ್ ಇರಬಹುದು ಇದು ಬಾಲಿವುಡ್ ಮಾತ್ರವಲ್ಲ ಇತರ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಕೂಡ ನಡೆದಿದೆ. ಬಾಡಿ ಶೆ-ಮಿಂಗ್ ಕಾರಣಕ್ಕೆ ಈಗಾಗಲೇ ಅದೆಷ್ಟೋ ನಟಿಯರು ಆಪರೇಷನ್ ಮಾಡಿಕೊಳ್ಳುವುದರ ಮೂಲಕ ತಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಪ್ರತಿಭೆಗೆ ಮಾತ್ರ ಹೆಚ್ಚು ಮಹತ್ವವನ್ನು ಕೊಡುವ ದಿನ ಅದ್ಯಾವಾಗ ಬರುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿನಿಮಾರಂಗದಲ್ಲಿ ಇರಬೇಕು ಅಂದ್ರೆ ಹೀರೋಯಿನ್ ಗಳು ತಮ ಫಿಗರ್ ಬಗ್ಗೆ ಹೆಚ್ಚಿನ ಗಮನ ನೀಡಲೇಬೇಕು ಎನ್ನುವಂತಹ ಸ್ಥಿತಿ ಇದೆ.