ಸಿನಿಮಾ ನಟಿಯರು ಅಂದ್ರೆ ಹೇಗೆ ಜನರಿಗೆ ಕ್ರೇಜ್ ಇರುತ್ತೋ ಹಾಗೆ ಸಿನಿಮಾನಟೀಯರು ಕಾಂಟ್ರವರ್ಸಿ ಆಗೋದು ಕೂಡ ಹೆಚ್ಚು ತಾವು ನೀಡುವ ಹೇಳಿಕೆಗಳ ಮೂಲಕ ಸಾಕಷ್ಟು ಸುದ್ದಿ ಆಗುತ್ತಾರೆ ಸಿನಿಮಾ ತಾರೆಯರು. ಅದರಲ್ಲೂ ಕೆಲವರಂತೂ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಹೆಚ್ಚಾಗಿ ಕಾಂಟ್ರವರ್ಸಿ ಮೂಲಕವೇ ಸುದ್ದಿಯಾಗುವುದು ಹೆಚ್ಚು. ಬಾಲಿವುಡ್ ನಟಿಯರ ಸಾಕಷ್ಟು ಹೇಳಿಕೆಗಳು ಇದುವರೆಗೆ ತುಂಬಾ ಟ್ರೋಲ್ ಆಗಿವೆ.
ಸಿನಿಮಾ ಸುಂದರಿಯರು ನೀಡುತ್ತಿರುವ ಕೆಲವು ಹೇಳಿಕೆಗಳು ಜನರು ಹೆಚ್ಚು ಹೆಚ್ಚು ಅವರ ಬಗ್ಗೆ ಮಾತನಾಡುವಂತೆ ಮಾಡುತ್ತಿವೆ. ಅದರಲ್ಲೂ ಇತ್ತೀಚಿಗೆ ನಟಿ ಪ್ರಿಯ ಆನಂದ ನೀಡಿರುವ ಒಂದು ಹೇಳಿಕೆ ಇಡೀ ರಾಜ್ಯದಲ್ಲಿಯೇ ಸಂಚಲನ ಮೂಡಿಸಿದೆ. ಹೌದು ನಟಿ ಪ್ರಿಯಾ ಆನಂದ್ ಹೇಳಿದ್ದು ಅಂತಿಂಥ ಹೇಳಿಕೆಯಲ್ಲ ಇಡೀ ರಾಜ್ಯದಲ್ಲಿ ಒಂದು ಕಾಲದಲ್ಲಿ ಸನ್ಸೆಷನ್ ಆಗಿದ್ದ ವ್ಯಕ್ತಿಯ ಬಗ್ಗೆ.
ಹೌದು ಸ್ನೇಹಿತರೆ ನಟಿ ಪ್ರಿಯ ಆನಂದ್ ತಾನು ಮದುವೆಯಾಗುವ ವಿಚಾರದ ಬಗ್ಗೆ ಹಾಗೂ ನನ್ನನ್ನ ಮದುವೆಯಾಗುವ ಹುಡುಗ ಹೀಗೆ ಇರಬೇಕು ಎನ್ನುವ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ತಮಾಷೆಯ ಹೇಳಿಕೆಯು ಆಗಿರಬಹುದು. ಆದರೆ ಜನರು ಹುಬ್ಬೇರಿಸುವಂತೆ ಮಾಡಿದ್ದಂತು ಸತ್ಯ. ನಟಿ ಪ್ರಿಯ ಆನಂದ್ ತಮಿಳು ತೆಲುಗು ಹಿಂದಿ ಮಲಯಾಳಂ ಹಾಗೂ ಕನ್ನಡದಲ್ಲಿಯೂ ನಟಿಸಿ ಪಂಚಭಾಷೆ ತಾರೆ ಎನಿಸಿಕೊಂಡಿದ್ದಾರೆ.
ಪುನೀತ್ ರಾಜಕುಮಾರ್ ಅವರ ಜೊತೆ ರಾಜಕುಮಾರ, ಜೇಮ್ಸ್ ಸಿನಿಮಾಗಳಲ್ಲಿ ನಟಿಸಿದ ಪ್ರಿಯ ಆನಂದ್ ಪುನೀತ್ ಅವರ ಬಗ್ಗೆ ಅಪಾರ ಪ್ರೀತಿ ಗೌರವ ಇಟ್ಟುಕೊಂಡಿದ್ದಾರೆ. ಇನ್ನು ಹಿಂದಿಯಲ್ಲಿ ಇಂಗ್ಲಿಷ್ ವಿಂಗ್ಲೀಷ್, ರಂಗ್ರೆಜ್, ಪಕ್ರಿ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ ಪ್ರಿಯ ಆನಂದ್. ಈಗಲೂ ಸಾಕಷ್ಟು ಬೇಡಿಕೆ ಹೊಂದಿರುವ ನಟಿ ಪ್ರಿಯ ಆನಂದ್ ಇದೀಗ ನೀಡಿರುವ ಒಂದು ಹೇಳಿಕೆ ಜನರ ಯೋಚನೆಯನ್ನು ತಲೆ ಕೆಳಗೆ ಮಾಡಿದೆ.
ಕರ್ನಾಟಕದಲ್ಲಿ ಅಲ್ಲದ ಕೆಲಸಗಳನ್ನು ಮಾಡಿ ಹೆಚ್ಚು ಫೇಮಸ್ ಆಗಿದ್ದ ನಿತ್ಯಾನಂದ ಸ್ವಾಮಿಯ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳ ಪೊಲೀಸರಿಗೆ ಬೇಕಾಗಿರುವ ನಿತ್ಯನಂದ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿ ದೂರದ ಶ್ರೀಲಂಕಾದ ದ್ವೀಪ ಒಂದರಲ್ಲಿ ತನ್ನದೇ ಆದ ಕೈಲಾಸ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಇವರ ಬಗ್ಗೆ ಪ್ರಿಯಾ ಆನಂದ್ ಹೇಳಿಕೆ ಒಂದನ್ನು ನೀಡಿದ್ದಾರೆ.
ನಾನು ನಿತ್ಯಾನಂದ ಅವರು ಒಪ್ಪಿದರೆ ಅವರನ್ನು ಮದುವೆಯಾಗಲು ಇಷ್ಟಪಡುತ್ತೇನೆ ಎಂದಿದ್ದಾರೆ. ನಿತ್ಯಾನಂದ ಅವರನ್ನ ಮದುವೆಯಾದರೆ ನನ್ನ ಹೆಸರನ್ನ ಕೂಡ ಬದಲಾಯಿಸ ಬೇಕಾಗಿಲ್ಲ ಅವರಲ್ಲಿ ಏನು ಇದೆ ಹಾಗಾಗಿ ಅಷ್ಟು ಜನರು ಅವರಿಂದ ಆಕರ್ಷಿತರಾಗುತ್ತಾರೆ ಎಂದಿದ್ದಾರೆ ಪ್ರಿಯಾ ಆನಂದ್. ಹೌದು ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದ ಸಮಯದಲ್ಲಿ ಪ್ರಿಯ ಆನಂದ್ ಹೇಳಿದ ಹೇಳಿಕೆ ಇದು.
ಸದ್ಯ ನಟಿ ಪ್ರಿಯ ಆನಂದ್ ಅವರ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನಿತ್ಯಾನಂದ ಅವರ ಹಿಂದೆ ಹೋಗಿದ್ದು ಸುದ್ದಿಯಾಗಿತ್ತು. ಇದೀಗ ಪ್ರಿಯ ಆನಂದ ಕೂಡ ನಿತ್ಯಾನಂದ ಅವರಿಗೆ ಆಕರ್ಷಿತರಾಗಿದ್ದಾರಾ ಅಂತ ಹಲವರ ಪ್ರಶ್ನೆ. ಆದರೆ ಇದು ಕೇವಲ ತಮಾಷೆಗೆ ಹೇಳಿದ ಮಾತಾಗಿರಬಹುದು. ನಿತ್ಯಾನಂದ ಅವರ ಆರೋಗ್ಯ ಸಿಕ್ಕಾಪಟ್ಟೆ ಹದಗಿಟ್ಟಿದೆ ಅಂತೆ. ಶ್ರೀಲಂಕಾ ಅಧ್ಯಕ್ಷರಿಗೆ ನಿತ್ಯಾನಂದ ಅವರ ಶಿಷ್ಯ ಪತ್ರವನ್ನು ಬರೆದು ನಿತ್ಯಾನಂದ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಿ ಅಂತ ವಿನಂತಿಸಿಕೊಂಡಿದ್ದಾರೆ.