PhotoGrid Site 1675838436973

19 ವರ್ಷದ ಯುವತಿಯ ಜೊತೆಗೆ, 70 ವರ್ಷದ ಅಜ್ಜನ ಮದುವೆ! ಅಜ್ಜನ ಮೋಡಿಗೆ ಶರಣಾದ ಯುವತಿ, ಹೇಗಿದೆ ನೋಡಿ ಇವರ ಲವ್ ಸ್ಟೋರಿ!!

ಸುದ್ದಿ

ಇತ್ತೀಚೆಗೆ ಯಾಕೋ ಪ್ರೀತಿ ಕುರುಡು ಅನ್ನುವ ಮಾತು ಸಾಕಷ್ಟು ಜನರ ವಿಷಯದಲ್ಲಿ ನಿಜವಾಗುತ್ತಿದೆ. ಒಬ್ಬರ ಮನಸ್ಸನ್ನು ಒಬ್ಬರು ಅರ್ಥ ಮಾಡಿಕೊಂಡರೆ ಸಾಕು ಅವರಿಗೆ ಜಾತಿ, ಮತ, ವಯಸ್ಸು, ಬಣ್ಣ ಯಾವುದರ ಮಿತಿಯು ಇರುವುದಿಲ್ಲ. ಪ್ರೀತಿಸುತ್ತಾರೆ. ಯಾವ ವಿಚಾರದ ಬಗ್ಗೆ ಯೋಚನೆ ಮಾಡಿದೆ ಇದ್ದರೂ ಪರವಾಗಿಲ್ಲ ಕೊನೆ ಪಕ್ಷ ವಯಸ್ಸಿನ ಬಗ್ಗೆ ಆದರೂ ಪ್ರೀತಿಸುವಾಗ ನೋಡಿಕೊಳ್ಳಬೇಕು.

ಆದರೆ ಈಗ ಅದು ಕೂಡ ಇಲ್ಲ ಇದಕ್ಕೆ ಉದಾಹರಣೆಯಾಗಿ 19 ವರ್ಷದ ಯುವತಿ 70 ವರ್ಷದ ವಯೋವೃತ್ತನನ್ನ ಮದುವೆಯಾಗಿದ್ದಾಳೆ ಈ ಘಟನೆಯ ಬಗ್ಗೆ ತಿಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಎನಿಸಬಹುದು ಈ ಘಟನೆಯ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 19 ವರ್ಷದ ಯುವತಿಯೊಬ್ಬಳು 70 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದು ಇದೀಗ ಇವರ ಲವ್ ಸ್ಟೋರಿ ವೈರಲ್ ಆಗಿದೆ. ಲಾಹೋರ್ ಮೂಲದ ನಿಯಾಕತ್ ಮತ್ತು ಶಮೈಲಾ ಹೀಗೆ ಮದುವೆ ಆಗಿರುವ ಜೋಡಿ.

ವಾಕಿಂಗ್ ಗೆ ಎಂದು ಹೊರಟಿದ್ದ ಶಮೈಲ ಲಿಯಾಕತ್ ಗೆ ಡಿಕ್ಕಿ ಹೊಡೆಯುತ್ತಾಳೆ ಅಲ್ಲಿಂದ ಇವರಿಬ್ಬರ ನಡುವೆ ಲವ್ ಅಟ್ ಫಸ್ಟ್ ಸೈಟ್ ಆಗಿದೆ. ಇಬ್ಬರು ತಮ್ಮ ಲವ್ ಸ್ಟೋರಿಯನ್ನ ಬಹಳ ಉತ್ಸುಕತೆಯಿಂದ ಹೇಳಿಕೊಳ್ಳುತ್ತಾರೆ. “ಒಂದು ಬಾರಿ ಶಾಮೈಲಾ ನಡೆದುಕೊಂಡು ಹೋಗುತ್ತಿದ್ದಳು ನಾನು ಅವಳ ಹಿಂದಿನಿಂದ ಹಾಡನ್ನು ಗುನುಗುನಿಸಲು ಪ್ರಾರಂಭಿಸಿದೆ” ಎಂದು ಲಿಯಾಕತ್ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಳ್ಳುತ್ತಾರೆ.

ಅವಳು ಹಿಂತಿರುಗಿ ನನ್ನನ್ನ ನೋಡಿದಳು ಆಗ ಏನಾಯ್ತು ಗೊತ್ತಾ ನಾವಿಬ್ಬರೂ ಹುಚ್ಚು ಪ್ರೀತಿಯಲ್ಲಿ ಬಿದ್ದೆವು” ಎಂದು ತಮ್ಮ ಲವ್ ಸ್ಟೋರಿಯನ್ನ ಬಹಳ ರೋಮಾಂಚನಕಾರಿಯಾಗಿ ಲಿಯಾಖತ್ ವಿಸ್ತರಿಸುತ್ತಾರೆ. ಇವರಿಬ್ಬರ ನಡುವಿನ ವಯಸ್ಸಿನ ವ್ಯತ್ಯಾಸದ ಬಗ್ಗೆ ಶಾಮೈಲಾ ಅವರನ್ನು ಕೇಳಿದಾಗ ಅವರ ಉತ್ತರ ಏನು ಗೊತ್ತೇ?

“ಪ್ರೀತಿಯಲ್ಲಿ ವಯಸ್ಸು ನೋಡುವುದಿಲ್ಲ ಇಲ್ಲಿ ಪ್ರೀತಿ ಮಾತ್ರ ನಡೆಯುತ್ತದೆ ನಿಮ್ಮ ವಯಸ್ಸು ಅಥವಾ ಜಾತಿ ಅಲ್ಲ ಇದು ಕೇವಲ ಪ್ರೀತಿ ಅಷ್ಟೇ”. ಎಂದು ಶಾಮೈಲಾ ವಿವರಿಸುತ್ತಾರೆ. ಅಂದ ಹಾಗೆ ಈ ವರ್ಷದ ಆರಂಭದಲ್ಲಿ ಲಿಯಾಖತ್ ಮತ್ತು ಶಾಮೈಲ ಇಬ್ಬರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಆರಂಭದಲ್ಲಿ ಶಮೈಲಾ ಅವರ ಕುಟುಂಬದವರು ಈ ಸಂಬಂಧವನ್ನು ವಿರೋಧಿಸಿದ್ದರು ಆದರೆ ಅಂತಿಮವಾಗಿ ಈ ಜೋಡಿ ಅವರನ್ನು ಮನವೊಲಿಸಿ ಮದುವೆಯಾಗಿದೆ.

ವಯಸ್ಸಿನ ಅಂತರ ಎಷ್ಟಿದ್ದರೂ ಮದುವೆ ಆಗಬೇಕೆಂದು ಕೇಳಿದರೆ” ಹೌದು ಮದುವೆ ಆಗಬೇಕು ಎಂದು ಉತ್ತರಿಸುತ್ತಾರೆ ಅಲ್ಲದೆ ಮನಸ್ಸಿಗೆ ಬಂದಂತೆ ಬದುಕುವ ಹಕ್ಕು ನಮಗಿದೆ” ಎಂದು ಶಮೈಲಾ ಹೇಳುತ್ತಾರೆ. ಅವರ ಪ್ರಕಾರ ರೋಮ್ಯಾಂಟಿಕ್ ಆಗಿರಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಪ್ರತಿಯೊಂದು ಯುಗಕ್ಕೂ ಅದರದ್ದೇ ಆದ ಪ್ರಣಯದ ರೀತಿ ಇದೆ ನಾವು ಉತ್ತಮ ಜೀವನವನ್ನು ನಡೆಸುತ್ತೇವೆ. ಶಮೈಲಾ ತನ್ನ ಜೊತೆ ಸಂತೋಷದಿಂದ ಇದ್ದಾಳೆ ಎಂದು ಲಿಯಾಕತ್ ಹೇಳಿಕೊಳ್ಳುತ್ತಾರೆ.

ಇನ್ನು ಈ ದಂಪತಿಗಳ ನಡುವೆ ಹಾಡಿನ ಮೂಲಕವೇ ಪ್ರೀತಿ ಆರಂಭವಾಗಿದ್ದು ಅವರು ಸಂದರ್ಶನದ ವೇಳೆಯು ಈ ರೀತಿ ಹಾಡನ್ನು ಒಬ್ಬರಿಗೆ ಒಬ್ಬರು ಸಮರ್ಪಿಸಿದ್ದು ನಿಜಕ್ಕೂ ಆಶ್ಚರ್ಯಕರವಾಗಿತ್ತು. ದಂಪತಿಗಳು ಪರಸ್ಪರ ಹಾಡನ್ನು ಪ್ರದರ್ಶಿಸಿದರು. ‘ಜಾನು ಸುನ್ ಜರಾ, ಆಂಖೇನ್ ತೊ ಮಿಲಾ…’ ಲಿಯಾಖತ್ ಶಾಮೈಲಾಗಾಗಿ ಹಾಡಿದರೆ ಲಿಯಾಖತ್‌ಗಾಗಿ ಶಮೈಲಾ ‘ಮೊಹಬ್ಬತ್ ಬರ್ಸಾ ದೇನಾ ತುಮ್, ಸಾವನ್ ಆಯಾ ಹೈ ಹಾಡನ್ನು ಗುನುಗುನಿಸಿದರು.

Leave a Reply

Your email address will not be published. Required fields are marked *