PhotoGrid Site 1678621196220

ನನ್ನ ತಾಯಿಗೆ ಕಳ್ಳರ ಭಯವಿತ್ತು, ಫ್ರೀಡಂ ಸಿಗಲಿ ಅಂತಾ ಮದುವೆಯಾದೆ ಎಂದ ನಿವೇದಿತಾ ಗೌಡ! ಶಾಕಿಂಗ್ ಹೇಳಿಕೆ ನೀಡಿ ಹೇಳಿದ್ದೇನು ನೋಡಿ!!

ಸುದ್ದಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿಯೂ ಕೂಡ ನಿವೇದಿತಾ ಗೌಡ ಭಾಗವಹಿಸುತ್ತಿದ್ದಾರೆ. ಗಿಚ್ಚಿ ಗಿಲಿ ಗಿಲಿ ಸೀಸನ್ ಒಂದರ ರನ್ನರ್ ಅಪ್ ಆಗಿದ್ದರು ನಿವೇದಿತ ಗೌಡ. ನಿವೇದಿತಾ ಗೌಡ ಹಾಗೂ ಅವರ ಪತಿ ಚಂದನ್ ಶೆಟ್ಟಿ ಮೂರನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಕಲರ್ಸ್ ಕನ್ನಡ ಗಿಚ್ಚಿ ಗಿಲಿ ಗಿಲಿ ಸೀಸನ್ 2 ಕಾರ್ಯಕ್ರಮದ ವೇದಿಕೆಯಲ್ಲಿ.

ಚಂದನ್ ಶೆಟ್ಟಿ ತನ್ನ ಪ್ರೀತಿಯ ಪತ್ನಿ ನಿವೇದಿತಾ ಗೌಡ ಅವರಿಗೆ ತಮ್ಮ ಮದುವೆ ವಾರ್ಷಿಕೋತ್ಸವದಂದು ಸರ್ಪ್ರೈಸ್ ಕೊಡುವ ಸಲುವಾಗಿ ನಾವು ಇಂದು ನಮ್ಮ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಆಗುವುದಿಲ್ಲ. ನನಗೆ ಬೇರೆ ಕಡೆ ಮ್ಯೂಸಿಕ್ ಕಾರ್ಯಕ್ರಮ ಇದೆ ಎಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದರಂತೆ. ನಂತರ ಇದ್ದಕ್ಕಿದ್ದ ಹಾಗೆ ಗಿಚ್ಚಿ ಗಿಲಿ ಗಿಲಿ ವೇದಿಕೆಯ ಮೇಲೆ ಪ್ರತ್ಯಕ್ಷರಾಗಿದ್ದಾರೆ.

ಜೊತೆಗೆ ಹಾರ್ಟ್ ಶೇಪ್ ನ ಕೇಕ್ ಕೂಡ ತಂದು ನಿವೇದಿತಾ ಗೌಡ ಅವರಿಗೆ ಸರ್ಪ್ರೈಸ್ ನೀಡಿ ತಮ್ಮ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ನಿವೇದಿತಾ ಗೌಡ ಅವರಿಗೆ ಇದು ಬಹಳ ಖುಷಿಯ ವಿಚಾರವಾಗಿತ್ತು. ಚಂದನ್ ಇಂದು ಮನೆಯಲ್ಲಿ ಇರುವುದಿಲ್ಲ ಅಂತ ಹೇಳಿದಾಗ ಬೇಸರವಾಯಿತು ಆದರೆ ಅವರು ಈ ರೀತಿ ಸರ್ಪ್ರೈಸ್ ಕೊಟ್ಟಿದ್ದು ನಿಜಕ್ಕೂ ಖುಷಿ ಆಗಿದೆ ಎಂದು ಹೇಳಿದ್ದಾರೆ.

ಈ ಸಮಯದಲ್ಲಿ ವೇದಿಕೆಯ ಮುಂಬಾಗದಲ್ಲಿ ಕುಳಿತಿದ್ದು ನಿವಿ ತಾಯಿ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ವೇದಿಕೆಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಅದರಲ್ಲಿ ನಿವೇದಿತಾ ಗೌಡ ತನ್ನ ತಾಯಿಯ ಜೊತೆ ಸೇರಿ ವೇದಿಕೆಯ ಮೇಲೆ ನೃತ್ಯ ಮಾಡಿದ್ದಾರೆ.

ಯಾವಾಗಲೂ ನನ್ನ ಪರ್ಫಾರ್ಮೆನ್ಸ್ ಅನ್ನು ಪ್ರೇಕ್ಷಕರಾಗಿ ನೋಡುತ್ತಿದ್ದ ನನ್ನ ಅಮ್ಮ ಇಂದು ವೇದಿಕೆಯ ಮೇಲೆ ನನ್ನ ಜೊತೆಗೆ ಇರುವುದು ಸಂತಸ ತಂದಿದೆ ಎಂದಿದ್ದಾರೆ. ಇನ್ನು ತಾಯಿಯ ಬಗ್ಗೆ ಮಾತನಾಡಿದ ನಿವಿ ನನಗೆ ತಾಯಿ ಅಂದ್ರೆ ತುಂಬಾನೇ ಇಷ್ಟ. ಅವರು ನನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಯಾರಾದರೂ ಕಳ್ಳತನ ಮಾಡಬಹುದು ಎನ್ನುವ ಕಾರಣಕ್ಕೆ ನನ್ನನ್ನ ಮನೆಯಿಂದ ಆಚೆ ಕಳುಹಿಸುತ್ತಿರಲಿಲ್ಲ.

ಎಲ್ಲಿಗಾದರೂ ಟ್ರಿಪ್ ಹೋಗಬೇಕು ಅಂದ್ರು ಅಮ್ಮ ನೀನು ಮದುವೆ ಆದ ಮೇಲೆ ಗಂಡನ ಜೊತೆಗೆ ಹೋಗು ಎಂದು ಹೇಳುತ್ತಿದ್ದರು. ಹಾಗಾಗಿ ಫ್ರೀಡಂ ಬೇಕು ಅಂತ ಮದುವೆಯಾದೆ. ಆದರೆ ತಂದೆ ತಾಯಿಯ ಮೌಲ್ಯ ಈಗ ಅರಿವಾಗುತ್ತಿದೆ ಅವರನ್ನು ಬಿಟ್ಟು ಇರಲು ಕಷ್ಟವಾಗುತ್ತಿದೆ. ಒಮ್ಮೆ ಅವರನ್ನು ನೋಡಿದರು ಸಾಕು ಫುಲ್ ಖುಷಿ ಆಗುತ್ತೆ ಎಂದು ಭಾವುಕರಾಗಿ ನಿವೇದಿತಾ ಗೌಡ ತಾಯಿಯ ಬಗ್ಗೆ ಉತ್ತಮ ಮಾತುಗಳಾಡಿದ್ದಾರೆ.

ನಿವೇದಿತಾ ಗೌಡ ಅವರ ತಾಯಿ ಕೂಡ ಮಗಳನ್ನು ಹೊರಗಡೆ ಕಳುಹಿಸಿದರೆ ಯಾರಾದರೂ ಎತ್ತುಕೊಂಡು ಹೋಗಬಹುದು ಎನ್ನುವ ಭಯದಿಂದ ಆಚೆ ಕಳುಹಿಸುತ್ತಿರಲಿಲ್ಲ. ಚಂದನ್ ಶೆಟ್ಟಿ ಮನೆಗೆ ಬಂದು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ ಎಂದಾಗ ನನ್ನಂತೆ ನನ್ನ ಮಗಳನ್ನು ನೋಡಿಕೊಳ್ಳುವುದಾದರೆ ನನ್ನ ಮಗಳನ್ನು ಕೊಡುತ್ತೇನೆ ಎಂದಿದ್ದೆ. ಅವರ ಬಗ್ಗೆ ಹೇಳಬೇಕಾಗಿಲ್ಲ ಮಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದು ನಿವೇದಿತಾ ತಾಯಿ, ಅಳಿಯನನ್ನೂ ಹೊಗಳಿದ್ದಾರೆ.

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಭೇಟಿಯಾಗಿದ್ದು ಬಿಗ್ ಬಾಸ್ ನಲ್ಲಿ ಅನ್ನೋದು ಎಲ್ಲರಿಗೂ ಗೊತ್ತು. ಅದಾದ ಬಳಿಕ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನಿವೇದಿತಾ ಮೇಲೆ ಚಂದನ ಶೆಟ್ಟಿಗೆ ಪ್ರೀತಿಯಾಗಿದೆ. ಅದೇ ರೀತಿ ಮೈಸೂರು ಅರಮನೆ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡಿರುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೆಲ್ಲಾ ನಡೆದು ಮೂರು ವರ್ಷಗಳು ಕಳೆದವು ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಹಳ ಪ್ರೀತಿಯಿಂದ ಸಂಸಾರ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಅವರಿಬ್ಬರೂ ಇರುವ ರೀತಿಯೇ ಸಾಕ್ಷಿ.

Leave a Reply

Your email address will not be published. Required fields are marked *