ಭಾರತದಲ್ಲಿ ಸ್ವಾಮಿ ಎಂದೇ ಕರೆಸಿಕೊಂಡಿದ್ದ ನಿತ್ಯಾನಂದನ ಕೈಲಾಸ ಎನ್ನುವ ರಾಷ್ಟ್ರವನ್ನು ವಿಶ್ವಸಂಸ್ಥೆ ಕೂಡ ಗುರುತಿಸಿದೆಯೇ? ನಿಜಕ್ಕೂ ಇದು ಆಶ್ಚರ್ಯ ಎನಿಸಬಹುದು. ಕೈಲಾಸದ ಪ್ರತಿನಿಧಿ ವಿಶ್ವಸಂಸ್ಥೆಯ ಸಭೆ ಒಂದರಲ್ಲಿ ಪಾಲ್ಗೊಂಡಿದ್ದು ಸದ್ಯ ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ನಿತ್ಯಾನಂದ ಸ್ವಾಮಿ ಬಿಡದಿಯಿಂದ ಈಕ್ವೆಡಾರ್ ದ್ವೀಪದ ವರೆಗು ತನ್ನ ಪ್ರಯಾಣ ಬೆಳೆಸಿದ್ದಾರೆ. ಇಕ್ವಿಡರ್ ದ್ವೀಪದಲ್ಲಿ ಕೈಲಾಸ ಎಂಬ ಕಾಲ್ಪನಿಕ ರಾಷ್ಟ್ರವನ್ನು ನಿರ್ಮಿಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಇತ್ತೀಚಿಗೆ ಮತ್ತೆ ಸುದ್ದಿಗೆ ಬರುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯದವರಿಗೂ ಮೋಸ್ಟ್ ವಾಂ-ಟೆ-ಡ್ ಆಗಿರುವ ನಿತ್ಯಾನಂದ ಎಲ್ಲಾ ಪೊಲೀಸರ ಕಣ್ಣು ತಪ್ಪಿಸಿ ಬೇರೆಯದೆ ಆದ ರಾಷ್ಟ್ರ ನಿರ್ಮಾಣ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ತನ್ನದೇ ಆದ ಕೈಲಾಸ ರಾಷ್ಟ್ರವನ್ನು ನಿರ್ಮಾಣ ಮಾಡಿ ಕೊಂಡಿದ್ದಾರೆ ನಿತ್ಯಾನಂದ ಸ್ವಾಮಿ.
ಇನ್ನು ವಿದೇಶಗಳು ಕೂಡ ನಿತ್ಯಾನಂದ ಸ್ವಾಮಿ ಈ ಹೊಸ ರಾಷ್ಟ್ರದಲ್ಲಿ ಇರುವುದು ಆಶ್ಚರ್ಯ ಅದರಲ್ಲೂ ನಿತ್ಯಾನಂದ ಸ್ವಾಮಿಗೆ ಮಹಿಳಾ ಅನುಯಾಯಿಗಳೆ ಜಾಸ್ತಿ. ವಿಶ್ವಸಂಸ್ಥೆಯ ಕಮಿಟಿ ಆನ್ ಎಕನಾಮಿಕ್ ಸೋಶಿಯಲ್ ಅಂಡ್ ಕಲ್ಚರಲ್ ರೈಟ್ಸ್ ಇದರ 19ನೇ ಸಭೆಯ 73ನೇ ಸೆಶನ್ ನಲ್ಲಿ ಕೈಲಾಸದ ಪ್ರತಿನಿಧಿ ಒಬ್ಬಳು ಪಾಲ್ಗೊಂಡಿದ್ದಾಳೆ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಇದು ಸುಳ್ಳು ಸುದ್ದಿ ಎಂದು ಜನ ಮಾತನಾಡಿಕೊಂಡಿದ್ದರು ಯಾಕಂದ್ರೆ ನಿತ್ಯಾನಂದನ ಕೈಲಾಸವನ್ನು ಗುರುತಿಸಿ ಹಲವರ ತಲೆಯಲ್ಲಿ ಬಂದಿರುತ್ತೆ. ಆದರೆ ವಿಶ್ವಸಂಸ್ಥೆಯ ಸಭೆಯಲ್ಲಿ ನಿತ್ಯಾನಂದನ ಪ್ರತಿನಿಧಿ ಪಾಲ್ಗೊಂಡಿದ್ದು ಆಶ್ಚರ್ಯ ಮೂಡಿಸಿದೆ. ಇದರ ಬಗ್ಗೆ ವಿಶ್ವಸಂಸ್ಥೆ ಮಾತ್ರ ಇದುವರೆಗೆ ಪ್ರತಿಕ್ರಿಯೆ ನೀಡಲಿಲ್ಲ.
ಇನ್ನು ನಿತ್ಯಾನಂದನ ಪ್ರತಿನಿಧಿ ವಿಶ್ವಸಂಸ್ಥೆಯ ಸಭೆಯಲ್ಲಿ ಪಾಲ್ಗೊಂಡಿದ್ದು ನಿಜ ಎನ್ನುವುದಕ್ಕೆ ಕೆಲವು ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ ಸುಸ್ಥಿರ ಅಭಿವೃದ್ಧಿ ಕುರಿತು ಚೇರ್ ಪರ್ಸನ್ ಕೇಳುವ ಪ್ರಶ್ನೆಗೆ ಕೈಲಾಸದ ರಾಯಭಾರಿ ವಿಜಯಪ್ರಿಯ ಎನ್ನುವ ಮಹಿಳೆ ಮಾತನಾಡಿದ್ದಾರೆ. ಇನ್ನು ವಿಜಯಪ್ರಿಯ ಅವರ ವೇಷಭೂಷಣಗಳು ಕೈಲಾಸ ರಾಷ್ಟ್ರದ ರಾಣಿಯಂತೆ ಇತ್ತು ಮೈತುಂಬ ಆಭರಣಗಳನ್ನು ಧರಿಸಿ ಕೈಲಾಸದ ದೇವಿಯಂತೆ ಆಕೆ ಕಾಣಿಸಿಕೊಳ್ಳುತ್ತಿದ್ದಳು ಹಾಗಾಗಿ ವಿಡಿಯೋದಲ್ಲಿ ನೋಡುತ್ತಿರುವುದನ್ನು ಕಾಣಬಹುದು.
ಚೇರ್ ಪರ್ಸನ್ ಕೇಳಿದ ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ವಿಜಯಪ್ರಿಯ ಮಾತನಾಡುವುದನ್ನು ಬಿಟ್ಟು ಬೇರೆ ಟಾಪಿಕ್ ಮಾತನಾಡುತ್ತಾರೆ ಅಲ್ಲದೆ ಯುನೈಟೆಡ್ ಸ್ಟೇಟ್ ಆಫ್ ಕೈಲಾಸದ ರೂವಾರಿ ನಿತ್ಯಾನಂದ ತನ್ನ ಮೂಲ ದೇಶ ಭಾರತದಿಂದ ಹಿಂಸೆ ಪಡುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಕೈಲಾಸ ದೇಶ ರೂ.10,000ಕ್ಕೂ ಹೆಚ್ಚು ಹಿಂದೂ ಧರ್ಮದ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಿದೆ.
ಆಹಾರ, ಶಿಕ್ಷಣ, ವೈದ್ಯಕೀಯ ಎಲ್ಲಾ ಕ್ಷೇತ್ರಗಳಲ್ಲಿ ಕೈಲಾಸ ಯಶಸ್ವಿಯಾಗಿದೆ ಎಂದು ಆಕೆ ಹೇಳಿದ್ದಾರೆ.2019 ರಂದು ಸ್ವಯಂಘೋಷಿತ ದೇವಮಾನವ ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಈಗ ಈ ಸಭೆಯನ್ನು ನೋಡಿದರೆ ವಿಶ್ವಸಂಸ್ಥೆ ಕೂಡ ಕೈಲಾಸಂ ರಾಷ್ಟ್ರವನ್ನು ಪರಿಗಣಿಸಿದೆ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತದೆ.