ಭಾರತದಲ್ಲಿ ಕೇಸ್ ನಲ್ಲಿ ಸಿಲುಕಿರುವ ನಿತ್ಯಾನಂದ ದೇಶ ಬಿಟ್ಟು ಬಹಳ ಸಮಯ ಆಯಿತು. ಅವನನ್ನ ಹುಡುಕಾಟವಂತೂ ಪೊಲೀಸರು ನಡೆಸಿದ್ದಾರೆ ಆದರೆ ಇದೀಗ ತನ್ನದೇ ಕೈಲಾಸಂ ಎನ್ನುವ ರಾಷ್ಟ್ರವನ್ನು ನಿರ್ಮಾಣ ಮಾಡಿಕೊಂಡು ತನ್ನನ್ನು ತಾನು ದೇವಮಾನವ ಎಂದು ಕರೆದುಕೊಳ್ಳುತ್ತಿದ್ದಾನೆ ನಿತ್ಯಾನಂದ. ಇನ್ನು ಈ ನಡುವೆ ಕೈಲಾಸದ ರಾಯಭಾರಿ ಎಂದು ಹೇಳಿಕೊಂಡು ವಿಶ್ವಸಂಸ್ಥೆಯ ಸಭೆಯಲ್ಲಿ ಮಹಿಳೆಯೊಬ್ಬಳು ಇಂಗ್ಲೀಷಿನಲ್ಲಿ ಮಾತನಾಡಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆದರೆ ಸಿನಿಮಾದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಕಾಣಿಸಿಕೊಂಡ ಆಕೆ ಹೆಸರು ವಿಜಯಪ್ರಿಯ. ಆದರೆ ಈ ವಿಡಿಯೋ ವೈರಲ್ ಆದ ನಂತರ ವಿಶ್ವಸಂಸ್ಥೆ ಇದನ್ನ ತಿರಸ್ಕರಿಸಿದೆ ಕೈಲಾಸದ ಪ್ರತಿನಿಧಿಗಳನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಕೇಸರಿ ಬಟ್ಟೆ, ತಲೆ ತುಂಬಾ ಡ್ರೆಡ್ ಲಾಕ್, ಹಣೆಗೆ ತಿಲಕ, ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿಕೊಂಡು.
ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವಿಜಯಪ್ರಿಯ ಯಾರು ಎನ್ನುವ ಪ್ರಶ್ನೆ ಹಲವರಲ್ಲಿ ಇತ್ತು. ಆದರೆ ಈ ನಿಗೂಢ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಭಾರತದಿಂದ ಕಣ್ತಪ್ಪಿಸಿಕೊಂಡು ವಿದೇಶಕ್ಕೆ ಹೋಗಿ ಸ್ವತಂತ್ರ ರಾಷ್ಟ್ರ ನಿರ್ಮಾಣ ಮಾಡಿಕೊಂಡು ದೇವಮಾನವ ಎಂದು ತನ್ನನ್ನು ತಾನು ಕರೆಸಿಕೊಳ್ಳುತ್ತಿರುವ ನಿತ್ಯಾನಂದ ಯುನೈಟೆಡ್ ಕೈಲಾಸ ಎಂದು ತನ್ನ ರಾಷ್ಟ್ರಕ್ಕೆ ಹೆಸರಿಟ್ಟಿಕೊಂಡಿದ್ದಾನೆ.
ಇಲ್ಲಿ ಹಿಂದೂ ನಂಬಿಕೆಗಳಿಗೆ ಅನುಗುಣವಾಗಿ ಜೀವನ ನಡೆಸಲಾಗುತ್ತದೆ ಎಂದು ಹೇಳಲಾಗಿದೆ ನಿತ್ಯಾನಂದನ ಹಾಕಿರುವ ಟ್ವೀಟ್ ನಲ್ಲಿ, ತಮ್ಮ ರಾಷ್ಟ್ರದಿಂದ ಮಹಿಳಾ ನಾಯಕತ್ವದ ನಿಯೋಗವನ್ನು ವಿಶ್ವಸಂಸ್ಥೆಯ ಸಮ್ಮೇಳನಕ್ಕೆ ಕಳುಹಿಸಿಕೊಟ್ಟಿದ್ದೇವೆ ಎಂಬುದನ್ನು ನಿತ್ಯಾನಂದ ಹೇಳಿದ್ದಾರೆ. ನಿತ್ಯಾನಂದನ ರಾಷ್ಟ್ರ ಎಲ್ಲಿದೆ? ಸ್ವತಂತ್ರ ರಾಷ್ಟ್ರ ಸ್ಥಾಪಿಸಿಕೊಂಡಿದ್ದು ನಿಜವೋ ಅಲ್ಲವೋ ಅದರ ಅಸ್ತಿತ್ವ ಎಲ್ಲಿದೆ ಎಂಬುದರ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ.
ಕಳೆದ ಫೆಬ್ರುವರಿ 24ರಂದು ವಿಶ್ವ ಸಂಸ್ಥೆಯು ಜಿನೆವಾದಲ್ಲಿ 19ನೇ ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮ್ಮೇಳನವನ್ನು ಆಯೋಜಿಸಿತ್ತು. ಈ ಸಮಯದಲ್ಲಿ ಕೈಲಾಸ ದೇಶದ ಖಾಯಂ ರಾಯಭಾರಿ ಎಂದು ಹೇಳಿಕೊಂಡಿರುವ ನಿತ್ಯಾನಂದನ ಶಿಷ್ಯೆ ಮಾ. ವಿಜಯಪ್ರಿಯ ಭಾಗವಹಿಸಿದ್ದರು. ವಿಶ್ವಸಂಸ್ಥೆ ಇವರ ಉಪಸ್ಥಿತಿಯನ್ನು ತಳ್ಳಿಹಾಕಿತ್ತು. ಕೈಲಾಸ ವೆಬ್ಸೈಟ್ ಪ್ರಕಾರ ವಿಜಯಪ್ರಿಯ ಈ ವರ್ಚುಯಲ್ ದೇಶದ ಪರವಾಗಿ ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇನ್ನು ವಿಜಯಪ್ರಿಯ ವಿಶ್ವಸಂಸ್ಥೆಯ ಸಮಾವೇಶದಲ್ಲಿ ನಿತ್ಯಾನಂದನನ್ನು ಪರಮೋಚ್ಚ ಗುರು ಎಂದು ಕರೆದಿರುವುದು ಮಾತ್ರವಲ್ಲದೆ ಹಿಂದೂ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ ಜೊತೆಗೆ ಭಾರತದಿಂದ ನಿತ್ಯಾನಂದ ಗುರುವಿಗೆ ಕಿ-ರು-ಕು-ಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಸ್ವಿಜರ್ಲ್ಯಾಂಡ್ ನ ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ವಿಜಯಪ್ರಿಯ ಜೊತೆಗೆ ಇನ್ನೂ ಐದು ಮಹಿಳೆಯರು ಭಾಗವಹಿಸಿದ್ದರು.
ಕೈಲಾಸ ಮುಖ್ಯಸ್ಥೆ ಮುಕ್ತಿಕ ಆನಂದ್, ಕೈಲಾಸ ಸ್ವಂತ ಲೂಯಿಸ್ ಮುಖ್ಯಸ್ಥೆ ಸೋನಾ ಕಾಮತ್, ಕೈಲಾಸ ಫ್ರಾನ್ಸ್ ಮುಖ್ಯಸ್ಥೆ ನಿತ್ಯ ವೆಂಕಟೇಶಾನಂದ್, ಕೈಲಾಸ ಯುಕೆ ಮುಖ್ಯಸ್ಥೆ ನಿತ್ಯ ಆತ್ಮದಾಯಕಿ ಹಾಗೂ ಕೈಲಾಸ ಸ್ಲೋವೇನಿಯನ್ ಮಾ ಪ್ರಿಯಾಂಪುರ ಸಭೆಯಲ್ಲಿ ಉಪಸ್ಥಿತರಿದ್ದರು. ಇವರೆಲ್ಲರ ಉಡುಗೆ ತೊಡುಗೆ ವಿಭಿನ್ನವಾಗಿದ್ದು ಎಲ್ಲರೂ ನಿತ್ಯಾನಂದನನ್ನು ಪ್ರತಿನಿಧಿಸುವ ಉಡುಗೆ ತೊಡುಗೆ ಧರಿಸಿದ್ದರು.
ಕೈಲಾಸ, ವಿಶ್ವಾದ್ಯಂತ ತನ್ನ ರಾಯಭಾರಿ ಕಚೇರಿಯಲ್ಲಿ ಮತ್ತು ಎನ್‌ಜಿಒಗಳನ್ನು ಆರಂಭಿಸಿದೆ ಎಂದು ವಿಜಯಪ್ರಿಯ ಭಾಷಣದಲ್ಲಿ ತಿಳಿಸಿದ್ದಾರೆ. ಹೋಟೆಲ್ ನಲ್ಲಿ ಸದ್ಯ ನಿತ್ಯಾನಂದ ತನ್ನ ಕೈಲಾಸಂ ರಾಷ್ಟ್ರದ ಬಗ್ಗೆ ನಂಬಲಾರದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಇವರ ಅಸ್ತಿತ್ವದ ಬಗ್ಗೆ ಯಾವುದೇ ದಾಖಲೆ ಮಾತ್ರ ಇಲ್ಲ.