ನನಗೂ ಕೂಡ ಚಿತ್ರರಂಗದಲ್ಲಿ ಕೆಟ್ಟ ಅನುಭವ ಆಗಿದೆ ಎಂದ ನಟಿ ನಯನತಾರಾ! ಕಮಿಟ್ಮೆಂಟ್ ಮಾಡಿಕೊಳ್ಳಿ ಎಂದು ನಟಿಯನ್ನು ಒತ್ತಾಯ ಮಾಡಿದ್ದರಂತೆ, ಯಾರೂ ಗೊತ್ತಾ? ಕೇಳಿ ನಟಿಯ ಮಾತು!!

ಸುದ್ದಿ

ಸಿನಿಮಾ ರಂಗ ಅಂದ್ರೆ ಮೇಲ್ನೋಟಕ್ಕೆ ಮಾತ್ರ ಬಣ್ಣದ ಲೋಕ. ಆದರೆ ಅದರಲ್ಲಿ ಬ್ಲಾಕ್ ಆಂಡ್ ವೈಟ್ ಸೀನ್ ಗಳೇ ಹೆಚ್ಚು. ನಾವು ಯಾಕೆ ಈ ಮಾತನ್ನು ಹೇಳುತ್ತಿದ್ದೇವೆ ಅಂದ್ರೆ ಸಿನಿಮಾದಲ್ಲಿ ಒಬ್ಬ ಕಲಾವಿದೆ ದೊಡ್ದ ಹೆಸರು ಮಾಡಬೇಕು ಅಂದ್ರೆ ಕೇವಲ ಅವಳಲ್ಲಿ ಪ್ರತಿಭೆ ಇದ್ದರೆ ಮಾತ್ರ ಸಾಕಾಗಲ್ಲ, ಅದರ ಜೊತೆ ಅದೃಷ್ಟ (Luck) ವೂ ಬೇಕು. ಸಿನಿಮಾರಂಗದವರ ಸಪೋರ್ಟ್ ಕೂಡ ಬೇಕು.

ಆದರೆ ಎಷ್ತೋ ಸಂದರ್ಭದಲ್ಲಿ ಕಲಾವಿದೆಯರು ಟ್ಯಾಲೆಂಟ್ (Talent) ಇದ್ರೂ ಕೂಡ ಮೇಲೆ ಬರಲು ಸಾಧ್ಯವಿಲ್ಲ. ಚಿತ್ರರಂಗದಲ್ಲಿ ಇರುವವರ ಜೊತೆಗೆ ಕಮಿಟ್ ಮೆಂಟ್ ಮಾಡ್ಕೊಳ್ಳುವ ಸಂದರ್ಭವೂ ಎದುರಾಗುತ್ತದೆ. ಅದನ್ನೇ ಕಾಸ್ಟಿಂಗ್ ಕೌಚ್ ಎನ್ನಲಾಗುತ್ತದೆ. ಇತ್ತೀಚಿಗೆ ಮೀ’ಟೂ ಅಭಿಯಾನ ಆರಂಭವಾದ ನಂತರ ಅನೇಕ ನಟಿಯರು ತಮಗೆ ವೃತ್ತಿ ಜೀವನದಲ್ಲಿ ಆಗಿರುವಂತಹ ಕೆಲವು ಕಹಿ ಘಟನೆಗಳ ಬಗ್ಗೆ ನೇರವಾಗಿ ಮಾತನಾಡುತ್ತಿದ್ದಾರೆ.

ಕೆಲವರು ತಮಗೆ ತೊಂದರೆ ಕೊಟ್ಟ ಸಿನಿಮಾರಂಗದ ಜನರ ಬಗ್ಗೆ ಆರೋಪವನ್ನು ಹೆಸರು ಹೇಳಿ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಮಹಿಳಾ ಕಲಾವಿದರು (Actress) ಈ ರೀತಿಯಾಗಿ ಹೇಳಿಕೊಳ್ಳುತ್ತಿರುವುದು ಒಳ್ಳೆಯದೇ. ಯಾಕಂದ್ರೆ ಮುಂದಿನ ಪೀಳಿಗೆಗೆ ಇದು ಪಾಠವಾಗಬಹುದು. ಅಂದಹಾಗೆ ಇದೀಗ ಕಾ’ಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿರುವ ನಟಿ ಬೇರೆ ಯಾರು ಅಲ್ಲ ತಮಿಳುನಾಡಿನ ಸೂಪರ್ ಸ್ಟಾರ್ ನಯನತಾರ (Ledy Super star Nayanatara).

ನಯನತಾರಾ ಅವರಿಗೆ ಪ್ಯಾನ್ ಇಂಡಿಯಾ ಫೋಲೋವರ್ಸ್ ಇದ್ದಾರೆ. ತಮಿಳಿನಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ನಯನತಾರ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ನಟಿ. ಬಹುಭಾಷಾ ನಟಿ ನಯನತಾರಾ ಇದೀಗ ತಮಗೆ ಚಿತ್ರರಂಗದಲ್ಲಿ ಆಗಿರುವಂತಹ ಕಹಿ ಘಟನೆಗಳನ್ನು ಹೇಳಿಕೊಂಡಿದ್ದಾರೆ.

ಇವರಿಗೆ ಬಾಲಿವುಡ್ ನಲ್ಲಿ ಮೀ’ಟೂ ಪ್ರಕರಣ ಜೋರಾಗಿತ್ತು. ಆದರೆ ಇದೀಗ ಇತರ ಭಾಷಾ ಕಲಾವಿದರು ಕೂಡ ಓಪನ್ ಆಗಿ ತಮ್ಮ ಕಹಿ ಅನುಭವವನ್ನು ಹೇಳಿಕೊಳ್ಳುತ್ತಿರುವುದು ನಿಜಕ್ಕೂ ಉತ್ತಮ ವಿಷಯವೇ. ನಯನತಾರಾ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಅವರಿಗೂ ಕೂಡ ಕಾಸ್ಟಿಂಗ್ ಅನುಭವ ಆಗಿದೆಯಂತೆ. ಈ ಬಗ್ಗೆ ಸಂದರ್ಶನ ಒಂದರಲ್ಲಿ ನಯನತಾರ ಓಪನ್ ಆಗಿ ಮಾತನಾಡಿದ್ದಾರೆ.

“ಸಿನಿಮಾ ಕ್ಷೇತ್ರಕ್ಕೆ ಬಂದಾಗ ನನ್ನನ್ನು ಕೂಡ ಕಮಿಟ್ಮೆಂಟ್ ಕೇಳಿದರು ಆದರೆ ನಾನು ಅದನ್ನು ಒಪ್ಪಲಿಲ್ಲ ನನಗೆ ನನ್ನ ಪ್ರತಿಭೆ ಮೇಲೆ ನಂಬಿಕೆ ಇತ್ತು. ನಾವು ಹೇಗೆ ಇರುತ್ತೇವೆ ನಮ್ಮನ್ನು ಇಂಡಸ್ಟ್ರಿ ಹಾಗೆ ನಡೆಸಿಕೊಳ್ಳುತ್ತದೆ” ಎಂದು ತಮಗೂ ಆಗಿರುವಂತಹ ಕಾ’ಸ್ಟಿಂಗ ಕೌಚ್ ಅನುಭವದ ಬಗ್ಗೆ ನಯನತಾರ ಹೇಳಿಕೊಂಡಿದ್ದಾರೆ.

ನಟಿ ನಯನ ತಾರಾ ಇತ್ತೀಚಿಗೆ ತನ್ನ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಅವರ ಜೊತೆಗೆ ಮದುವೆಯಾಗಿ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮದುವೆಯ ಆದ ಬಳಿಕವೂ ಸಿನಿಮಾರಂಗದಿಂದ ದೂರ ಸರಿದಿಲ್ಲ ಲೇಡಿ ಸೂಪರ್ ಸ್ಟಾರ್. ಈಗಲೂ ನಯನತಾರಾ ಬಹು ಬೇಡಿಕೆಯ ಬಹು ಭಾಷಾ ನಟಿ ಎನಿಸಿದ್ದಾರೆ.

Leave a Reply

Your email address will not be published. Required fields are marked *