ಪ್ರೀತಿ ಎನ್ನುವುದೇ ಒಂದು ಸುಂದರವಾದ ಭಾವ. ಹೀಗಾಗಿ ಪ್ರೀತಿಗೆ ವಯಸ್ಸು ಅಡ್ಡಿಯಾಗದು. ಬದುಕಿಗೆ ಪ್ರೀತಿ ಎನ್ನುವುದು ಬಹುಮುಖ್ಯ. ಪ್ರೀತಿ ಎಂದರೆ ಅದು ಕೇವಲ ಗಂಡು ಹೆಣ್ಣಿನ ಪ್ರೀತಿ ಮಾತ್ರವಲ್ಲ, ಅಪ್ಪ ಅಮ್ಮ, ಅಣ್ಣ ತಮ್ಮ, ಅಕ್ಕ ತಂಗಿ, ಎಲ್ಲಾ ಸಂಬಂಧದಲ್ಲಿಯೂ ಪ್ರೀತಿ ಎನ್ನುವುದು ಬಹುಮುಖ್ಯ. ಆದರೆ ಈ ಗಂಡು ಹೆಣ್ಣಿನ ಪ್ರೀತಿಯೇ ಭಿನ್ನ.ಕಣ್ಣಿಗೆ ಕಾಣದ ಪ್ರೀತಿಗೆ ಬೀಳಲು ಕಾರಣವೇ ಬೇಕಿಲ್ಲವಂತೆ. ಪ್ರೇಮ ಚಿಗುರಲು ಯಾವುದೇ ಜಾತಿ, ಧರ್ಮ, ದೇಶ, ಭಾಷೆ ಯಾವುದು ಅಡ್ಡಿಯಾಗದು. ಗಂಡು ಹೆಣ್ಣು ಮನಸ್ಸು ಒಪ್ಪಿದ್ದರೆ ಸಾಕು ಪ್ರೀತಿ ಚಿಗುರೊಡೆದಿರುತ್ತದೆ.
ಇತ್ತೀಚೆಗಿನ ದಿನಗಳಲ್ಲಿ ಪ್ರೇಮ ವಿವಾಹ ಗಳು ಹೆಚ್ಚಾಗುತ್ತಿದೆ. ಹೌದು ಅದರಳಿಯು ಬೇರೆ ಭಾಷೆ, ಸಂಸ್ಕೃತಿಯ ಹೆಣ್ಣು ಗಂಡು ಪ್ರೀತಿಸಿ ಸಂಸಾರ ಸಾಗಿಸುತ್ತಾರೆ. ಅಷ್ಟೇ ಅಲ್ಲದೇ ಭಾರತೀಯ ಹುಡುಗರು ವಿದೇಶಿಯ ಹುಡುಗಿಯರ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆ ಆಗುತ್ತಿರುವ ಘಟನೆಗಳು ನಮ್ಮ ಸುತ್ತಲೇ ನಡೆಯುತ್ತಿದೆ. ಇಲ್ಲೊಬ್ಬ ಭಾರತ ದೇಶದ ಟ್ರಾವೆಲರ್ ಮಿತಿಲೇಶ್ ಅವರು ರಷ್ಯಾ ದೇಶದ ಒಬ್ಬ ಹುಡುಗಿಯನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಮಿತಿಲೇಶ್ ಅವರು ಟ್ರಾವೆಲರ್ ಆಗಿದ್ದು ತಮ್ಮದೇ ಆದ ಯೂಟ್ಯೂಬ್ ಚಾನಲ್ ಅನ್ನು ಹೊಂದಿದ್ದಾರೆ. ಈ ಯೂಟ್ಯೂಬ್ ಚಾನೆಲ್ ನಲ್ಲಿ ಅವರ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಹೌದು, ಇವರು ಒಬ್ಬ ಸ್ನೇಹಿತನ ಹುಟ್ಟುಹಬ್ಬದ ಆಚರಣೆಗೆ ಎಂದು ರಷ್ಯಾ ದೇಶದ ಬೆಲಾರಸ್ ಎಂಬ ಸ್ಥಳಕ್ಕೆ ಹೋಗಿದ್ದರಂತೆ. ಅದೇ ನಗರದಲ್ಲಿ ಅವರ ಸ್ನೇಹಿತ ನೆಲೆಸಿದ್ದನಂತೆ. ಹೀಗಿರುವಾಗ ವಿದೇಶಿ ಮಹಿಳೆ ಲೀಸಾರವರ ಭೇಟಿಯಾಗಿದೆ. ಹೌದು, ಮಿತಿಲೇಶ್ ಅವರು ಮೂರು ವರ್ಷಗಳ ಹಿಂದೆ ಲೀಸಾ ಭೇಟಿಯಾಗಿದ್ದರು.
ಪ್ರೀತಿ ಚಿಗುರಿದ್ದು, ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿರುವ ಈ ದಂಪತಿಗಳು ಇತ್ತೀಚೆಗಷ್ಟೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಅದಲ್ಲದೆ, ರಷ್ಯಾ ಸರ್ಕಾರದಿಂದ ಮಿತಿಲೇಶ್ ಅವರು ಮಗು ಮಾಡಿಕೊಂಡ ಮೇಲೆ ಒಂದು 1,24,000 ರೂ ಗಳನ್ನು ಪಡೆದಿದ್ದಾರಂತೆ. ಅಷ್ಟೇ ಅಲ್ಲದೇ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪ್ರತಿ ತಿಂಗಳಿಗೆ 18 ಸಾವಿರ ರೂಪಾಯಿಗಳನ್ನು ಕೂಡ ಈ ಮಗು ಪಾಲನೆಗೆ ರಷ್ಯಾ ಸರ್ಕಾರ ನೀಡಲಿದೆ ಎಂದು ಹೇಳಿದ್ದಾರೆ. ಮಿತಿಲೇಶ್ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನಲ್ಲಿ ಸುಮಾರು 9 ಲಕ್ಷ ಗಳಷ್ಟು ಫಾಲೋವರ್ಸ್ರನ್ನು ಹೊಂದಿದ್ದಾರೆ.