PhotoGrid Site 1679122002124

ಎರಡು ಮದುವೆಯಾದರೂ ಗಂಡು ಮಗು ಹುಟ್ಟಲಿಲ್ಲ ಎಂದು, ಬೇರೆಯವರ ಮಗು ಕದ್ದು ಹೆಂಡತಿಗೆ ಗಿಫ್ಟ್ ನೀಡಿದ ಭೂಪ! ಈತನ ಪ್ಲಾನ್ ನೋಡಿ ಪೊಲೀಸರೇ ದಂಗಾಗಿ ಹೋಗಿದ್ದರು ನೋಡಿ!!

ಸುದ್ದಿ

ಎಂಥವರ ಎದೆನಾದ್ರು ನಡುಗಿಸುವಂತಹ ಘಟನೆ ಇದು. ಈ ಘಟನೆ ನಡೆದಿರುವುದು ಉತ್ತರಪ್ರದೇಶದಲ್ಲಿ ಮಹಿಳೆಯ ಮಡಿಲಿನಿಂದಲೇ ಒಬ್ಬ ಮಗುವನ್ನ ಕಿ-ತ್ತುಕೊಂಡು ಪ-ರಾರಿ ಆಗಿದ್ದಾನೆ. ಹೀಗೆ ಮಕ್ಕಳ ಕ-ಳ್ಳತನದ ಪ್ರಕರಣ ಬೇರೆ ಬೇರೆ ಸ್ಥಳದಲ್ಲಿ ದಾಖಲಾಗುತ್ತಿದ್ದು ಹಲವರನ್ನು ಬೆಚ್ಚಿ ಬೆಳಿಸುತ್ತದೆ. ಆದರೆ ಈ ಕೇಸನ್ನು ಮಾತ್ರ ಕೇವಲ 48 ಗಂಟೆಗಳಲ್ಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.

ಪಡಿತರ ವಿತರಕ ಒಂಪಾಲ್ ತನ್ನ ಮಗನ ಆಸೆ ಈಡೇರಿಸುವುದಕ್ಕಾಗಿ ಹೀಗೆ ಮಗುವನ್ನ ಅಪಹರಿಸುವ ಸಂಚುರೂಪಿಸಿದ್ದ ಎಂದು ಪೊಲೀಸ ತನಿಖೆಯಿಂದ ತಿಳಿದು ಬಂದಿದೆ. ಮಗುವನ್ನು ಕ-ದ್ದು ಅದನ್ನ ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಲು ಆ ಆರೋಪಿ ಬಯಸಿದ್ದ.ಆತನಿಗೆ ಎರಡು ಮದುವೆಗಳು ಆಗಿದ್ದವು, ಮೌಲ್ವಿ ಪಂಡಿತ್ರ ಬಳಿ ವರ ಕೇಳಿದ್ದೂ ಆಯ್ತು ಆದರೆ ಗಂಡು ಮಗು ಆಗದೇ ನಿರಾಶೆಗೆ ಒಳಗಾಗಿದ್ದನು.

ಈಗ ಮಗುವಿನ ಅಪಹರಣದ ದೃಶ್ಯ ಸಿಸಿಟಿವಿ ಯಲ್ಲಿ ಕ್ಯಾಪ್ಚರ್ ಆಗಿದ್ದು, ಈ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಕೇವಲ 48 ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿ ಆ ಮಗುವನ್ನು ತಾಯಿಯ ಬಳಿ ಸೇರಿಸಿದ್ದಾರೆ. ಹೀನ ಎಂಬ ಮಹಿಳೆ ಮಿಷನ್ ಕಾಂಪೌಂಡ್ ಕ್ಯಾಂಪ್ ಕಾಲೋನಿ ಬಳಿ ತನ್ನ ಏಳು ತಿಂಗಳ ಮಗು ಶಿವನಿಗೆ ಹಾಲುಣಿಸುತ್ತಿದ್ದಳು.

ಅಷ್ಟರಲ್ಲಿ ಆ ಸ್ಥಳಕ್ಕೆ ಬಂದ ದು-ಷ್ಕರ್ಮಿ ಒಬ್ಬ ಮಹಿಳೆಯನ್ನು ಮಾತನಾಡಿಸುತ್ತಾ ಆಕೆಯ ಮಡಿಲಲ್ಲಿ ಇದ್ದ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಕೆಲಸ ಮಾಡಿದ ವ್ಯಕ್ತಿ ಓಂಪಾಲ್ ಎನ್ನುವ ಪಡಿತರ ವ್ಯಾಪಾರಿ. ತನಗೆ ಗಂಡು ಮಗು ಬೇಕು ಎನ್ನುವ ಕಾರಣಕ್ಕೆ ಆತ ಈ ರೀತಿ ಮಾಡಿದ್ದಾನೆ. ಮೊದಲ ಹೆಂಡತಿಯಿಂದ ಆತನಿಗೆ ಮೂರು ಮಕ್ಕಳು ಹುಟ್ಟಿವೆ. ಗಂಡು ಮಗು ಬೇಕು ಎನ್ನುವ ಕಾರಣಕ್ಕೆ ಧರ್ಮಗುರು ಪಂಡಿತರನ್ನೆಲ್ಲ ಭೇಟಿಯಾಗಿ ಬಂದರು ಆತನಿಗೆ ಗಂಡು ಮಗು ಹುಟ್ಟಿರಲಿಲ್ಲ ಅದಕ್ಕಾಗಿ ಹೀಗೆ ಗಂಡು ಮಗುವನ್ನು ಅಪಹರಿಸುವ ಪ್ಲಾನ್ ಮಾಡಿದ್ದಾನೆ.

ಹೌದು ಓಂಪಾಲ ಮಗನ ಆಸೆಯಿಂದ ಹೀಗೆ ಮಹಿಳೆ ಕೈಯಲ್ಲಿ ಇದ್ದ ಮಗುವನ್ನು ಕದ್ದೊಯ್ದಿದ್ದಾನೆ. ಎರಡನೇ ಹೆಂಡತಿಗೆ ಮದುವೆಯಾಗಿ ಕೆಲವು ವರ್ಷಗಳಾದರೂ ಮಕ್ಕಳಾಗಲಿಲ್ಲ ಇದರಿಂದ ಎರಡನೇ ಪತ್ನಿ ತುಂಬಾ ಬೇಸರಗೊಂಡಿದ್ದು ಮಾತ್ರವಲ್ಲದೇ ಖಿನ್ನತೆಗೆ ಒಳಗಾಗಿದ್ದಳು. ಮಗುವನ್ನು ದತ್ತು ತೆಗೆದುಕೊಳ್ಳುವಂತೆ ಪತ್ನಿ ಒತ್ತಾಯಿಸುತ್ತಿದ್ದಳು ಎಂದು ಓಂಪಾಲ್ ತಿಳಿಸಿದ್ದಾನೆ.

ಅದಕ್ಕಾಗಿ ಮಗುವನ್ನು ಕದಿಯುವ ಪ್ಲಾನ್ ಮಾಡಿದ್ದಾನೆ ಇದಕ್ಕಾಗಿ ತನ್ನ ಗ್ರಾಮದ ಕುಲದೀಪ್ ಮತ್ತು ವಿಕಾಸ್ ಎನ್ನುವ ಯುವಕರನ್ನು ಬಳಸಿಕೊಂಡಿದ್ದಾನೆ. ಅವರಿಗೆ ಹಣ ಕೊಡುವ ಆ-ಮೀಷ ಒಡ್ಡಿ ತನ್ನ ಕೆಲಸಕ್ಕೆ ಬಳಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇನ್ನು ಈ ಸಮಯದಲ್ಲಿ ಭಿಕ್ಷುಕರ ಮಗುವನ್ನು ಕದಿಯಲು ಅವರು ಪ್ಲಾನ್ ಮಾಡಿದ್ದರು. ಯಾಕೆಂದರೆ ಭಿಕ್ಷುಕರ ಮಕ್ಕಳನ್ನು ಕದ್ದರೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಿಲ್ಲ ಸ್ವಲ್ಪ ದಿನಗಳಲ್ಲಿಯೇ ಆ ಸುದ್ದಿ ಮುಚ್ಚಿ ಹೋಗುತ್ತದೆ ಎಂದು ಅವರು ಭಾವಿಸಿದ್ದರು.

ಬಿಕ್ಷುಕ ಮಹಿಳೆಯಿಂದ ಮಗುವನ್ನು ಕದ್ದು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ಪ್ಲಾನ್ ಮಾಡಲಾಗಿತ್ತು. ಮಗುವನ್ನು ಕದಿಯುವುದಕ್ಕಾಗಿ ವಿಕಾಸ ಹಾಗೂ ಕುಲದೀಪ್ ಇದೆ ಸ್ಥಳದ ಸುತ್ತ ಸುತ್ತುತ್ತಿದ್ದರು. ಕೊನೆಗೂ 10 ದಿನಗಳ ಬೇಟೆಯ ನಂತರವೂ ಮಗುವನ್ನು ಅಪಹರಿಸುವಲ್ಲಿ ಯಶಸ್ವಿಯಾಗಿರಲಿಲ್ಲ.

ನಂತರ ಸಹರಾನ್ ಪುರದಲ್ಲಿಯೇ ಮಗುವನ್ನು ಕದಿಯಲು ಪ್ಲಾನ್ ಮಾಡಿದರು. ಹೀಗೆ ಸುತ್ತಾಡುವಾಗ ಹೀನ ಆಕೆಯ ಮಗ ಶಿವನನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದು ಅವರ ಕಣ್ಣಿಗೆ ಬಿದ್ದಿದೆ. ಸರಿಯಾದ ಸಮಯಕ್ಕಾಗಿ ಕಾದಿದ್ದ ಆರೋಪಿಗಳು ರಾತ್ರಿ ವೇಳೆ ಹೀನ ಮಡಿಲಲ್ಲಿ ಇದ್ದ ಮಗುವನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಮಗುವನ್ನು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಒಂಪಾಲ್ ಮಗುವಿಗೆ ಬಟ್ಟೆಯನ್ನು ಖರೀದಿ ಮಾಡಿದ್ದಾನೆ ಅದನ್ನ ಮಗುವಿಗೆ ಹಾಕಿ ಕೊಂಡು ಮನೆಗೆ ಕರೆದುಕೊಂಡು ಹೋಗಿದ್ದಾನೆ. . ಹೆಂಡತಿಗೆ ಗಿಫ್ಟ್ ಕೊಡುವ ಸಲುವಾಗಿ ಮಗುವನ್ನು ಕಳ್ಳತನ ಮಾಡಿದ್ದಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಓಂಪಾಲ್ ತಿಳಿಸಿದ್ದಾನೆ. ಸದ್ಯ ಹೀನಳಿಗೆ ಆಕೆಯ ಮಗು ಸುರಕ್ಷಿತವಾಗಿ ಸಿಕ್ಕಿದೆ ಜೊತೆಗೆ ಆರೋಪಿಗಳು ಪೊಲೀಸರ ಕೈ ಸೇರಿದ್ದಾರೆ.

Leave a Reply

Your email address will not be published. Required fields are marked *