ಅತಿ ಕಡಿಮೆ ಅವಧಿಯಲ್ಲಿ ಹಾಗೂ ಅತಿ ಚಿಕ್ಕ ವಯಸ್ಸಿಗೆ ತಮ್ಮ ಪ್ರೀತಿಯ ಪತಿ ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಕಳೆದುಕೊಂಡ ಮೇಘನ ರಾಜ್ (Meghana Raj) ಸದ್ಯ ತಮ್ಮ ಮಗುವಿನ ನಗುವಿನಲ್ಲಿ ತಮ್ಮ ನೋವನ್ನು ಮರೆಯುತ್ತಾ ರಾಯನ್ ರಾಜ್ ಸರ್ಜನಾ (Ryan Raj Sarja) ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಹೌದು ಗೆಳೆಯರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದು ಮಗನ ಫೋಟೋಗಳನ್ನು ಶೇರ್ ಮಾಡಿಕೊಂಡು ಹಾಗೂ ಅವನ ತೊದಲು ನುಡಿಗಳನ್ನು ಸ್ಟೋರಿ ಹಾಗೂ ಇನ್ನಿತರೆ ಜಾಗಗಳಲ್ಲಿ ಹಾಕಿಕೊಂಡು ಮೇಘನಾ ರಾಜ್ ಸದಾ ಕಾಲ ಸಂತಸ ವ್ಯಕ್ತಪಡಿಸುತ್ತಲಿರುತ್ತಾರೆ.
ಇದೀಗ ಅಮ್ಮ ಮಗ ಸ್ವಿಮ್ಮಿಂಗ್ ಪೂಲ್ (swimming pool) ನಲ್ಲಿ ಎಂಜಾಯ್ ಮಾಡುತ್ತಿರುವಂತಹ ಫೋಟೋ ಹಾಗು ವಿಡಿಯೋಗಳು ಸಾಮಾಜಿಕ ಜಾಲತಾಣ (social media) ಲ್ಲಿ ಬಾರಿ ವೈರಲಾಗುತ್ತಿದೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದೆ ಅವರು ತಮ್ಮ ಇನ್ಸ್ಟಾಗ್ರಾಮ್ (instagram) ಸ್ಟೋರಿಯಲ್ಲಿ ಮುದ್ದು ಮಗನ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಎಂಜಾಯ್ ಮಾಡುತ್ತಿರುವಂತಹ ವಿಡಿಯೋವನ್ನು ಹಂಚಿಕೊಂಡಿದ್ದರು.
ಈ ವಿಡಿಯೋ ಸದ್ಯ ಬಾರಿ ವೈರಲ್ ಆಗುತ್ತಿದ್ದು, ಅಮ್ಮ ಹಳದಿ ಬಣ್ಣದ ಟಿ ಶರ್ಟ್ ಧರಿಸಿದರೆ, ಮಗ ನೀಲಿ ಬಣ್ಣದ ಟೀ ಶರ್ಟ್ ಧರಿಸಿ ನೀರಿಗೆ ಇಳಿದಿದ್ದಾರೆ. ಅತಿ ಚಿಕ್ಕ ವಯಸ್ಸಿಗೆ ತಮ್ಮ ಮಗನಿಗೆ ಸ್ವಿಮ್ಮಿಂಗ್ ಕೂಡ ಕಲಿಸುತ್ತಿದ್ದು, ಅಮ್ಮ-ಮಗ ನೀರಿನಲ್ಲಿ ಆಟವಾಡುತ್ತ ಬಹಳಾನೇ ಸಂತಸಪಟ್ಟಿರುವಂತಹ ವಿಡಿಯೋ ಇದಾಗಿದೆ.
ಮೇಘನಾ ರಾಜ್ ಅವರು ತಮ್ಮ ವೈಯಕ್ತಿಕ ಜೀವನ (personal life) ಹಾಗೂ ವೃತ್ತಿ ಜೀವನದ (professional life) ಕಡೆ ಅಪಾರವಾದ ಪರಿಶ್ರಮ ಹರಿಸುತ್ತಿದ್ದು, ತಮ್ಮ ಮಗನ ಲಾಲನೆ ಪಾಲನೆ ಹಾಗೂ ಅವನ ಮುಂದಿನ ಜೀವನದ ಕುರಿತು ಯೋಚನೆ ಮಾಡುತ್ತಲೇ ತಮ್ಮ ವೃತ್ತಿ ಬದುಕಿನ ಕಡೆಗೂ ಆಸಕ್ತಿ ತೋರುತ್ತಿದ್ದಾರೆ. ಹೌದು ಗೆಳೆಯರ ತತ್ಸಮ ತದ್ಭವ (tatsam tadbhav) ಎಂಬ ಸಿನಿಮಾದ ಮೂಲಕ ಮೇಘನ ರಾಜ್ ಹಲವಾರು ವರ್ಷಗಳ ನಂತರ ಬೆಳ್ಳಿ ತೆರೆಗೆ ಮತ್ತೆ ಕಮ್ ಬ್ಯಾಕ್ ಮಾಡಿರುವುದು ಅಭಿಮಾನಿಗಳಿಗೆ ಸಂತಸವನ್ನು ತಂದಿದೆ.
ಈ ಒಂದು ಸಿನಿಮಾ ಪನ್ನಗಾಭರಾಣ (Pannaga Bharana) ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿತ್ತು, ಸಸ್ಪೆನ್ಸ್ ಟ್ರೈಲರ್ suspense thriller ಕಥೆಯಾಧಾರಿತ ಚಿತ್ರ ಇದಾಗಿದೆ ಎಂದು ತಿಳಿದುಬಂದಿದೆ. ಇದರ ಜೊತೆ ಜೊತೆಗೆ ಮೇಘನಾ ರಾಜ್ ಅವರ ಆತ್ಮೀಯ ಸ್ನೇಹಿತರಾದ ಪ್ರಜ್ವಲ್ ದೇವರಾಜ್( Prajwal Devraj) ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇನ್ನೂ ವಿಶೇಷ.
ಸಿನಿಮಾದ ಮೊದಲರ್ಥದ ಶೂಟಿಂಗ್ ಸಂಪೂರ್ಣ ಮುಗಿದಿದ್ದು, ಎರಡನೇ ಹಂತದ ಶೂಟಿಂಗ್ ನಲ್ಲಿ ಕಲಾವಿದರು ಬಿಜಿಯಾಗಿದ್ದಾರೆ. ಇದೇ ತಿಂಗಳು ತತ್ಸಮ ತದ್ಭವ (tatsam tadbhav) ಸಿನಿಮಾ ತೆರೆಯ ಮೇಲೆ ರಾರಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಲವಾರು ವರ್ಷಗಳ ನಂತರ ಕಮ್ ಬ್ಯಾಕ್ ಮಾಡಿರುವ ಮೇಘನ ರಾಜ್ ಹೇಗೆ ಮಿಂಚಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.