Meghana Raj : ಅತಿ ಚಿಕ್ಕ ವಯಸ್ಸಿಗೆ ಬಾಲ ನಟಿಯಾಗಿ ಜೋಕುಮಾರಸ್ವಾಮಿ (Jokumaraswamy) ಎಂಬ ನಾಟಕದ ಮೂಲಕ ತಮ್ಮ ತಂದೆ ಸುಂದರ್ ರಾಜ್ (Sundar Raj) ಅವರೊಂದಿಗೆ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ಮೇಘನಾ ರಾಜ್ (Meghana Raj) ಅವರು ಇಂದಿಗೂ ಕೂಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.
ಹೌದು ಗೆಳೆಯರೇ ರಾಕಿಂಗ್ ಸ್ಟಾರ್ ಯಶ್ (Yash) ಅವರ ರಾಜಾಹುಲಿ (Rajahuli) ಸಿನಿಮಾದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ಗೆ (Sandalwood) ಎಂಟ್ರಿ ನೀಡಿದಂತಹ ಮೇಘನಾ ರಾಜ್ ಅವರು ಅನಂತರ ಆಟಗಾರ, ಇರುವುದೆಲ್ಲವ ಬಿಟ್ಟು, ಕುರುಕ್ಷೇತ್ರ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ತಮ್ಮದೇ ಆದ ವಿಶಿಷ್ಟ ಹೆಸರನ್ನು ಸಂಪಾದನೆ ಮಾಡಿಕೊಂಡರು.
ಇನ್ನೂ ತಮ್ಮ ಬಹುಕಾಲದ ಗೆಳೆಯ ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಪ್ರೀತಿಸಿ ಹಿಂದೂ ಮತ್ತು ಕ್ರಿಶ್ಚಿಯನ್ (Hindu & Christian) ಎರಡು ಸಮುದಾಯದಂತೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಈ ಜೋಡಿಗಳ ಮೇಲೆ ಅದ್ಯಾರ ವ.ಕ್ರದೃಷ್ಟಿ ಬಿತ್ತೋ ಗೊತ್ತಿಲ್ಲ. ಮದುವೆಯಾದ ಕೆಲವೇ ಎರಡೆರಡು ವರ್ಷಕ್ಕೆ ಚಿರಂಜೀವಿ ಸರ್ಜಾ ಹೃದ’ಯಘಾ.ತ ಸಮಸ್ಯೆಯಿಂದಾಗಿ ಇ.ಹಲೋಕ ತ್ಯಜಿಸಿಬಿಟ್ಟರು.
ಮೇಘನಾ ರಾಜ್ ಹೊಸ BMW ಕಾರ್
ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನೆಲ್ಲ ಎದುರಿಸಿದ ಮೇಘನ ರಾಜ್ (Meghana Raj) ಸದ್ಯ ತಮ್ಮ ಮಗುವಿನ ನಗುವಿನಲ್ಲಿ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಿದ್ದಾರೆ. ಹೀಗೆ ಹಲವು ವರ್ಷಗಳ ಕಾಲ ತಮ್ಮ ಪುತ್ರ ರಾಯನ್ ರಾಜ್ ಸರ್ಜನ (Rayan raj sarja) ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಂತಹ ಮೇಘನಾ ಅವರು ಸದ್ಯ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ (comeback) ಮಾಡಿರುವುದು, ಪ್ರತಿಯೊಬ್ಬರಿಗೂ ಸಂತಸವನ್ನು ತಂದುಕೊಟ್ಟಿದೆ.

ಹೌದು ಗೆಳೆಯರೇ ನಿರ್ದೇಶಕ ಪನ್ನಗಾಭರಣ (Pannagabarana) ರವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ತತ್ಸಮ ತದ್ಭವ (Tatsama Tadhbava) ಎಂಬ ಸಿನಿಮಾದ ನಾಯಕ ನಟಿಯಾಗಿ ಮೇಘನ ರಾಜ್ ಹಲವಾರು ವರ್ಷಗಳ ಬಳಿಕ ಮತ್ತೆ ನಟಿಸುತ್ತಿದ್ದು ಅಭಿಮಾನಿಗಳಿಗೆ ಸಿನಿಮಾದ ಮೇಲಿನ ಎಕ್ಸ್ಪೆಕ್ಟೇಶನ್ (expectations) ದುಪ್ಪಟ್ಟಾಗಿದೆ ಎಂದರೆ ತಪ್ಪಾಗಲಾರದು. (ಇದನ್ನು ಓದಿ) Film News : ನಟಿ ಸುಧಾರಾಣಿ ತಮ್ಮ ಮೊದಲ ಸಿನಿಮಾಗೆ ಶಿವಣ್ಣನಿಂದ ಪಡೆದ ಮೊದಲ ಸಂಭಾವನೆ ಎಷ್ಟು ಲಕ್ಷ ಗೊತ್ತೇ? ಆಗಿನ ಕಾಲದಲ್ಲಿ ಇದು ದುಬಾರಿನೇ ನೋಡಿ!!
ಇದರೊಂದಿಗೆ ಸದ್ಯ (meghana raj) ಅವರ ಮನೆಗೆ ಹೊಸ ಅತಿಥಿ ಎಂದರೆ ಆಗಮನವಾಗಿದ್ದು, ಕಳೆದ ಕೆಲವು ದಿನಗಳ ಹಿಂದೆ ಅವರು ಬಿಎಮ್‍ಡಬ್ಲ್ಯೂ (BMW) ಕಾರ್ ಒಂದನ್ನು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ ಎರಡು ಕೋಟಿ (2 crore) ಎಂಬ ಮಾಹಿತಿಯು ತಿಳಿದು ಬಂದಿದ್ದು, ಕಾರಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮೇಘನ ರಾಜ್ (Meghana Raj) ಸಂತಸ ವ್ಯಕ್ತಪಡಿಸಿದ್ದಾರೆ.