PhotoGrid Site 1673064421528

ಶೇಕ್ ಇಟ್ ಪುಷ್ಪವತಿ ಹಾಡಿಗೆ ಎಲ್ಲರೂ ಶೇಕ್ ಆಗುವಂತೆ ಸ್ಟೆಪ್ ಹಾಕಿದ ನಟಿ ಮೇಘಾ ಶೆಟ್ಟಿ! ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ನೋಡಿ!!

entertainment News

ಇತ್ತೀಚಿಗೆ ಇದೊಂದು ಟ್ರೆಂಡ್ (Trend) ಆಗಿಬಿಟ್ಟಿದೆ ಯಾವುದಾದರೂ ಒಂದು ಧಾರಾವಾಹಿ (Serial) ಯಲ್ಲಿ ನಟಿಯಾಗಿ ಗುರುತಿಸಿಕೊಂಡ್ರೆ ಸಾಕು ಮತ್ತೆ ಅವರದ್ದೇ ಹವಾ. ಮುಖ್ಯ ಭೂಮಿಯಲ್ಲಿ ನಟಿಸಿದ ಧಾರವಾಹಿ ಮುಗಿದು ಹೋದರು ಕೂಡ ಜನ ಅವರನ್ನು ಅದೇ ಪಾತ್ರದಿಂದ ನೆನಪಿಟ್ಟುಕೊಳ್ಳುತ್ತಾರೆ. ಉದಾಹರಣೆಗೆ ಅಗ್ನಿಸಾಕ್ಷಿ (Agnisakshi) ಯ ಮೂಲಕ ಸನ್ನಿಧಿಯಾಗಿ ಜನರ ಮೆಚ್ಚುಗೆ ಗಳಿಸಿಕೊಂಡ ವೈಷ್ಣವಿ ಗೌಡ (Vaishnavi Gowda) ಆ ಸಿನಿಮಾದ ನಂತರ ಬೇರೆಲ್ಲೂ ಹೆಚ್ಚು ಕಾಣಿಸಿಕೊಳ್ಳದೆ ಹೋದರು ಅವರನ್ನು ಮಾತ್ರ ಜನ ಸನ್ನಿಧಿ ಎಂದು ಗುರುತಿಸುತ್ತಾರೆ.

ಅದೇ ರೀತಿ ಸದ್ಯ ಕಿರುತೆರೆ ಧಾರವಾಹಿಯ ಮೂಲಕ ಸಖತ್ ಫೇಮಸ್ ಆಗಿರುವ ನಟಿಯರಲ್ಲಿ ಮೇಘಾ ಶೆಟ್ಟಿ (Megha Shetty) ಕೂಡ ಒಬ್ಬರು. ಕರಾವಳಿಯ ಚೆಲುವೆ ಮೇಘಾ ಶೆಟ್ಟಿ ಜಿ ವಾಹಿನಿ (Zee kannada) ಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ (Jote joteyali) ಧಾರಾವಾಹಿಯ ಮೂಲಕ ತಮ್ಮ ವೃತ್ತಿ (career) ಜೀವನ ಆರಂಭಿಸಿದರು. ಇದೀಗ ಧಾರವಾಹಿಯ ವೀಕ್ಷಕರಿಗೆ ಮೇಘಾ ಶೆಟ್ಟಿ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ. ಧಾರಾವಾಹಿಯನ್ನು ಒಮ್ಮೆ ಬಿಡುವ ಯೋಚನೆಯನ್ನು ಕೂಡ ಮೇಘಾ ಶೆಟ್ಟಿ ಮಾಡಿದ್ದರು.

ನಂತರ ಮತ್ತೆ ತಾನು ಈ ಧಾರಾವಾಹಿ ಮುಗಿಯುವವರೆಗೂ ಅನು ಪಾತ್ರವನ್ನು ನಿಭಾಯಿಸುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆಯನ್ನು ನೀಡಿದರು. ಹೌದು ಮೇಘಾ ಶೆಟ್ಟಿ ಅವರು ಜೊತೆ ಜೊತೆಯಲಿ ಧಾರವಾಹಿಯ ಅನು ಸಿರಿಮನೆ (Anu Sirimane) ಎನ್ನುವ ಪಾತ್ರದ ಮೂಲಕವೇ ಫೇಮಸ್. ಜನ ಅವರು ಎಲ್ಲಿ ಹೋದರು ಅನು ಎಂದೇ ಗುರುತಿಸುತ್ತಾರೆ. ಇನ್ನು ಧಾರವಾಹಿಯ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ಪಡೆದುಕೊಂಡಿರುವ ನಟಿ ಮೇಘಾ ಶೆಟ್ಟಿ ಬೆಳ್ಳಿತೆರೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ಮೇಘಾ ಶೆಟ್ಟಿ ಮೊದಲಿಗೆ ಕನ್ನಡದ ಪ್ರಸಿದ್ಧ ರ್ಯಾಪರ್ (Rapper) ಚಂದನ್ ಶೆಟ್ಟಿ (Chandan Shetty) ಅವರ ಆಲ್ಬಮ್ ಸಾಂಗ್ ಒಂದಕ್ಕೆ ಸೊಂಟ ಬಳುಕಿಸಿದ್ದರು. ಅದಾದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ (Golder star ganesh) ಅವರ ಜೊತೆಗೆ 3 ಹೀರೋಯಿನ್ ಗಳಲ್ಲಿ ಒಬ್ಬರಾಗಿ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದರು. ಅಷ್ಟೇ ಅಲ್ಲ ದಿಲ್ ಪಸಂದ್ ಹಾಗೂ ಆಪರೇಷನ್ ಲಂಡನ್ ಎನ್ನುವ ಸಿನಿಮಾಗಳಲ್ಲಿಯೂ ಕೂಡ ಬಣ್ಣ ಹಚ್ಚಿದ್ದಾರೆ.

ಮೇಘಾ ಶೆಟ್ಟಿ ಇದರ ಜೊತೆಗೆ ಇನ್ನು ಹಲವಾರು ಪ್ರಾಜೆಕ್ಟ್ ಗಳನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ ಹಾಗಾಗಿ ಧಾರಾವಾಹಿಗಿಂತ ಹೆಚ್ಚಾಗಿ ಸಿನಿಮಾಗಳಲ್ಲಿಯೇ ಇನ್ನು ಮುಂದೆ ಮೇಘಾ ಶೆಟ್ಟಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ ಯಾಕಂದ್ರೆ ಸಿನಿಮಾ ನಟನಿಗೆ ಅವರ ಬೇಡಿಕೆಯು ಕೂಡ ಹೆಚ್ಚಾಗಿದೆ. ಇನ್ನು ಮೇಘಾ ಶೆಟ್ಟಿ ಮಂಗಳೂರು ಮೂಲದವರಾಗಿದ್ದು ಎಂಬಿಎ ವಿದ್ಯಾಭ್ಯಾಸವನ್ನು ಕೂಡ ಮುಗಿಸಿದ್ದಾರೆ.

ಧಾರಾವಾಹಿ ಸಿನಿಮಾ ನಟನೆ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಮೇಘಾ ಶೆಟ್ಟಿ ಬಹಳ ಆಕ್ಟಿವ್ ಆಗಿರುತ್ತಾರೆ. ಮೇಘಾ ಶೆಟ್ಟಿಯವರಿಗೆ ಇನ್ಸ್ಟಾಗ್ರಾಮ್ ನಲ್ಲಿ 140k ಫಾಲೋವರ್ಸ್ ಇದ್ದಾರೆ. ಅವರ ಪ್ರತಿಯೊಂದು ಪೋಸ್ಟ್ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇನ್ನು ಮೇಘಾ ಶೆಟ್ಟಿ ಕೂಡ ಇತ್ತೀಚಿಗೆ ಪುಷ್ಪವತಿಯಾಗಿ ಹೆಜ್ಜೆ ಹಾಕಿದ್ದಾರೆ.

ಡಿ ಬಾಸ್ (D Boss) ಹಾಗೂ ರಚಿತಾ ರಾಮ್ (Rachita Ram) ಅಭಿನಯದ ಕ್ರಾಂತಿ ಸಿನಿಮಾದ ಮೂರು ಹಾಡುಗಳು ರಿಲೀಸ್ ಆಗಿದ್ದು ಹಾಡು ಅಂದರೆ ‘ಶೇಕ್ ಇಟ್ ಪುಷ್ಪವತಿ’ ಎನ್ನುವ ಹಾಡು. ಹೌದು ಈ ಹಾಡಿಗೆ ನಟ ದರ್ಶನ್ ಜೊತೆಗೆ ನಿಮಿಕಾ ರತ್ನಾಕರ್ ಹೆಜ್ಜೆ ಹಾಕಿದ್ದಾರೆ ಇದೊಂದು ಪಕ್ಕ ಪಾರ್ಟಿ ಸಾಂಗ್ ಆಗಿದ್ದು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ.

ಸಿಕ್ಕಾಪಟ್ಟೆ ಹಿಟ್ ಕಂಡಿರುವ ಪುಷ್ಪವತಿ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ ಮಾಡೋದು ಟ್ರೆಂಡ್ ಆಗಿದೆ. ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಹುಕ್ ಅಪ್ ಸ್ಟೆಪ್ ಗೆ ಸೊಂಟ ಬಳುಕಿಸಿದ್ದಾರೆ. ಅದರಲ್ಲಿ ಮೇಘಾ ಶೆಟ್ಟಿ ಕೂಡ ಒಬ್ಬರು ಮೇಘಾ ಶೆಟ್ಟಿ ಈಗಾಗಲೇ ಪುಷ್ಪವತಿ ಹಾಡಿಗೆ ನೃತ್ಯ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ಟೇಟ್ ಪುಷ್ಪವತಿ ಅಂತೆಯೇ ಕಾಣಿಸುತ್ತೀರಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

 

View this post on Instagram

 

A post shared by DBOSS WORLD ™ (@dboss____world)

Leave a Reply

Your email address will not be published. Required fields are marked *