ಮದುವೆ ಅಂದ್ರೆ ಅದೊಂದು ಸಂಭ್ರಮ ಜೀವನ (Life)ದಲ್ಲಿ ಒಮ್ಮೆ ಮಾತ್ರ ನಡೆಯುವಂತಹ ಒಂದು ಅದ್ಭುತ ಕ್ಷಣ. ಆದರೆ ಇತ್ತೀಚಿಗೆ ಮದುವೆ ಅನ್ನೋದು ಅರ್ಥವನ್ನು ಕಳೆದುಕೊಂಡು ಬಿಟ್ಟಿದೆ. ಕೇವಲ ಒಂದೇ ಮದುವೆಗೆ ಜನ ಸೀಮಿತವಾಗಿಲ್ಲ ಮದುವೆಯಾಗಿ ಕೆಲವೇ ದಿನಕ್ಕೆ ಗಂಡನಿಗೆ ಹೆಂಡತಿ (Husband and wife) ಅಥವಾ ಹೆಂಡತಿಗೆ ಅನಿಸಿದರೆ ತಕ್ಷಣವೇ ಬಿಟ್ಟು ಹೋಗುತ್ತಾರೆ. ಬೇರೆ ಮದುವೆಯನ್ನು ಆಗುತ್ತಾರೆ.
ಹಿಂದಿನ ಗುರುಹಿರಿಯರು ನೋಡಿ ಹುಡುಗನನ್ನ ಅಳದು ತೂಗಿ ಮದುವೆ ಮಾಡಿಸುತ್ತಿದ್ದರು. ಕೆಲವು ಅರೇಂಜ್ಡ್ ಮ್ಯಾರೇಜ್ ನಲ್ಲಿ, ಹುಡುಗ ಹುಡುಗಿ ಒಬ್ಬರಿಗೊಬ್ಬರು ಮೊದಲೇ ಪರಿಚಯಸ್ತರು ಅಲ್ಲ ಅನ್ನೋದು ಒಂದು ವಿಷಯವನ್ನು ಬಿಟ್ಟರೆ ಬೇರೆಲ್ಲವೂ ಚೆನ್ನಾಗಿತ್ತು. ಬಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗುತ್ತಿದ್ದರು. ಆದರೆ ಇದಂತೂ ಲವ್ ಮ್ಯಾರೇಜ್ (Love marriage) ಜಮಾನ. ಜನರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಅಷ್ಟೇ ಅಲ್ಲ ಇದೀಗ ಮದುವೆ ಅನ್ನೋದು ಮೊದಲಿನಷ್ಟು ಶಾಶ್ವತವಾಗಿ ಸಂಪ್ರದಾಯಬದ್ಧವಾಗಿಯೇ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ನಮ್ಮ ಜೋಡಿ ಮದುವೆಗಿಂತ ಮೊದಲು ಪ್ರೀ ವೆಡ್ಡಿಂಗ್ ಶೂಟ್ ನಿಂದ ಹಿಡಿದು ಮದುವೆಯ ನಂತರದ ಮ-ಧು-ಚಂ-ದ್ರದ ವರೆಗೆ ಅವರೇ ನಿರ್ಣಯ ಮಾಡುತ್ತಾರೆ. ಅದರಲ್ಲೂ ಇತ್ತೀಚಿನ ಮದುವೆಗಳು ಸಾಕಷ್ಟು ಆಡಂಬರದಿಂದ, ಐಶಾರಾಮಿಯಿಂದ ಕೂಡಿರುತ್ತದೆ.
ಇನ್ನು ಮದುವೆಯ ಮಧುರ ಕ್ಷಣಗಳನ್ನು ನೆನಪುಗಳನ್ನಾಗಿಸುವುದಕ್ಕೆ ಸಾಕಷ್ಟು ಜನ ಸಾಕಷ್ಟು ರೀತಿಯ ಕೆಲಸ ಮಾಡುತ್ತಾರೆ. ಅವುಗಳಲ್ಲಿ ಮದುವೆಯ ಫೋಟೋ ಹಾಗೂ ವಿಡಿಯೋ ಮಾಡಿಸುವುದು ಕೂಡ ಒಂದು. ಯುವಕರ ಯೋಚನೆ ವಿಭಿನ್ನವಾಗಿದೆ ಹಾಗಾಗಿ ಅವರು ಫೋಟೋ ವಿಡಿಯೋಗಳನ್ನು ತೆಗೆಸಿಕೊಳ್ಳುವುದಕ್ಕೆ ಸಾಕಷ್ಟು ಹೊಸ ಹೊಸ ರೀತಿಯ ಟೀಮ್ ಹುಡುಕುತ್ತಾರೆ.
ಜೊತೆಗೆ ಇಂದಿನ ಫೋಟೋಗ್ರಾಫರ್ ಗಳು ಕೂಡ ಸಿಕ್ಕಾಪಟ್ಟೆ ಮುಂದುವರೆದು ಚಿಂತನೆ ಮಾಡುತ್ತಾರೆ ಹಾಗಾಗಿ ನವ ದಂಪತಿಗಳ ವಿಶೇಷವಾದ ಫೋಟೋಗಳನ್ನು ತೆಗೆಯುತ್ತಾರೆ. ಹೀಗೆ ಒಬ್ಬ ಫೋಟೋಗ್ರಾಫರ್ ನವದಂಪತಿಗಳ ಫೋಟೋ ತೆಗೆಯಲು ಹೋಗಿ ತಾನೆ ಪೇಚಿಗೆ ಸಿಕ್ಕಿಕೊಂಡಿದ್ದಾನೆ.
ಮದುವೆಯ ನಂತರ ಫೋಟೋಗ್ರಾಫರ್ ನಮ್ಮ ದಂಪತಿಗಳಿಗೆ ಇಬ್ಬರು ಪರಸ್ಪರ ಲಿಪ್ ಟು ಲಿಪ್ ಕಿಸ್ ಮಾಡುವಂತೆ ಹೇಳಿದ್ದಾನೆ. ಫೋಸ್ ನಲ್ಲಿ ಫೋಟೋ ತೆಗೆಯಲು ಹೊರಟಿದ್ದಾನೆ. ಆದರೆ ಮೊದಲು ಫೋಟೋಗ್ರಾಫರ್ ಹೇಳಿದಂತೆ ಮಾಡಲು ಹಿಂಜರಿದ ನವದಂಪತಿಗಳು ಲಿಪ್ ಟು ಲಿಪ್ ಕಿಸ್ ಮಾಡಿ ಪಾಸ್ ಕೊಡಲು ಮುಂದಾಗಿದ್ದಾರೆ.
ಆದರೆ ಈ ಪೋಸ್ ನಲ್ಲಿ ಫೋಟೋ ತೆಗೆದು ಆಯ್ತು ಅಂತ ಫೋಟೋಗ್ರಾಫರ್ ಎಷ್ಟು ಹೇಳಿದರು ನವ ದಂಪತಿಗಳು ಮಾತ್ರ ಕಿಸ್ ಮಾಡೋದನ್ನ ನಿಲ್ಲಿಸಲೇ ಇಲ್ಲ. ಫೋಟೋಗ್ರಾಫರ್ ಅವರಿಬ್ಬರನ್ನು ಬಿಡಿಸಲು ಪ್ರಯತ್ನಿಸಿ ಸುಸ್ತಾಗಿ ಹೋದ. ಕೊನೆಗೆ ಫೋಟೋಗ್ರಾಫರ್ ಜೊತೆಗೆ ಇನ್ನು ಕೆಲವರು ಸೇರಿ ಇಬ್ಬರು ದಂಪತಿಗಳನ್ನು ಬೇರೆ ಮಾಡಿದ್ದಾರೆ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ನಗು ಬರುತ್ತೆ.