PhotoGrid Site 1662891999101

ಈ ಅಜ್ಜನನ್ನೇ ನಾನು ಮದುವೆ ಆಗೋದು ಎಂದು ಮನೆಯಲ್ಲಿ ಹಠ ಮಾಡಿ ಮದುವೆಯಾದ ಯುವತಿ! ಅಜ್ಜನಿಗೆ ಹೆಚ್ಚಿದ ಡಿಮ್ಯಾಂಡ್ ನೋಡಿ!!

ಸುದ್ದಿ

ಮದುವೆ ಅನ್ನೋದು ನಿಜಕ್ಕೂ ಬಹಳ ವಿಚಿತ್ರ ನೋಡಿ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಇದು ಕೆಲವೊಮ್ಮೆ ಸತ್ಯವೇನೋ ಎನಿಸುತ್ತದೆ. ಯಾಕೆಂದರೆ ಕೆಲವು ವಿಚಿತ್ರ ಜೋಡಿಗಳನ್ನು ನೋಡಿದಾಗ ಇಂತಹ ಜೋಡಿಯನ್ನ ಒಟ್ಟಾಗಿ ಸೇರಿಸಲು ದೇವರಿಗೆ ಮಾತ್ರ ಸಾಧ್ಯ ಅಂತ ಎನಿಸುತ್ತೆ. ಇಂತಹ ಒಂದು ವಿಚಿತ್ರವಾದ ಜೋಡಿಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಯುವಕರೆಲ್ಲರೂ ಕಣ್ಣು ಬಾಯಿ ಬಿಟ್ಟು ನೋಡಿದ್ದಾರೆ.

ಅಬ್ಬಬ್ಬಾ ಇಂತ ಹುಡುಗಿ ತಮಗೆ ಸಿಕ್ಕಿಲ್ವಲ್ಲ ಅಂತ ನೊಂದುಕೊಂಡಿದ್ದಾರೆ. ಹೌದು ಈ ಜೋಡಿ ಯುವಕರನ್ನ ರೊಚ್ಚಿಗೆಬ್ಬಿಸಿದೆ ಯಾಕಂದ್ರೆ ಆ ವ್ಯಕ್ತಿ ಅದೆಂಥ ಅದೃಷ್ಟ ಮಾಡಿದನೋ ಗೊತ್ತಿಲ್ಲ ಹಣ್ಣು ಮುದುಕನಾಗಿದ್ದರೂ ಹದಿಹರೆಯದ ಯುವತಿಯನ್ನು ಹೆಂಡತಿಯಾಗಿ ಪಡೆದಿದ್ದಾನೆ. ಹೌದು ಸ್ನೇಹಿತರೆ ಕೆಲವು ದಿನಗಳಿಂದ ಇದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಆ ವಿಡಿಯೋದಲ್ಲಿ ಏನಿದೆ ಎನ್ನುವ ಕುತೂಹಲ ನಿಮಗೆ ಇರಬಹುದು. ವೈರಲ್ ಆದ ವಿಡಿಯೋದಲ್ಲಿ ಏನಿತ್ತು ಎಂಬುದನ್ನು ನಾವು ಇಲ್ಲಿ ಹೇಳ್ತಿವಿ ನೋಡಿ. ವಿಡಿಯೋದಲ್ಲಿ ಏನು ಗೊತ್ತ, ಇದು ಸ್ವಲ್ಪ ಹಳೆಯ ವಿಡಿಯೋ ಆಗಿದ್ದರು, ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಈ ಟಿಕ್ ಟಾಕ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಒಬ್ಬ ಅಜ್ಜನ ಪಕ್ಕ ಕುಳಿತು ಆತನ ಮುಖ ಹಿಡಿದುಕೊಂಡ ಸುಂದರವಾದ ಹುಡುಗಿ ಆ ಮುದುಕನಿಗೆ ಐ ಲವ್ ಯು ಅಂತ ಹೇಳುತ್ತಾಳೆ.

ಅದಕ್ಕೆ ನಗುತಾ ಆ ಮುದುಕ ಐ ಲವ್ ಯು ಎಂದು ಹೇಳುತ್ತಾನೆ. ಅದನ್ನ ಕೇಳಿಸಿಕೊಂಡು ನಗುತ್ತಲೆ ಮುದುಕನ ಹಣೆಗೆ ಮುತ್ತಿಕ್ಕುತ್ತಾಳೆ ಹುಡುಗಿ. ಇವರಿಬ್ಬರು ಗಂಡ ಹೆಂಡತಿ ಎನ್ನುವುದಕ್ಕೆ ಅಧಿಕೃತ ಮಾಹಿತಿ ಇಲ್ಲ. ಆದರೆ ಇವರ ಜೋಡಿಯನ್ನು ನೋಡಿದರೆ ಮಾತ್ರ ಇವರಿಬ್ಬರೂ ಸಂತಸದಿಂದ ಜೀವನ ನಡೆಸುತ್ತಿರುವ ಜೋಡಿ ಅಂತ ಅನ್ನಿಸುತ್ತೆ. ಸ್ಪುರದ್ರೂಪಿಯಾಗಿರುವ ಆ ಹುಡುಗಿ ಈ ವಯಸ್ಸಾದ ‘ತರುಣ’ನನ್ನು ಯಾಕೆ ವರಿಸಿದ್ದಾಳೆ ಎನ್ನುವುದೇ ಹಲವರ ಕುತೂಹಲ.

ಇನ್ನು ಈ ಜೋಡಿಯನ್ನ ನೋಡಿದ ಯುವಕರ ಹಾರ್ಟ್ ಒಂದು ಕ್ಷಣ ಹೊಡೆದುಕೊಳ್ಳುವುದನ್ನೇ ನಿಲ್ಲಿಸಿರಬಹುದು! ಹೌದು ಇದೆಂತಾ ದೇವರ ಸೃಷ್ಟಿ ನಿಯಮವು ಗೊತ್ತಿಲ್ಲ. ಮದುವೆಯನ್ನು ಇಬ್ಬರು ಸಮ ವಯಸ್ಕರ ಅಥವಾ ಒಂದೆರಡು ವರ್ಷ ಅಂತರದ ಯುವಕ ಹಾಗೂ ಯುವತಿ ಮದುವೆಯಾಗುವುದು ಸಹಜ. ಅದು ಬಿಡಿ ಅಪ್ಪನ ವಯಸ್ಸಿನ ಹುಡುಗನ ಮದುವೆಯಾಗುವವರೂ ಇದ್ದಾರೆ.

ಆದರೆ ಇದ್ಯಾಕೋ ಅಜ್ಜನ ವಯಸ್ಸಿನ ಹಲ್ಲಿಲ್ಲದ ಮುದುಕನನ್ನ ಈ ಹುಡುಗಿ ವರಿಸಿದ್ದಾರೆ ಅಂದ್ರೆ ನಿಜಕ್ಕೂ ಆಶ್ಚರ್ಯ ಪಡಲೇಬೇಕು. ಇನ್ನು ಈ ವಿಡಿಯೋವನ್ನು ಕೆಲವರು ಎಡಿಟ್ ಮಾಡಿದ್ದಾರೆ. ಹುಡುಗಿ ಐ ಲವ್ ಯು ಅಂತ ಆ ವ್ಯಕ್ತಿಗೆ ಹೇಳುತ್ತಿದ್ದ ಹಾಗೆ ಒಬ್ಬ ವ್ಯಕ್ತಿ ಓಡಿ ಹೋಗಿ ಬಾವಿಗೆ ಹಾರುತ್ತಾನೆ.

ಖಂಡಿತ ಈ ವಿಡಿಯೋ ನೋಡಿದ ಸಾಕಷ್ಟು ಯುವಕರಿಗೆ ಹೀಗೆ ಅನ್ನಿಸಿರುತ್ತೆ. ಈ ಕಣ್ಣಿನಲ್ಲಿ ಇನ್ನು ಎಂತೆಂಥ ದೃಶ್ಯ ನೋಡಬೇಕು ದೇವರೇ ಅಂತ ಹಲವರು ಕಮೆಂಟ್ ಮಾಡಿದ್ದಾರೆ. ನೀವು ಈ ವಿಡಿಯೋವನ್ನು ಇಲ್ಲಿ ವೀಕ್ಷಿಸಬಹುದು. ಆದರೆ ಹಾರ್ಟ್ ಗಟ್ಟಿಯಾಗಿ ಹಿಡಿದುಕೊಳ್ಳಿ.

Leave a Reply

Your email address will not be published. Required fields are marked *