ಮನುಷ್ಯನ ಮನಸ್ಥಿತಿಯೂ ಸಂಪೂರ್ಣವಾಗಿ ಬದಲಾಗಿದೆ. ಸ್ವಾರ್ಥದಿಂದಾಗಿ ಸಂಬಂಧಗಳ ಮಹತ್ವವನ್ನು ಅರಿಯದ ಮಟ್ಟಿಗೆ ಬದಲಾಗಿದ್ದಾನೆ. ಹೀಗಾಗಿ ಸಂಬಂಧಗಳಲ್ಲಿ ಬಿರುಕು, ಮನಸ್ತಾಪಗಳು ಹಾಗೂ ವೈಮನಸ್ಸು ಹೆಚ್ಚಾಗುತ್ತಿದೆ. ಇನ್ನೊಂದೆಡೆ ಸಂಬಂಧಗಳು ಹಳಸಿದ್ದಂತದಾಗ ಅಥವಾ ಸಂಬಂಧವೇ ಬೇಡ ಎನಿಸಿದಾಗ ಕೊ-ಲೆ ಮಾಡುವ ಮಟ್ಟಕ್ಕೆ ಬಂದು ತಲುಪಿದ್ದಾರೆ. ಮನುಷ್ಯನ ಮನಸ್ಥಿತಿ ಎಂದು ಎಷ್ಟೊಂದು ವಿ’ಕೃತ ಗೊಂಡಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಮದುವೆ ಮಾತುಕತೆಗೆ ಬಂದವರು ಮಂಜುನಾಥ್ ಅವರನ್ನು ಕಲ್ಲಿನಲ್ಲಿ ಜಜ್ಜಿ ಜೀವ ತೆಗೆದಿದ್ದಾರೆ. ಇಂತಹ ಘಟನೆ ನಡೆದಿರುವುದು ನಿಜಕ್ಕೂ ವಿಪರ್ಯಾಸ. ಅಂದಹಾಗೆ, ಕೆ.ಪಿ ಅಗ್ರಹಾರದ ಮಂಜುನಾಥ್ ಬಾಳಪ್ಪ ಜಮಖಂಡಿ ಕೊಲೆ ಕೇಸ್ ಸಂಬಂಧಪಟ್ಟಂತೆ ಆರೋಪಿತೆ ಸರೋಜಾಳನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಮೊಬೈಲ್ ಸಿಡಿಆರ್ ಆಧರಿಸಿ ಪೊಲೀಸ್ರು ಸರೋಜಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕಳೆದ ಡಿಸೆಂಬರ್ 4ನೇ ತಾರೀಖಿನಂದು ರಾತ್ರಿ ಕೆ.ಪಿ ಅಗ್ರಹಾರದಲ್ಲಿ ವ್ಯಕ್ತಿಯೊಬ್ಬನ ಜೀವ ತೆ’ಗೆದು ಸರೋಜಾ ಪರಾರಿಯಾಗಿದ್ದಳು. ಆದರೆ ಕೊನೆಗೂ ಸರೋಜಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹೌದು ಈ ಮಂಜುನಾಥ್ ಪ್ರಾಣ ತೆಗೆಯುವುದಕ್ಕೆ ಕಾರಣವೊಂದಿದೆ. ಮೃತ ಮಂಜುನಾಥ್ ಸರೋಜಾಳ ಜೊತೆಯಲ್ಲಿ ಪ್ರೀತಿಯಲ್ಲಿದ್ದರು.
ಅದಾಗಲೇ ಗಂಡನನ್ನು ಬಿಟ್ಟಿದ್ದ ಸರೋಜಾ ಬಾದಾಮಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಳು. ಇತ್ತ ಮಂಜುನಾಥ್ ಬಟ್ಟೆ ಅಂಗಡಿಯ ಎದುರಿಗೆ ಹೋಟೆಲ್ ನಡೆಸುತ್ತಿದ್ದನು. ಹೀಗಿರುವಾಗ ಗಂಡಯಿಲ್ಲದೇ ಒಬ್ಬಂಟಿಯಾಗಿದ್ದ ಸರೋಜಾನಿಗೆ ಬಟ್ಟೆ ಅಂಗಡಿಯ ಮುಂದೆ ಹೋಟೆಲ್ ನಡೆಸುತ್ತಿದ್ದ ಮಂಜುನಾಥನ ಜೊತೆಗೆ ಸ್ನೇಹ ಬೆಳೆಸಿಕೊಂಡಳು.
ಕೊನೆಗೆ ಈ ಸ್ನೇಹ ಸಲುಗೆಯಾಗಿ ಬೆಳೆದು ದೈಹಿಕ ಸಂಪರ್ಕಕ್ಕೂ ತಿರುಗಿತ್ತು. ಮದುವೆಯಾಗ್ತೀನಿ ಎಂದು ಹೇಳಿ ಸರೋಜಾಳನ್ನು ಮಂಜುನಾಥ್ ದೈಹಿಕವಾಗಿ ಬಳಸಿಕೊಳ್ಳುತ್ತಿದ್ದನು. ಅಷ್ಟೇ ಅಲ್ಲದೇ, ಕುಟುಂಬದವರಿಗೂ ತಿಳಿಯದಂತೆ ಅಂಗಡಿಯ ಹಣವನ್ನೆಲ್ಲ ತಾನು ತೆಗೆದುಕೊಳ್ಳುತ್ತಿದ್ದ. ತದನಂತರದಲ್ಲಿ ಮಂಜುನಾಥ್ ಹಾಗೂ ಸರೋಜಾಳ ನಡುವೆ ಗಲಾಟೆಯೂ ಆಗಿತ್ತು. ಈ ವಿಚಾರವು ಇಬ್ಬರ ಮನೆಯವರಿಗೂ ಗೊತ್ತಾಗಿತ್ತು.
ಹೀಗಾಗಿ ಮಂಜುನಾಥನ ವಿರುದ್ದ ಬಾದಾಮಿಯ ಗುಳೇದಗುಡ್ಡ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಲಾಗಿತ್ತು. ಈ ಕಾರಣದಿಂದಾಗಿ ಬಾದಾಮಿಯನ್ನು ಬಿಟ್ಟು ಬೆಂಗಳೂರಿಗೆ ಬಂದು ಬಟ್ಟೆ ಅಂಗಡಿ ತೆರೆಯಲು ಸರೋಜಾಳು ಮುಂದಾಗಿದ್ದಳು. ಆದರೆ ಸರೋಜಾಳ ಬೆನ್ನು ಬಿದ್ದಿದ್ದ ಮಂಜುನಾಥ್ ಕೇಸ್ ವಾಪಸ್ ತಗೋ ಮದ್ವೆ ಆಗ್ತೀನಿ ಎಂದು ಹೇಳಿದ್ದನು.
ಮತ್ತೆ ದೈಹಿಕವಾಗಿ ಬಳಸಿಕೊಂಡು ಹಣಕ್ಕೆ ಡಿಮ್ಯಾಂಡ್ ಮಾಡುವುದನ್ನು ಮತ್ತೆ ಶುರುಮಾಡಿದ್ದ. ಈತನ ಕಾಟ ತಡೆಯಲಾಗದೇ ಮಂಜುನಾಥನಿಗೆ ಒಂದು ಗತಿ ಕಾಣಿಸಲೇಬೇಕೆಂದು ಸರೋಜಾ ಫ್ಯಾಮಿಲಿಯವರು ನಿರ್ಧಾರ ಮಾಡಿ ಬಿಟ್ಟರು. ಹೀಗಾಗಿ ಮದುವೆ ಮಾತುಕತೆ ಮಾಡೋಣ ಎಂದು ಕರೆಸಿದ ಸರೋಜಾಳ ಕುಟುಂಬದವರು ಕ’ಲ್ಲಿನಿಂದ ಜ’ಜ್ಜಿ ಜೀ’ವ ತೆಗೆದಿದ್ದಾರೆ. ಮಂಜುನಾಥ್ ನಿಂದ ಪಾರಾಗಲು ಆತನ ಪ್ರಾಣವನ್ನೇ ತೆಗೆದ ಸರೋಜಾಳು ಇದೀಗ ಪೊಲೀಸರ ಅತಿಥಿಯಾಗಿ ವಿಚಾರಣೆ ಎದುರಿಸಿದ್ದಾಳೆ ಎನ್ನುವುದು ನಿಜಕ್ಕೂ ವಿಪರ್ಯಾಸ.