ಅಯ್ಯೋ, ನಮ್ಮ ಹುಡುಗನಿಗೆ ಹುಡುಗಿ ಹುಡುಕ್ತಾ ಇದಿವೀ. ಎಲ್ಲಿಯೂ ಹೆಣ್ಣು ಸಿಕ್ತಾ ಇಲ್ಲ. ನಿಮ್ಮ ಕಡೆ ಗೊತ್ತಿದ್ದವರು ಇದ್ರೆ ತಿಳಿಸಿ.. ಈ ತರ ಕೇಳೋದು ಇದೀಗ ಸಾಮಾನ್ಯವಾಗಿ ಬಿಟ್ಟಿದೆ. ಯಾಕಂದ್ರೆ ಹುಡುಗರಿಗೆ ಸರಿಯಾಗಿ ಹುಡುಗಿಯರು ಸಿಕ್ತಾನೇ ಇಲ್ಲ. ಹುಡುಗಿಯರ ಸಂಖ್ಯೆ ಹುಡುಗರಿಗೆ ಹೋಲಿಸಿದರೆ ಬಹಳ ಕಡಿಮೆ. ಹೆಣ್ಣು ಸಿಗದೇ ಇರುವುದಕ್ಕೆ ಇದೂ ಒಂದು ಕಾರಣ.
ಇನ್ನು ಇರುವ ಹೆಣ್ಣುಮಕ್ಕಳ ಬೇಡಿಕೆಯ ಲೀಸ್ಟ್ ಉದ್ದವಾಗಿರುತ್ತೆ. ಹಾಗಾಗಿ ಅವರು ಸೆಲೆಕ್ಟ್ ಮಾಡುವುದಕ್ಕಿಂತ ರಿಜೆಕ್ಟ್ ಮಾಡುವವರೇ ಹೆಚ್ಚು. ಇನ್ನು ಬೇರೆ ಬೇರೆ ಕೆಲಸದಲ್ಲಿ ಇರುವವರಿಗೆ ಹೇಗಾದರೂ ಹೆಣ್ನು ಸಿಗಬಹುದು. ಆದರೆ ರೈತರ ಮಕ್ಕಳಿಗೆ ಹೆಣ್ಣು ಸಿಗುವುದು ಮಾತ್ರ ಬಹಳ ಕಷ್ಟ. ಹುಡುಗ ರೈತಾಪಿ ಕೆಲಸವನ್ನು ಮಾಡುತ್ತಾ ಎಷ್ಟೇ ಹಣ ದುಡಿದರೂ ಆತ ಹಳ್ಳಿಯಲ್ಲಿ ಇರುತ್ತಾನೆ.
ತೋಟದ ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ಅವರನ್ನ ಮದುವೆಯಾಗುವುದಕ್ಕೆ ಯಾರೂ ಮುಂದೆ ಬರುವುದೇ ಇಲ್ಲ. ಇತ್ತೀಚ್ಗಿಗೆ ಹೆಣ್ಣಿಗೆ ಗಂಡು ಗಂಡಿಗೆ ಹೆಣ್ನು ಹುಡುಕಾಟಕ್ಕಾಗಿ ವಧು ವರರ ಹುಡುಕಾಟವನ್ನು ಮಂಡ್ಯಜಿಲ್ಲೆಯಲ್ಲಿ ನಡೆಸಲಾಗಿತ್ತು. ಇದರಲ್ಲಿ ರಿಜಿಸ್ಟರ್ ಆದವರ ಸಂಖ್ಯೆ ಕೇಳಿದ್ರೆ ನೀವು ನಿಜಕ್ಕೂ ಆಶ್ಚರ್ಯಪಡುತ್ತೀರಿ.
ಹೌದು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಒಕ್ಕಲಿಗ ವಧು-ವರ ಸಮಾವೇಶ ನಡೆಯಿತು. ಇದರಲ್ಲಿ ಹನ್ನೆರಡು ಸಾವಿರ ಮದುವೆಯಾಗದ ಹುಡುಗ ಹುಡುಗಿಯರು ರಿಜಿಸ್ಟರ್ ಮಾಡಿಕೊಂಡಿದ್ದರು. ಅದರಲ್ಲಿ 250 ಮಂದಿ ಹುಡುಗಿಯರು ಮಾತ್ರ ವರನಿಗಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಉಳಿದ 11,750 ಮಂದಿ ಯುವಕರು ಮದುವೆಯಾಗಲು ಹುಡುಗಿಯನ್ನು ಅರಸಿ ಬಂದು ರಿಜಿಸ್ಟರ್ ಮಾಡಿಕೊಂಡಿದ್ದರು. ಮಂಡ್ಯ ದಲ್ಲಿ ಇಷ್ಟು ಅಗಾಧ ಸಂಖ್ಯ್ರೆಯಲ್ಲಿ ಯುವಕರು ಮದುವೆಯಾಗದೇ ಉಳಿದಿದ್ದಾರೆ ಅಂದ್ರೆ ನಿಜಕ್ಕೂ ಆಶ್ಚರ್ಯದ ಸಂಗತಿಯಾಗಿದೆ. ರೈತರ ಮಕ್ಕಳನ್ನು ಮದುವೆಯಾಗಲು ಹುಡುಗಿಯರು ಹಿಂದೇಟು ಹಾಕುತ್ತಾರೆ.
ರೈತರಿಗೆ ಸರ್ಕಾರ ಸರಿಯಾದ ಮನ್ನಣೆ ನೀಡಿ ಕೃಷಿಯನ್ನೂ ಒಂದು ಪ್ರಮುಖ ಉದ್ಯೋಗ ಎಂದು ಗುರುತಿಸಿ, ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡಿದ್ರೆ ಇಂಥ ಪರಿಸ್ಥಿತಿ ಎದುರಾಗುತ್ತಿರಲಿಲ್ಲವೋ ಏನೋ! ರೈತ ದೇಶದ ಅರ್ಥಿಕತೆಯ ಬೆನ್ನೆಲುಬು. ನಾವು ಒಂದು ತುತ್ತು ಅನ್ನ ತಿನ್ನಬೇಕಾದರೂ ಅದರ ಮೇಲೆ ರೈತನ ಋಣ ಇದೆ ಎನ್ನುವುದನ್ನು ನಾವು ಮರೆಯಬಾರದು.
ಹೌದು ರೈತರ ಮಕ್ಕಳಿಗೆ ಮದುವೆಯಾಗುವ ವಿಷಯದಲ್ಲಿಯೂ ಎಷ್ಟು ಸಮಸ್ಯೆ ಇದೆ ಅನ್ನೋದನ್ನ ನೀವು ಮಂಡ್ಯದಲ್ಲಿ ನಡೆದ ವಧು ವರರ ಸಮಾವೇಶ ನೋಡಿದ್ರೆ ಅರಿವಿಗೆ ಬರುತ್ತೆ. ರಾಜ್ಯದ ಬೇರೆ ಬೇರೆ ಬ್ಃಆಗಗಳಿಂದ ಇಲ್ಲಿಗೆ ಹೆಣ್ಣನ್ನು ಅರಸಿ ಯುವಕರು ಬಂದಿದ್ದರು. ಇದರಲ್ಲಿ ಬಹುತೇಕ ಹೆಚ್ಚಿನ ಜನ ರೈತಾಪಿ ಕೆಲಸ ಮಾಡುವವರೇ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ. ಇದರಲ್ಲಿಯೇ ಗೊತ್ತಾಗುತ್ತದೆ. ಇಂದು ಕೃಷಿ ಬೇಡ ಎಂದು ಹಳ್ಳಿಯನ್ನು ತೊರೆದು ಯುವಕರು ಪಟ್ಟಣವನ್ನು ಯಾಕೆ ಸೇರಿಕೊಳ್ಳುತ್ತಿದ್ದಾರೆ ಅಂತ ಅಲ್ವೇ!