ಸ್ನೇಹಿತರೆ, ಇತ್ತೀಚಿಗೆ ಅ-ಕ್ರ-ಮ ಸಂಬಂಧಗಳ ಕೇ-ಸ್ ಗಳು ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ಮದುವೆಯಾದ ಪತಿ ಇಲ್ಲವೇ ಪತ್ನಿ ಮದುವೆಯಾಗಿ ಸ್ವಲ್ಪ ಸಮಯದ ನಂತರ ಇನ್ನೊಬ್ಬ ಹುಡುಗ ಅಥವಾ ಹುಡುಗಿಯ ಜೊತೆ ಸಂಬಂಧ ಬೆಳೆಸಲು ಮುಂದಾಗುತ್ತಾರೆ. ಅದರಲ್ಲೂ ಎರಡು ಮೂರು ಮಕ್ಕಳಿರುವವರು ಕೂಡ ಹೀಗೆ ಬೇರೊಬ್ಬರ ಪ್ರೀತಿಯಲ್ಲಿ ಬೀಳುವುದು ನಿಜಕ್ಕೂ ಅಸಹನೀಯ. ಸದ್ಯ ಇಂತಹ ಒಂದು ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ. ಆದರೆ ಇಲ್ಲಿ ಹೆಂಡತಿ ಕೊಟ್ಟ ಟ್ವಿಸ್ಟ್ ಮಾತ್ರ ಸಕ್ಕತ್ತಾಗಿದೆ ನೋಡಿ.
ಹೈದರಾಬಾದ್ ನ ಪ್ರಗತಿ ನಗರದಲ್ಲಿ ಲಕ್ಷ್ಮಣ್ ಹಾಗೂ ಸೌಜನ್ಯ ದಂಪತಿ ವಾಸವಾಗಿದ್ದಾರೆ. ಇವರಿಬ್ಬರು ಮದುವೆಯಾಗಿ ಸುಮಾರು ವರ್ಷಗಳೇ ಕಳೆದಿವೆ. ಇವರಿಗೆ ಮುದ್ದಾದ ಮಕ್ಕಳು ಕೂಡ ಇದ್ದಾರೆ. ಮದುವೆಯಾಗಿ ಇಲ್ಲಿಯವರೆಗೆ ಯಾವುದೇ ಕಲಹವು ಇಲ್ಲದೆ ಚೆನ್ನಾಗಿ ಜೀವನ ನಡೆಸಿಕೊಂಡು ಬಂದಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಲಕ್ಷ್ಮಣ್ ತನ್ನ ವರಸೆ ಬದಲಾಯಿಸಿದ್ದಾನೆ. ಹೆಂಡತಿ ಇದ್ದರೂ ಕೂಡ ಬೇರೊಬ್ಬ ಹೆಂಗಸಿನ ಸಹವಾಸ ಮಾಡಿದ್ದಾನೆ.
ಹೌದು, ಲಕ್ಷ್ಮಣ್, ಅನುಷಾ ಎನ್ನುವ ಮಹಿಳೆಯ ಸಹವಾಸ ಮಾಡಿದ್ದು ಆಕೆಗಾಗಿ ಪ್ರಗತಿ ನಗರದಲ್ಲಿಯೇ ಒಂದು ಫ್ಲಾಟ್ ಕೂಡ ಖರೀದಿ ಮಾಡಿದ್ದ. ದಿನದ ಹೆಚ್ಚು ಸಮಯವನ್ನು ಅನುಷಾ ಜೊತೆಗೆ ಕಳೆಯಲು ಶುರು ಮಾಡಿದ. ಸೌಜನ್ಯಾಳಿಗೆ ಗಂದನ ವರ್ತನೆಯಿಂದ ಸ್ವಲ್ಪ ಅನುಮಾನವ ಬಂತು. ಆದರೂ ಗಂಡ ಒಳ್ಳೆಯವನು ಎನ್ನುವ ಕಾರಣಕ್ಕೆ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ದಿನ ಕಳೆದಂತೆ ಲಕ್ಷ್ಮಣ್ ಅನುಷಾ ಜೊತೆಗೆ ಆಕೆಯ ಫ್ಲ್ಯಾಟ್ ನಲ್ಲಿ ಇರಲು ಆರಂಭಿಸಿದ. ಇದರಿಂದ ಸೌಜನ್ಯಾಳ ಅನುಮಾನ ಇನ್ನಷ್ಟು ಗಟ್ಟಿಯಾಗಿತ್ತು.
ಕೊನೆಗೆ ತನ್ನ ಸಂಬಂಧಿಕರನ್ನು ಕರೆದುಕೊಂಡು ಲಕ್ಷ್ಮಣ್ ಹಾಗೂ ಅನುಷಾ ಇದ್ದ ಫ್ಲ್ಯಾಟ್ ಗೆ ಸೌಜನ್ಯ ಹೋಗಿದ್ದಾಳೆ. ಅಷ್ಟು ಅಲ್ಲದೆ ಬಾಗಿಲು ಲಾಕ್ ಆಗಿದ್ದನ್ನ ನೋಡಿ ಅದನ್ನ ಮುರಿದು ಮನೆಯ ಒಳಗೆ ಹೋಗಿದ್ದಾರೆ. ಅನುಷಾ ಜೊತೆ ಬೆಡ್ ರೂಮಿನಲ್ಲಿ ಇದ್ದ ಲಕ್ಷ್ಮಣ್ ಹೆಂಡತಿ ಸೌಜನ್ಯಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾನೆ. ಇವರಿಬ್ಬರನ್ನ ಒಟ್ಟಿಗೆ ನೋಡಿದ ಸೌಜನ್ಯಾಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಕೂಡಲೇ ಲಕ್ಷ್ಮಣ್ ನನ್ನು ಚೆನ್ನಾಗಿ ಥ-ಳಿ-ಸಿದ್ದಾಳೆ. ಅಲ್ಲದೆ ಅನುಷಾಗೂ ಕೂಡ ನಾಲ್ಕು ಏ-ಟು ನೀಡಿದ್ದಾಳೆ. ಇಬ್ಬರೂ ಸೌಜನ್ಯಾಳಿಂದ ಗೂ-ಸಾ ತಿಂದಿದ್ದಾರೆ.
ಕೊನೆಗೆ ಈ ಪ್ರಕರಣ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿತ್ತು. ಲಕ್ಷ್ಮಣ್, ಸೌಜನ್ಯ, ಅನುಷಾ ಈ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದರು. ಲಕ್ಷ್ಮಣ ಮಾಡಿರುವ ತಪ್ಪಿಗೆ ಆತನನ್ನು ಸುಲಭವಾಗಿ ಜೈಲಿಗೆ ಕಳುಹಿಸಬಹುದಿತ್ತು. ಆದರೆ ಸೌಜನ್ಯ ಹಾಗೆ ಮಾಡಲಿಲ್ಲ ತನ್ನ ಪತಿಯ ಬಗ್ಗೆ ಕಂಪ್ಲೇಂಟ್ ಕೊಟ್ಟಿಲ್ಲ. ಆತ ಕೆಟ್ಟವನಾದರೂ ತನ್ನ ಪತಿ ಎನ್ನುವ ಕಾರಣಕ್ಕೆ ಅವನನ್ನ ಹಾಗೆಯೇ ಬಿಟ್ಟಿದ್ದಾಳೆ. ಇನ್ನಾದರೂ ಆಕೆಯ ಜೊತೆ ಮರ್ಯಾದೆಯಿಂದ ಬದುಕು ಎಂದು ಪೊಲೀಸರು ಬುದ್ದಿ ಹೇಳಿ ಲಕ್ಷ್ಮಣನ್ನು ಮನೆಗೆ ಕಳುಹಿಸಿದ್ದಾರೆ.