ಸದ್ಯ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಧಾರಾವಾಹಿಗಳು ಜನರಿಗೆ ಮೆಚ್ಚಿನ ಧಾರಾವಾಹಿಗಳು ಎನಿಸಿವೆ. ಅದರಲ್ಲೂ ಲಕ್ಷಣ ಧಾರಾವಾಹಿ ಮಾತ್ರ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದೆ. ಇದಕ್ಕೆ ಕಾರಣ ಆ ಧಾರವಾಹಿಯಲ್ಲಿ ಬರುವ ನಕ್ಷತ್ರ ಎನ್ನುವ ಪಾತ್ರ. ಪಕ್ಕಾಗಿರುವ ಹುಡುಗಿಯೊಬ್ಬಳ ಜೀವನದ ಕಥೆ ವ್ಯಥೆ ಇದು. ಹೌದು, ನೋಡೋದಕ್ಕೆ ಕಪ್ಪಾಗಿದ್ದಾಳೆ ಎನ್ನುವ ಕಾರಣಕ್ಕೆ ಸಾಕಷ್ಟು ಜನರಿಂದ ತಿರಸ್ಕರಿಸಲ್ಪಟ್ಟ ನಕ್ಷತ್ರ ಎನ್ನುವ ಅಪರೂಪದ ಹುಡುಗಿಯ ಜೀವನದ ಕಥೆ ಇದು.
ನಕ್ಷತ್ರ ಈ ವರೆಗೆ ಯಾರನ್ನು ತನ್ನ ತಂದೆ ತಾಯಿ ಎಂದು ಭಾವಿಸಿದ್ದಳೋ ಅವರು ಆಕೆಯ ತಂದೆ ತಾಯಿಯೇ ಅಲ್ಲ. ಆದರೆ ಚಿಕ್ಕ ವಯಸ್ಸಿನಿಂದ ಅವರೊಂದಿಗೆ ಬೆಳೆದಿದ್ದಕ್ಕೆ ಸಾಕಷ್ಟು ಪ್ರೀತಿ ಬೆಳೆಸಿಕೊಂಡಿದ್ದಾಳೆ. ನಕ್ಷತ್ರ ಇದೀಗ ದೊಡ್ಡ ಮನೆಯ ಅತ್ಯಂತ ಶ್ರೀಮಂತ ತಂದೆ ತಾಯಿಯ ಮಗಳು ಅಂತ ಗೊತ್ತಾದರೂ ಸ್ವಲ್ಪವು ಬಿಗುಮಾನ ಪಡೆದೆ ಇರುವ ಸರಳ ಕ್ಯಾರೆಕ್ಟರ್ ನಕ್ಷತ್ರ ಅವಳದ್ದು. ನಕ್ಷತ್ರ ನೋಡುವುದಕ್ಕೆ ಕಪ್ಪು.
ಹಾಗಾಗಿ ಈ ಮೊದಲು ಯಾರನ್ನು ತಂದೆ ತಾಯಿ ಎಂದು ಕರೆಯುತ್ತಿದ್ದರು ಅವರಿಬ್ಬರು ಬಹಳ ಬೆಳ್ಳಗೆ ಇದ್ದರು ಹಾಗಾಗಿ ತಂದೆ ಸದಾ ನೀನು ಕಪ್ಪಗಿದ್ದಿಯ ಎನ್ನುವ ಕಾರಣಕ್ಕೆ ಹೀಯಾಳಿಸುತ್ತಾ ಆಕೆಯ ಕಣ್ಣಲ್ಲಿ ನೀರು ತರಿಸುತ್ತಾ ಇರುತ್ತಾನೆ ಸಾಕಿದ ತಂದೆ. ಕೊನೆಗೂ ನಕ್ಷತ್ರ ತಾನು ಎಲ್ಲಿ ಸೇರಬೇಕು ಅಲ್ಲಿ ಸೇರಿದ್ದಾಳೆ ಇದೀಗ ಮದುವೆಯು ಆಗಿ ಸಾಕಷ್ಟು ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಹಾಗಾದ್ರೆ ಲಕ್ಷಣ ಧಾರಾವಾಹಿಯಲ್ಲಿ ನಟಿಸುವ ನಕ್ಷತ್ರ ನಿಜಕ್ಕೂ ಇಷ್ಟು ಕಪ್ಪಗಿದ್ದಾಳ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ನಕ್ಷತ್ರ ಶ್ರೀಮಂತ ತಂದೆ ತಾಯಿಯನ್ನ ಹುಡುಕಿದ್ದಾಳೆ. ತನ್ನ ಹೆತ್ತ ತಂದೆ ತಾಯಿಯ ಪ್ರೀತಿಯನ್ನು ಪಡೆದುಕೊಂಡಿದ್ದಾಳೆ. ಈ ಸಮಯದಲ್ಲಿ ತಂದೆಗೆ ಅಪಾಯ ಮಾಡುತ್ತಿದ್ದ ವ್ಯಕ್ತಿ ಯಾರು ಎಂಬುದನ್ನು ಕಂಡುಹಿಡಿದು ಅವರನ್ನು ನಕ್ಷತ್ರ ತರಾಟೆಗೆ ತೆಗೆದುಕೊಂಡಿದ್ದಳು. ಇನ್ನು ಲಕ್ಷಣ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಗ್ನಿಸಾಕ್ಷಿ ಖ್ಯಾತಿಯ ಸುಕೃತ ನಾಗ್. ಬಹಳ ಬೆಳ್ಳಗೆ ಮುದ್ದಾಗಿ ಇರುವ ಸುಕೃತ ನಾಗ್ ಲಕ್ಷಣ ಧಾರಾವಾಹಿಯಲ್ಲಿ ಸೊಕ್ಕಿದ ಗೊಂಬೆಯಂತೆ ಕಾಣಿಸಿಕೊಳ್ಳುತ್ತಾರೆ. ನೆಗೆಟಿವ್ ಶೇಡ್ ಆಗಿದ್ರು ಇವರ ಪಾತ್ರವನ್ನು ಜನ ಹೆಚ್ಚಾಗಿ ಇಷ್ಟಪಟ್ಟಿದ್ದಾರೆ.
ಅಂದಹಾಗೆ ನಿಜ ಜೀವನದಲ್ಲಿ ನಕ್ಷತ್ರ ಪಾತ್ರಧಾರಿ ಅಷ್ಟು ಕಪ್ಪಾಗಿಲ್ಲ. ಲಕ್ಷಣ ಧಾರಾವಾಹಿಯಲ್ಲಿ ನಕ್ಷತ್ರ ಪಾತ್ರದಲ್ಲಿ ಫೇಮಸ್ ಆಗಿರುವ ನಟಿ ವಿಜಯ. ಇವರನ್ನು ಈ ಧಾರಾವಾಹಿಗಾಗಿ ಮೇಕಪ್ ಮಾಡಿ ಕಪ್ಪು ಮಾಡಲಾಗಿದೆ. ಆದರೆ ನಿಜ ಜೀವನದಲ್ಲಿ ಬಹಳ ಸುಂದರವಾಗಿ ಹಾಗೂ ಬೆಳ್ಳಗೆ ಇರುವ ನಟಿ ಲಕ್ಷಣ. ನಟ ಜಗನ್ ಅವರ ನಿರ್ಮಾಣದಲ್ಲಿ ಲಕ್ಷಣ ಧಾರಾವಾಹಿ ಮೂಡಿ ಬರುತ್ತಿದೆ. ವಿಜಯ ಮೊದಲ ಬಾರಿಗೆ ಕಿರುತೆರೆ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಆದರೆ ನಿಜಕ್ಕೂ ಇದು ಇವರ ಮೊದಲ ಅನುಭವ ಎಂದು ಹೇಳಲು ಸಾಧ್ಯವೇ ಇಲ್ಲ ಯಾಕಂದ್ರೆ ಅಷ್ಟರಮಟ್ಟಿಗೆ ಅವರ ನಟನೆಯಲ್ಲಿ ಪಕ್ವತೆ ಇದೆ. ವಿಜಯ ಜನಿಸಿದ್ದು ಬೆಂಗಳೂರಿನಲ್ಲಿ. ಅವರು ಇಲ್ಲಿಯೇ ವಿದ್ಯಾಭ್ಯಾಸ ಮಾಡಿ ತಮ್ಮ 24 ವರ್ಷದಲ್ಲಿ ಧಾರಾವಾಹಿ ನಟನೆಯ ಮೂಲಕ ಉತ್ತಮ ನೆಲೆ ಕಂಡುಕೊಂಡಿದ್ದಾರೆ.
ನಟಿ ವಿಜಯಾ ಧಾರಾವಾಹಿಯಲ್ಲಿ ಅವಕಾಶ ಪಡೆದುಕೊಳ್ಳುವುದಕ್ಕೂ ಮೊದಲು ಮಾಡಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಇದೀಗ ನಕ್ಷತ್ರ ಆಗಿ ಕನ್ನಡಿಗರ ಮನೆ ಮಗಳೇ ಆಗಿಹೋಗಿದ್ದಾರೆ. ನೀವು ಈ ಧಾರಾವಾಹಿಯ ಅಭಿಮಾನಿಯಾಗಿದ್ರೆ ತಪ್ಪದೇ ನಮಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.