ಇದು ಈಗಿನ ಕಾಲದಲ್ಲಿ ಫೇಸ್ ಬುಕ್ ಪ್ರೀ’ತಿಗೆ ಬಿದ್ದು ಕೊನೆಗೆ ಮೋ’ಸ ಹೋಗುವಂತವರಿಗೆ ಎ’ಚ್ಚರಿಸುವ ಕಥೆ. ಇದು ನಡೆದಿರುವುದು ಕೇರಳದ ಕುಂದಾರದಲ್ಲಿ. ಅಲ್ಲಿನ ನಿವೃತ್ತ ಪಂಚಾಯತ್ ಆಫೀಸರ್ ಮೋಹನನ್ ಹಾಗೂ ಬ್ಯೂಟಿಷಿಯನ್ ಆಗಿ ಕೆಲಸ ಮಾಡುವ ಬಿಂದು ಅನ್ನುವವರ ಒಬ್ಬಳೇ ಮಗಳು ಕೃತಿ.
ಆಕೆಯನ್ನು 23 ನೇ ವಯಸ್ಸಿಗೆ ತರಚೀರಾ ಊರಿನ ಯುವಕನ ಜೊತೆ 2015 ರಲ್ಲಿ ಮದುವೆ ಮಾಡಿರುತ್ತಾರೆ. ಆದರೆ ಅವರ ದಾಂಪತ್ಯ ಜೀವನ ಸರಿ ಹೋಗದೆ ಕೇವಲ ಆರು ತಿಂಗಳಲ್ಲಿ ವಿಚ್ಛೇ-ದನ ಪಡೆದು ದೂರ ಆಗುತ್ತಾರೆ. ಆ ಸಮಯದಲ್ಲಿ ಕೃತಿ ನಾಲ್ಕು ತಿಂಗಳ ಗರ್ಭಿಣಿ. ಕೊನೆಗೆ ತಾಯಿ ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಕೃತಿ ಅಲ್ಲಿಯೆ ಜೀವನ ನಡೆಸುತ್ತಾಳೆ.
ಮಗಳಿಗೆ ಎರಡು ವರ್ಷ ಆಗಿತ್ತು. ಈ ಸಮಯದಲ್ಲಿ ಕೃತಿಗೆ ಫೇಸ್ ಬುಕ್ ನಲ್ಲಿ ಕೊಲ್ಲಂ ನಿವಾಸಿ ವೈಸಾಕ್ ಅನ್ನುವವನ ಪರಿಚಯ ಆಗುತ್ತದೆ. ಆತ ಗಲ್ಫ್ ನಲ್ಲಿ ಕೆಲಸ ಮಾಡುತ್ತಿದ್ದ. ವೈಸಾಕ್ ನ ಕಳಕಳಿ, ಮಾತು, ಎಲ್ಲವೂ ಕೃತಿಗೆ ಇಷ್ಟವಾಗಿತ್ತು. ಮಗಳ ಜೊತೆಯೂ ಪ್ರೀತಿಯಿಂದ ಮಾತನಾಡುತ್ತಿದ್ದ ಆತನನ್ನು ಮದುವೆ ಆಗಲು ನಿರ್ಧರಿಸಿದ್ದಳು. ಮಗಳ ಮೂರನೆ ವರ್ಷದ ಹುಟ್ಟುಹಬ್ಬಕ್ಕೆ ವೈಸಾಕ್ ನನ್ನು ಮನೆಗೆ ಕರೆಸಿದ ಕೃತಿ ತಾವಿಬ್ಬರೂ ಮದುವೆ ಆಗುವುದಾಗಿ ಹೇಳಿದ್ದರು. ಆದರೆ ಇದಕ್ಕೆ ಕೃತಿ ತಂದೆ ತಾಯಿ ಒಪ್ಪಿರಲಿಲ್ಲ.
ಆದರೆ ಕೃತಿ ಕೇಳದೇ ಇದ್ದಾಗ ಕೊನೆಗೆ ಇಬ್ಬರಿಗೂ ಮದುವೆ ಮಾಡಿಸಿಕೊಟ್ಟರು. ಮದುವೆ ಆಗಿ ತಿಂಗಳಲ್ಲಿ ಗಲ್ಫ್ ಗೆ ಹೋದ ವೈಸಾಕ್ ಒಂದೇ ತಿಂಗಳಲ್ಲಿ ಕೆಲಸ ಕಳೆದು ಕೊಂಡು ವಾಪಾಸ್ ಬಂದಿದ್ದ. ಬಂದು ಹೆಂಡತಿ ಹಾಗೂ ಆಕೆಯ ತಾಯಿಯ ಖಾತೆಯಿಂದ ಹತ್ತು ಲಕ್ಷ ಹಣ ತೆಗೆದು ಬ್ಯುಸಿನೆಸ್ ಶುರು ಮಾಡಿದ್ದ. ಆದರೆ ಅದು ಲಾಸ್ ಆಗಿತ್ತು. ಹೀಗಾಗಿ ಪದೇ ಪದೇ ಕೃತಿ ಜೊತೆ ಹಣಕ್ಕಾಗಿ ಪೀ-ಡಿಸಲು ಶುರು ಮಾಡಿದ್ದ. ತಾನು ಒಳ್ಳೆಯವನು ಎಂದು ನಂಬಿದ್ದ ವೈಸಾಕ್ ಎಂದು ಗೊತ್ತಾಗಿ ತನ್ನ ಮನೆಗೆ ಹೋಗಿ ಎಲ್ಲವನ್ನೂ ಹೇಳಿದ್ದಳು. ಅವರು ಮಗಳನ್ನು ಮತ್ತೆ ವಾಪಾಸ್ ಕಳಿಸಲಿಲ್ಲ.
ಕೆಲ ತಿಂಗಳ ನಂತರ ಕೃತಿ ಮನೆಗೆ ಬಂದ ವೈಸಾಕ್ ತಾನು ಬದಲಾಗಿದ್ದೇನೆ, ನನಗೆ ಯಾವ ಹಣವೂ ಬೇಡ ಕೃತಿ ಜೊತೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದ. ಅದರಂತೆ ಒಳಗೆ ಹೋದ ವೈಸಾಕ್ ಸುಮಾರು ಗಂಟೆಗಳ ಕಾಲ ಕೃತಿ ಜೊತೆ ಮಾತನಾಡಿದ್ದ, ಹೀಗೆ ಸುಮಾರು ಹೊತ್ತಿನ ಮೇಲೆ ಕೃತಿ ತಾಯಿ ಮಗಳನ್ನು ನೋಡಲು ಹೋದಾಗ ಆಕೆ ಹೆ-ಣವಾಗಿದ್ದಳು. ಸಿಟ್ಟಲ್ಲಿ ವೈಸಾಕ್ ದಿಂಬಿನಿಂದ ಕೃತಿಯ ಉ-ಸಿರುಕಟ್ಟಿ-ಸಿ ಸಾ-ಯಿಸಿದ್ದ. ಪೋ-ಲೀಸರು ವೈಸಾಕ್ ನನ್ನು ಬಂಧಿಸಿ ಶಿ-ಕ್ಷೆ ಕೊಟ್ಟರೂ ಮೂರು ವರ್ಷದ ಮಗಳು ಅನಾಥಳಾಗಿದ್ದಳು. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ತಿಳಿಸಿ.