ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಕನ್ನಡದ ನಟಿಯರು ತುಂಬಾನೇ ಹಿಟ್ ಆಗಿದ್ದಾರೆ. ಅಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವುದು ನಿಜಕ್ಕೂ ನಾವು ಹೆಮ್ಮೆ ಪಡಬೇಕಾಗಿರುವ ವಿಷಯ. ನಟಿ ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ ಅದೇ ರೀತಿ ನ್ಯಾಷನಲ್ ಕ್ರಷ್ ಆಗಿರುವ ರಶ್ಮಿಕಾ ಮಂದಣ್ಣ ಇವರೆಲ್ಲರೂ ಕನ್ನಡದ ಬೆಡಗಿಯರು. ಇದೀಗ ಅದೇ ಸಾಲಿನಲ್ಲಿ ಸೇರಿಕೊಂಡ ನಟಿ ಕೃತಿ ಶೆಟ್ಟಿ. ಇವರು ಇದೀಗ ತೆಲುಗಿನ ಟಾಪ್ ನಟಯಾಗಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
ಅದರಲ್ಲೂ ತೆಲುಗು ಸಿನಿಮಾದಲ್ಲಿ ಕೃತಿ ಶೆಟ್ಟಿಯವರನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ದೇಶಕರು ಕಾಲ್ತುದಿಯಲ್ಲಿ ಕಾಯುತ್ತಿದ್ದಾರೆ. ಕೃತಿ ಶೆಟ್ಟಿಯವರು ಮೊತ್ತ ಮೊದಲು ನಟಿಸಿರುವ ಸಿನಿಮಾ ಹಿಂದಿಯ ಸೂಪರ್ 30. ಆ ನಂತರ ಅವರು ನಟಿಸಿರುವ ಸಿನಿಮಾ ತೆಲುಗಿನ ಉಪ್ಪೇನಾ. ಅವರ ಈ ಉಪ್ಪೇನಾ ಸಿನಿಮಾ ಬಂಪರ್ ಹಿಟ್ ಆಗಿತ್ತು. ಆ ಚಿತ್ರದ ಗೆಲುವು ಕೃತಿ ಶೆಟ್ಟಿ ಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆಯಿತು.
ಆ ನಂತರ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ ನಟಿ ಕೃತಿ. ಉಪ್ಪೇನ ಸಿನಿಮಾ ನಂತರ ಅವರು, ನಾನಿ ಹಾಗೂ ಸಾಯಿ ಪಲ್ಲವಿ ನಟನೆಯ ‘ಶ್ಯಾಮ್ ಸಿಂಗಾ ರಾಯ್’ ಚಿತ್ರದಲ್ಲಿ, ಅದೇ ರೀತಿ, ನಾಗಾರ್ಜುನ ಹಾಗೂ ನಾಗ ಚೈತನ್ಯ ನಟನೆಯ ‘ಬಂಗಾರ್ರಾಜು’ ಸಿನಿಮಾದಲ್ಲಿ ಹೀಗೆ ಹಲವು ಚಿತ್ರಗಳು ಕೃತಿಯನ್ನು ಬಹುಬೇಡಿಕೆಯ ನಟಿಯನ್ನಾಗಿ ಮಾಡಿದೆ.ಇದೀಗ ತೆಲುಗು ಮಾತ್ರವಲ್ಲದೆ ತಮಿಳು ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ ತೆಲುಗಿನಲ್ಲಿ ಮಾತ್ರವಲ್ಲದೆ ತಮಿಳಿನಲ್ಲಿ ಕೂಡ ಅಭಿಮಾನಿ ಬಳಗ ಹೆಚ್ಚಿಸಿಕೊಂಡಿದ್ದಾರೆ. ಇದೀಗ ನಟಿ ಕೃತಿ ಶೆಟ್ಟಿಯ ಕೈಯಲ್ಲಿ ಹಲವು ಸಿನಿಮಾಗಳಿವೆ.ಇತ್ತೀಚಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ನಂತರ 3-4 ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಮಂಗಳೂರು ಬೆಡಗಿ ಕೃತಿ ಶೆಟ್ಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅತ್ಯಧಿಕ ಫಾಲೋವರ್ಸ್ ಗಳನ್ನು ಕಡಿಮೆ ಅವಧಿಯಲ್ಲಿಯೇ ಪಡೆದುಕೊಂಡವರು. ಹೀಗೆ ಶೈನ್ ಆಗುತ್ತಿರುವ ನಟಿ ಕೃತಿ ಶೆಟ್ಟಿಯವರು, ತಮ್ಮ ಹೊಸ ಸಿನಿಮಾದ ಕುರಿತಾಗಿ ಪ್ರಚಾರ ಮಾಡುವ ವೇಳೆ ತಮಗಾದ ಅನುಭವ ವನ್ನು ಹಂಚಿಕೊಂಡಿದ್ದಾರೆ.
“ನನ್ನ ಮಾತೃ ಭಾಷೆ ತುಳು,ಆದರೆ ನಾನು ತೆಲುಗು ತುಂಬಾ ಚೆನ್ನಾಗಿ ಮಾತಾನಾಡುತ್ತೇನೆ. ನನಗೆ ತಮಿಳು ಅಷ್ಟು ಸರಿಯಾಗಿ ಬರಲ್ಲ, ಹಾಗಾಗಿ ನನ್ನ ಸಿನಿಮಾ ನಿರ್ದೇಶಕ ಲಿಂಗು ಸ್ವಾಮಿಯವರು ತೆಲುಗನ್ನೇ ತಮಿಳು ಟೋನ್ ನಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅವರು ಮಾತನಾಡುವುದು ಅರ್ಥವೇ ಆಗುತ್ತಿರಲಿಲ್ಲ, ಅವರ ಜೊತೆ ನಾನು ಹತ್ತು ದಿನ ಕಳೆದಿದ್ದೇನೆ, ನನಗೆ ಭಾಷೆ ಅರ್ಥ ವಾಗದೆ ತುಂಬಾ ಕಷ್ಟ ಆಗಿತ್ತು ಅಂದಿದ್ದಾರೆ.
ಕೃತಿ ಶೆಟ್ಟಿಯವರಿಗೆ, ಅಲ್ಲಿರುವವರು ಲಿಂಗು ಸ್ವಾಮಿಯವರು ಏನು ಹೇಳುತ್ತಿದ್ದಾರೆ ಅನ್ನುವುದನ್ನು ಹೇಳಿ ಕೊಡುತ್ತಿದ್ದರಂತೆ. ಇನ್ನು ಕೃತಿ ಶೆಟ್ಟಿಯವರು ತಮ್ಮ ಹೊಸ ಸಿನಿಮಾದಲ್ಲಿ ರೇಡಿಯೋ ಜಾಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಮುಂದಿನ ಸಿನಿಮಾದಲ್ಲಿ ಕೃತಿ ಶೆಟ್ಟಿಯವರು ಎನ್ಟಿಆರ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಕೃತಿ ಶೆಟ್ಟಿ ಸದ್ಯ ವಾನಂಗನ್ ಮತ್ತು ಮಾಚರ್ಲ ನಿಯೋಜಕವರ್ಗಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.