ಸತಿ ಪತಿಯರು ಪ್ರೀತಿ ವಿಶ್ವಾಸದಿಂದ ಬದುಕಿ ಬಾಳಿದ ಕಾಲವಿತ್ತು, ಆದರೆ ಇದೀಗ ಕಾಲ ಬದಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ದಂಪತಿಗಳ ಸಂಬಂಧದಲ್ಲಿ ಭಿನ್ನಾಭಿಪ್ರಾಯ, ಮೋಸ, ಜಗಳ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇಂತಹದ್ದೇ ಘಟನೆಯೊಂದು ಕರೀಂನಗರದಲ್ಲಿ ಬೆಳಕಿಗೆ ಬಂದಿದೆ. ಇಬ್ಬರು ಯುವಕರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ಪತಿಯ ಕಥೆ ಮುಗಿಸಲು ಯೋಜನೆ ರೂಪಿಸಿದ್ದಳು.
ಕೊನೆ ಗಳಿಗೆಯಲ್ಲಿ ಅವರಿಂದ ತಪ್ಪಿಸಿಕೊಂಡು ಬಂದ ಪತಿ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ದೂರಿನ ಅನ್ವಯ ಆ’ರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತಷ್ಟು ಸಂಚಲನ ಮೂಡಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಆದರೆ ಡಿಸೆಂಬರ್ 14 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿರುವುದು ವಿಪರ್ಯಾಸ ಎನ್ನಬಹುದು.
ಕಾವೇರಿ ಎಂಬ ಮಹಿಳೆ ಕೆಲ ವರ್ಷಗಳ ಹಿಂದೆ ಕೃಷ್ಣವಂಶಿ ಎಂಬಾತನನ್ನು ಮದುವೆಯಾಗಿದ್ದಳು. ಇಬ್ಬರೂ ಕರೀಂನಗರದಲ್ಲಿ ನೆಲೆಸಿದ್ದರು. ಕೃಷ್ಣವಂಶಿ ಆಫೀಸಿಗೆ ಹೋದ ಮೇಲೆ ಕಾವೇರಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಈ ವೇಳೆ ಆಕೆಗೆ ಅದೇ ಪ್ರದೇಶದ ಸಮನ್ವಿತ್ ಮತ್ತು ಗಣೇಶ್ ಎಂಬ ಯುವಕರ ಜೊತೆಗೆ ಪರಿಚಯವಾಗಿದೆ. ಆ ಪರಿಚಯ ಸ್ವಲ್ಪ ಅ-ಕ್ರಮ ಸಂ’ಬಂಧಕ್ಕೆ ಕಾರಣವಾಯಿತು.
ಪತಿಗೆ ತಿಳಿಯದಂತೆ ವಿವಾಹಿತ ಮಹಿಳೆ ತನ್ನ ಇಬ್ಬರು ಗೆಳೆಯರೊಂದಿಗೆ ಎರಡು ವರ್ಷಗಳಿಂದ ಸಂಸಾರ ನಡೆಸಿದ್ದಾಳೆ. ಈ ವಿಚಾರ ತಿಳಿದ ಕೃಷ್ಣವಂಶಿ ಪತ್ನಿಯನ್ನು ನಿಂದಿಸಿದ್ದರು. ತನ್ನ ನಡವಳಿಕೆಯನ್ನು ಬದಲಾಯಿಸಿಕೊಳ್ಳಲು ಹೇಳಿದರು. ಆದರೂ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳಲಿಲ್ಲ. ಆದರೆ ಅ’ಕ್ರಮ ಸಂಬಂಧಕ್ಕೆ ಅಡ್ಡಗಾಲು ಹಾಕುತ್ತಿದ್ದ ಪತಿಯನ್ನು ಕೊ-ಲೆ ಮಾಡಲು ಯೋಜನೆ ರೂಪಿಸಿದ್ದಳು.
ಪೂರ್ವ ಯೋಜನೆಯಂತೆ ಡಿ.14ರಂದು ಬೆಳಗ್ಗೆ ಮಹಿಳೆ ತನ್ನ ಇಬ್ಬರು ಗೆಳೆಯರೊಂದಿಗೆ ಸೇರಿ ವಂಶಿಕೃಷ್ಣನನ್ನು ಕೊ-ಲೆ ಮಾಡಲು ಯತ್ನಿಸಿದ್ದಳು. ಪತಿ ಗಾಢ ನಿದ್ದೆಯಲ್ಲಿದ್ದ ವೇಳೆ ಉ’ಸಿರುಗಟ್ಟಿಸಿ ಜೀ’ವ ತೆಗೆಯಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಆದರೆ, ವಂಶಿಕೃಷ್ಣ ಕೊನೆಯ ಕ್ಷಣದಲ್ಲಿ ತಪ್ಪಿಸಿಕೊಂಡು ಓಡಿಹೋಗಿದ್ದು, ಪ್ರಾ’ಣ ಉಳಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಪತ್ನಿಯ ಹಿಡಿತದಿಂದ ತಪ್ಪಿಸಿಕೊಂಡ ಕೃಷ್ಣವಂಶಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅದಾಗಲೇ ಯುವಕರಿಬ್ಬರೂ ಓಡಿ ಹೋಗಿದ್ದರು. ಕೊನೆಗೆ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಯಾದ ಸಮನ್ವಿತ್ ನನ್ನು ವಿಚಾರಣೆ ನಡೆಸಿದಾಗ ತನಿಖೆಯಲ್ಲಿ ಅಚ್ಚರಿಯ ಸಂಗತಿಗಳು ಬಯಲಾಗಿವೆ.
ಆತನು ಹುಡುಗಿಯರು ಮತ್ತು ಮಹಿಳೆಯರನ್ನು ಬಲೆಗೆ ಬೀಳಿಸುವುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದು, ಬೆದರಿಕೆ ಹಾಕುವುದು ಮತ್ತು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು. ಈಗಾಗಲೇ ಅನೇಕ ಮಹಿಳೆಯರು ಮತ್ತು ಯುವತಿಯರು ಆತನಿಂದ ಪ್ರಭಾವಿತರಾಗಿದ್ದಾರೆ ಎನ್ನಲಾಗಿದೆ. ಇನ್ನು, ಆತನ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ. ಅನೇಕ ಮಹಿಳೆಯರ ಅಸಭ್ಯ ಫೋಟೋಗಳು ಮೊಬೈಲ್‌ನಲ್ಲಿ ಕಂಡುಬಂದಿವೆ. ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದು, ಸಂಪೂರ್ಣವಾದ ತನಿಖೆಯ ಬಳಿಕ ಅಸಲಿ ವಿಚಾರಗಳು ಹೊರಬರಲಿದೆ.