ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಟ್ರೈಲರ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಈ ಸಿನಿಮಾದ ಮೇಲೆ ದರ್ಶನ್ (D Boss) ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಹೋಪ್ ಇದೆ. ಅಷ್ಟೇ ಅಲ್ಲ ಕೇವಲ ಟ್ರೈಲರ್ ನಲ್ಲಿಯೇ ಚಿತ್ರತಂಡದ ಎಫರ್ಟ್ ಕಾಣಿಸುತ್ತಿದೆ. ಹೌದು ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಬಹುಶಃ ಕನ್ನಡ ಚಿತ್ರರಂಗದಲ್ಲಿಯೇ ಈ ಮಟ್ಟಿಗಿನ ಪ್ರಚಾರ ಪಡೆದುಕೊಂಡಿರುವ ಏಕೈಕ ಸಿನಿಮಾ ಇದು ಅಂದ್ರೆ ತಪ್ಪಾಗಲ್ಲ. ಯಾಕೆ ಗೊತ್ತಾ, ಒಂದು ಸಿನಿಮಾವನ್ನು ಆಯಾ ಚಿತ್ರತಂಡ ಪ್ರಮೋಟ್ ಮಾಡ್ಕೊಳೋದು ಸಹಜ.
ಆದರೆ ಕ್ರಾಂತಿ ಹಾಗಲ್ಲ.. ದರ್ಶನ್ ಅವರ ಅಕ್ಷರ ಕ್ರಾಂತಿಗೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಸಿನಿಮಾ ಪ್ರಚಾರಕ್ಕೆ ತಾವು ಕೈಜೋಡಿಸಿದ್ದಾರೆ. ಕ್ರಾಂತಿ ಸಿನಿಮಾದ ಫಸ್ಟ್ ಲುಕ್ ಇಷ್ಟ ಪಟ್ಟ ಜನ ಟಿಸರ್ ಗಾಗಿ ಕಾಯ್ತಾ ಇದ್ರು. ಅಷ್ಟರಲ್ಲಾಗಲೇ ಟೀಸರ್ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಒಂದಾದ ಮೇಲೆ ಒಂದರಂತೆ 3 ಹಾಡುಗಳು ಕೂಡ ರಿಲೀಸ್ ಆದವು. ಅದರಲ್ಲು ಪಬ್ಲಿಕ್ ನಲ್ಲಿ ಅಭಿಮಾನಿಗಳ ನಡುವೆ ಈ ಸಿನಿಮಾ ಹಾಡುಗಳನ್ನ ರಿಲೀಸ್ ಮಾಡಿದ್ದು ನಿಜಕ್ಕೂ ವಿಶೇಷವಾಗಿತ್ತು.
ಟ್ರೈಲರ್ ನಲ್ಲಿ ಏನಿದೆ? ಸುಮಾರು 2.57 ನಿಮಿಷಗಳ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು ಆರಂಭದಿಂದ ಕೊನೆಯವರೆಗೂ ಕಣ್ಣು ಮಿಟುಕಿಸದೆ ನೋಡಿದ್ದಾರೆ ಅಭಿಮಾನಿಗಳು. ಒಪನಿಂಗ್ ನಲ್ಲಿಯೇ ಒಂದು ಕಥೆ ಹೇಳುತ್ತೇನೆ ಎನ್ನುವ ದರ್ಶನ್ ಅವರ ಗಡುಸು ಧ್ವನಿ ಸಿನಿಮಾದ ಬಗ್ಗೆ ಕುತೂಹಲವನ್ನು ಹೆಚ್ಚು. ಮಾಡುತ್ತೆ. ಇನ್ನು ದರ್ಶನ್ ಅವರ ಅಭಿನಯದ ಬಗ್ಗೆಯಂತೂ ಮಾತೇ ಇಲ್ಲ.
ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕವಾಯ್ತು ಎನ್ನುವಂತೆ ದರ್ಶನ್ ಅವರ ಅಪಿಯರೆನ್ಸ್ ಇದೆ. ಆ ಲುಕ್, ಆ ಗಾಂಭೀರ್ಯ ಎಲ್ಲವೂ ಸೂಪರ್. ಒಬ್ಬ ಕ್ಲಾಸ್, ಮಾಸ್ ಹೀರೋ ಆಗಿ ದರ್ಶನ್ ಗಮನ ಸೆಳೆಯುತ್ತಾರೆ. ಇನ್ನು ದರ್ಶನ ಅವರ ಜೊತೆಗೆ ಅವರ ತಂದೆಯ ಪಾತ್ರದಲ್ಲಿ ರವಿಚಂದ್ರನ್ ಕೂಡ ಅಭಿನಯಿಸಿದ್ದಾರೆ ಟ್ರೈಲರ್ ನೋಡಿದರೆ ರವಿಚಂದ್ರನ್ ಹಾಗೂ ದರ್ಶನ್ ಅವರದು ಅಪ್ಪ ಮಗ ಸಂಬಂಧ ಎಂದು ಅನಿಸುತ್ತೆ.
ಇನ್ನೂ ರವಿಚಂದ್ರನ್ ಅವರು ಕೂಡ ಬಹಳ ಗಂಭೀರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಂದು ಮುಳುಗುತ್ತಿರುವ ಶಾಲೆ ಅದನ್ನು ಉಳಿಸಿಕೊಳ್ಳಲು ಎಷ್ಟು ಕಷ್ಟಪಡಬೇಕು ಹಾಗೆಯೇ ಅದನ್ನು ಹಾಳು ಮಾಡಲು ಹಿಂದೆ ಎಷ್ಟು ಜನ ನಿಂತಿದ್ದಾರೆ ಎಂಬೆಲ್ಲ ಕಥೆಯ ಸುತ್ತ ಪೋಣಿಸಿರುವ ಒಂದು ಕೊಂಡಿ ಇದು ಈ ಸಿನಿಮಾದ ಕಥೆ ಅಕ್ಷರ ಕ್ರಾಂತಿ ಮಾಡುವಂತದ್ದು ಎಂಬುದಾಗಿ ದರ್ಶನ್ ಅವರು ಈಗಾಗಲೇ ಹೇಳಿದ್ದಾರೆ.
ಆದರೆ ಸಿನಿಮಾವನ್ನು ಯಾವ ರೀತಿ ತೆರೆಯ ಮೇಲೆ ತಂದಿದ್ದಾರೆ ಎಂಬುದನ್ನು ಕಾದು ನೋಡಬೇಕು. ಇನ್ನು ಟೈಲರ್ ನೋಡಿದ್ರೆ, ಈ ಸಿನಿಮಾದಲ್ಲಿ ಕಾಮಿಡಿಗೆ ಹೆಚ್ಚು ಜಾಗ ಇದ್ದಂತೆ ಇಲ್ಲ ಆದರೆ ದರ್ಶನ್ ಹಾಗೂ ರಚಿತಾ ಜೋಡಿ ಚೆನ್ನಾಗಿ ಕಾಣಿಸಿಕೊಳ್ಳುತ್ತದೆ. ಟ್ರೈಲರ್ ನಲ್ಲಿ ರಚಿತ ಅವರನ್ನು ಹೆಚ್ಚಾಗಿ ತೋರಿಸಿಲ್ಲ ಉತ್ತಮ ಪಾತ್ರ ಒಂದನ್ನು ಅವರು ನಿಭಾಯಿಸಿರಬಹುದು. ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್, ಅಚ್ಚುತ್ ಕುಮಾರ್ ಮೊದಲಾದವರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂಬುದು ಟ್ರೈಲರ್ ನ ತುಣುಕು ನೋಡಿದ್ರೇನೇ ಅರ್ಥವಾಗಿಬಿಡುತ್ತದೆ.
ನಿನ್ನ ಈ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಚಿತ್ರತಂಡ ಸಿನಿಮಾಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದೆ. ಶೈಲಜಾ ಅವರು ಸಿನಿಮಾ ನಿರ್ಮಾಣದ ಆರಂಭದಿಂದ ಕೊನೆಯವರೆಗೆ ದರ್ಶನ್ ಅವರ ಚಾಲೆಂಜ್ ಬಗ್ಗೆ ವಿವರಿಸುತ್ತಾರೆ. ದರ್ಶನ್ ಅವರು ಬಹಳ ಪ್ರಾಮಾಣಿಕವಾಗಿ ತಮ್ಮ ಕಾಯಕವನ್ನು ಮಾಡಿದ್ದಾರೆ ಹಾಗಾಗಿ ಈ ಸಿನಿಮಾ ಗೆಲ್ಲುವುದರಲ್ಲಿ ಎರಡು ಮಾತೇ ಇಲ್ಲ.