ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಗಳಿಸಿದೆ ಜೊತೆಗೆ ನೂರಾರು ಕೋಟಿ ಕಮಾಯಿ ಕೂಡ ಮಾಡಿದೆ. ಕ್ರಾಂತಿ ಸಿನಿಮಾ ಅಭಿಮಾನಿಗಳಿಂದಲೇ ಪ್ರಚಾರ ಕೊಂಡು ಅಭಿಮಾನಿಗಳಿಂದಲೇ ಗೆದ್ದ ಸಿನಿಮಾ. ಬಹುಶಃ ಕನ್ನಡ ಸಿನಿಮಾ ಇಂಡಸ್ಟ್ರಿ (Kannada film Industry) ಯಲ್ಲಿ ಒಬ್ಬ ಸ್ಟಾರ್ ನಟನ ಸಿನಿಮಾವನ್ನ ಗೆಲ್ಲಿಸಲು ಅಭಿಮಾನಿಗಳು (Fans) ಇಷ್ಟರ ಮಟ್ಟಿಗೆ ಕಾರ್ಯಪ್ರವೃತ್ತರಾದದ್ದು ಇದೇ ಮೊದಲು ಎನ್ನಬಹುದು.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ದರ್ಶನ್ ಅವರಿಗೆ ಇರುವಷ್ಟು ಫ್ಯಾನ್ ಫಾಲೋವರ್ಸ್ ಬೇರೆ ಯಾರಿಗೂ ಇಲ್ಲ ಅಂದ್ರೆ ತಪ್ಪಾಗಲ್ಲ ಯಾಕಂದ್ರೆ ದರ್ಶನ್ ಅವರ ಬೆನ್ನೆಲುಬಾಗಿ ಅವರ ಅಭಿಮಾನಿಗಳೇ ನಿಂತಿದ್ದಾರೆ ಹಾಗಾಗಿ ದರ್ಶನ್ ಅವರು ಯಾವುದೇ ಸಮಸ್ಯೆ ಇದ್ದರೂ ಅಭಿಮಾನಿಗಳ ಪ್ರೀತಿ ವಿಶ್ವಾಸದಿಂದ ಎಲ್ಲವನ್ನು ಗೆಲ್ಲುತ್ತಾರೆ.
ಇತ್ತೀಚಿಗೆ ಅಭಿಮಾನಿಗಳಿಗಾಗಿ ದರ್ಶನ್ ಅವರು ಟ್ಯಾಟು ಹಾಕಿಸಿಕೊಂಡಿದ್ದು ಕೂಡ ನಿಮಗೆ ಗೊತ್ತಿದೆ. ನಟ ದರ್ಶನ್ ಅವರು ಕ್ರಾಂತಿ ಸಿನಿಮಾದ ನಂತರ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಅವರ ಹುಟ್ಟು ಹಬ್ಬವನ್ನು (Birthday) ಅಭಿಮಾನಿಗಳು ಆಚರಿಸಿದ್ದಾರೆ ಆದರೆ ಈ ಹುಟ್ಟು ಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್ ಆಗಿತ್ತು ಕಾರಣ ಏನು ಗೊತ್ತಾ?
ದರ್ಶನವರು ತನ್ನ ಹುಟ್ಟುಹಬ್ಬವನ್ನ ಹಾರ, ತುರಾಯಿ, ಕೇಕ್ ಗಳನ್ನು ತಂದು ಹಣ ಖರ್ಚು ಮಾಡಬೇಡಿ ಅದರ ಬದಲು ನಿಮ್ಮ ಕೈಲಾದಷ್ಟು ದವಸಧಾನ್ಯ ನೀಡಿದರೆ ಅದನ್ನು ಅಗತ್ಯ ಇರುವವರಿಗೆ ನಾನು ತಲುಪಿಸುತ್ತೇನೆ ಎಂದಿದ್ದರು ಹಾಗಾಗಿ ದರ್ಶನ್ ಅವರ ಮನೆಯ ಮುಂದೆ ಅವರ ಹುಟ್ಟು ಹಬ್ಬದ ದಿನ ರಾತ್ರಿ ಟನ್ ಗಟ್ಟಲೆ ದವಸ ಧಾನ್ಯಗಳು ಶೇಖರಣೆಯಾಗಿದೆ.
ದರ್ಶನ್ ಅವರ ಮುಂದಿನ ಚಿತ್ರ ಡಿ 56 ಇನ್ನೇನು ಚಿತ್ರಿಕರಣ ಆರಂಭವಾಗಲಿದೆ ಡಿ ಬಾಸ್ ಅವರ ಹೊಸ ಸಿನಿಮಾ ಬರುವುದನ್ನೇ ಅಭಿಮಾನಿಗಳು ಕಾಯ್ತಾ ಇದ್ದಾರೆ. ಹಾಗಂತ ಕ್ರಾಂತಿ ಸಿನಿಮಾದ ಟ್ರೆಂಡ್ ಇನ್ನೂ ಮುಗಿದಿಲ್ಲ. ಕ್ರಾಂತಿ ಸಿನಿಮಾದಲ್ಲಿ ಪುಷ್ಪವತಿ ಎನ್ನುವ ಹಾಡು ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದು. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹುಕ್ ಅಪ್ ಸ್ಟೆಪ್ಸ್ ಹಾಕಿ ರೀಲ್ಸ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡಿರುವ ಸಾಕಷ್ಟು ಹುಡುಗಿಯರು ಈ ಹಾಡಿಗೆ ನೃತ್ಯ ಮಾಡಿದ್ದಾರೆ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಎನಿಸಿಕೊಂಡಿರುವ ಮಧು (madhu_009) ಎನ್ನುವ ಯುವತಿ ಕೂಡ ತನ್ನ ಸ್ನೇಹಿತೆಯ ಜೊತೆಗೆ ಈ ಹಾಡಿಗೆ ಸ್ಟೆಪ್ ಹಾಕಿದ್ದು ಇದೀಗ ವಿಡಿಯೋ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ.
76,000ಕ್ಕೂ ಹೆಚ್ಚು ಫಾಲೋವರ್ಸ್ (Fallowers) ಹೊಂದಿರುವ ಮಧು ತನ್ನ ಸ್ನೇಹಿತೆಯ ಜೊತೆಗೆ ಸೇರಿ ಇನ್ಸ್ಟಾಗ್ರಾಮ್ (Instagram) ನಲ್ಲಿ ಸಾಕಷ್ಟು ವಿಡಿಯೋಗಳನ್ನು ಮಾಡುತ್ತಾರೆ. ಶಾರ್ಟ್ ಸಿನಿಮಾಗಳಲ್ಲಿಯೂ ಕೂಡ ಮಾಡಿರುವ ಮಧು ಸೋಶಿಯಲ್ ಮೀಡಿಯಾದ ಇನ್ಫ್ಲುಎನ್ಸರ್ ಎನಿಸಿಕೊಂಡಿದ್ದಾರೆ.
ನೋಡುವುದಕ್ಕೂ ಬಹಳ ಮುದ್ದಾಗಿರುವ ಮಧು ಗೌಡ ಸಾಕಷ್ಟು ರಿಯಲ್ ಮಾಡುವುದರ ಮೂಲಕ ಫಾಲೋವರ್ಸ್ ಗಳಿಸಿದ್ದಾರೆ ಇವರು ಹಾಕುವ ಪೋಸ್ಟ್ ಗಳಿಗೆ ಹಲವು ಜನರು ಕಮೆಂಟ್ ಮಾಡುತ್ತಾರೆ ಜೊತೆಗೆ ಸಾಕಷ್ಟು ಲೈಕ್ ಗಳು ಕೂಡ ಬರುತ್ತವೆ. ಇದೀಗ ಶೇಕ್ ಇಟ್ ಪುಷ್ಪವತಿ ಹಾಡಿಗೆ ನೃತ್ಯ ಮಾಡಿರುವ ಮಧು ಗೌಡ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಟ್ರೆಂಡ್ ಆಗಿದ್ದಾರೆ.
View this post on Instagram