ಕನ್ನಡಿಗರಿಗೆ ಕಿರಿಕ್ ಕೀರ್ತಿ ಅಂದ್ರೆ ಚೆನ್ನಾಗಿ ಗೊತ್ತು. ಒಬ್ಬ ಜರ್ನಲಿಸ್ಟ್ ಆಗಿರುವ ಕಿರಿಕ್ ಕೀರ್ತಿ ಬಿಗ್ ಬಾಸ್ ಶೋ Bigg Boss show) ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದ್ದರು. ಇದೀಗ ಯುಟ್ಯೂಬ್ (YouTube channel) ನಲ್ಲಿ ಪ್ರಸಾರವಾಗುತ್ತಿರುವ ಹೊಸ ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಆ-ತ್ಮಹತ್ಯೆಗೆ ಪ್ರಯತ್ನಿಸುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಅಷ್ಟುಕ್ಕು ಸ್ಟ್ರಾಂಗ್ (strong) ಆಗಿರುವ ಕೀರ್ತಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದು ಯಾಕೆ ?
ಕಿರಿಕ್ ಕೀರ್ತಿ ಆಡುವ ಕೆಲವು ಮಾತುಗಳು ಅವರ ನಿರ್ಧಾರಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ ಹಾಗಾಗಿ ಅವರು ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ ಈ ಬಗ್ಗೆ ಅವರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ ಕೂಡ. ಸೋಶಿಯಲ್ ಮೀಡಿಯಾದಲ್ಲಿ (social media) ಯೂ ತುಂಬಾನೇ ಆಕ್ಟಿವ್ (active) ಆಗಿರುವ ಕಿರಿಕ್ ಕೀರ್ತಿ ಇತ್ತೀಚಿಗೆ ಆಘಾತಕಾರಿಯಾದ ಒಂದು ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಇವರಿಗೆ ಬಂದು ಎಂಥದ್ದೇ ಸವಾಲನ್ನಾದರೂ ಎದುರಿಸಿದ್ದ ಕಿರಿಕ್ ಕೀರ್ತಿ ಈ ಬಾರಿ ಇಹಲೋಕ ತ್ಯಜಿಸುವ ನಿರ್ಧಾರ (decide) ಮಾಡಿಬಿಟ್ಟಿದ್ದರಂತೆ. ಯಾಕೆ ಗೊತ್ತೇ? ಮಗನ ಜೊತೆಗೆ ಇರುವಂತಹ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ (share) ಮಾಡಿರುವ ಕೀರ್ತಿ ತಾವು ವೈಯಕ್ತಿಕ ಜೀವನದಲ್ಲಿ ಡಿಪ್ರೆಶನ್ (depression) ಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ ಜಿ-ಹಾ-ದ್ಗಳ ಬೇ-ದ-ರಿ-ಕೆ ಮನೆಯವರನ್ನು ತುಂಬಾನೇ ಡಿಸ್ಟರ್ಬ್ ಮಾಡಿದ್ದು ಹಾಗಾಗಿ ಇಂತಹ ನಿರ್ಧಾರ ಮಾಡಿದೆ ಎಂಬುದಾಗಿ ಸುದೀರ್ಘವಾದ ಪೋಸ್ಟ್ ಬರೆದುಕೊಂಡಿದ್ದಾರೆ ಕೀರ್ತಿ.
ಸುದೀರ್ಘ ಪೋಸ್ಟ್ ಬರೆದ ಕೀರ್ತಿ: “ನಿರ್ಧಾರ ಮಾಡಿಬಿಟ್ಟಿದ್ದೆ. ಜಗತ್ತಿಗೆ ವಿದಾಯ ಹೇಳಿಬಿಡಬೇಕು ಅಂತ. ಕಾರಣಗಳು ಹಲವು. ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು. ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು. ಎಲ್ಲ ಪ್ರಯತ್ನಗಳೂ ಕೈಕೊಡ್ತಿತ್ತು. ಒಂದು ಕಡೆ ಜಿ-ಹಾದಿಗಳ ಬೆ-ದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು.
ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ. ಆದ್ರೆ ಈಗ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಹೇಗೆ..? ನನ್ನ ನಂಬಿ ಇನ್ವೆಸ್ಟ್ ಮಾಡಿರೋರಿಗೆ ನ್ಯಾಯ ಸಿಗೋದು ಹೇಗೆ…? ನನ್ನ ಮಗನ ಭವಿಷ್ಯ ಕಟ್ಟೋದು ಹೇಗೆ..? ಈ ಪ್ರಶ್ನೆಗಳು ಕಾಡಿದ್ವು, ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡ್ದೆ’ ಎಂದಿದ್ದಾರೆ.
ಮುಂದುವರೆದ ಅವರು “’10 ನಿಮಿಷ ಧ್ಯಾನ ಮಾಡ್ದೆ. ತಡವಾದ್ರೂ ಪರವಾಗಿಲ್ಲ ನನ್ನ ನಂಬಿದ ಎಲ್ಲರಿಗೂ ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋ ಹಾಗೆ ಸಾಧಿಸಬೇಕು ಅಂತ ಡಿಸೈಡ್ ಮಾಡ್ದೆ. ಮನಸ್ಸಲ್ಲಿದ್ದ ಕೆಟ್ಟ ಅಲೋಚನೆಗಳನ್ನು ಕಿತ್ತು ಬಿಸಾಕಿದ್ದೇನೆ. ಕೆಲವರನ್ನು ಕಳೆದುಕೊಂಡಿದ್ದರ ಹೊರತು ಬೇರೆ ಎಲ್ಲವನ್ನೂ ಟ್ರ್ಯಾಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ. ನಿಮ್ಮ ಬೆಂಬಲ ಜೊತೆಗಿರಲಿ. ಡಿಪ್ರೆಷನ್‌ನಿಂದ ಮತ್ತೆ ವಾಪಾಸ್ ಬರಲು ಸಹಕರಿಸಿ. ಮತ್ತೆ ನನ್ನ ಮುಖದ ಮೇಲಿನ ನಗು ವಾಪಾಸ್ ತರುವ ತನಕ ಪ್ರಯತ್ನ ನಿರಂತರ. ಇದು ಹೇಳಿಕೊಳ್ಳಬಾರದ ವಿಷಯ. ಆದ್ರೆ ಹೇಳಿಕೊಂಡರಷ್ಟೆ ಸಮಾಧಾನ”. ಇದು ಕಿರಿಕ್ ಕೀರ್ತಿ ಬರೆದು ಪೋಸ್ಟ್ ಮಾಡಿದ ಬರಹ.
ಅಂದ ಹಾಗೆ ಕಿರಿಕ್ ಕೀರ್ತಿ ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಯಾವ ಕಾರಣ ಎಂಬುದು ಸರಿಯಾಗಿ ಗೊತ್ತಾಗಿಲ್ಲ ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಅನ್ನು ಹಾಕಿ ಕಮೆಂಟ್ಗಳನ್ನು ಹೈಡ್ ಮಾಡಿದ್ದಾರೆ ಆದರೂ ಅವರ ಪೋಸ್ಟ್ ಅನ್ನು ಶೇರ್ ಮಾಡಿದ ಕೆಲವು ಅಭಿಮಾನಿಗಳು ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದ್ದಾರೆ.