ಕಿಯಾರ ಅಡ್ವಾಣಿ ಬಾಲಿವುಡ್ ಸಿನಿಮಾ ರಂಗದಲ್ಲಿ ಇದೀಗ ಟಾಪ್ ಮೋಸ್ಟ್ ಬೇಡಿಕೆಯ ನಟಿ. ಇತ್ತೀಚಿಗಷ್ಟೇ ತನ್ನ ಬಹುಕಾಲದ ಗೆಳೆಯ ಸಿದ್ಧಾರ್ಥ ಮಲ್ಹೋತ್ರಾ ಜೊತೆ ಹೊಸ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಇದೀಗ ಹನಿಮೂನ್ ಮುಗಿಸಿಕೊಂಡು ಬಂದಿರುವ ಕಿಯಾರ ಅಡ್ವಾಣಿ ಮತ್ತೆ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ. ಇತ್ತೀಚಿಗೆ ಖಾಸಗಿ ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಕಿಯರ ಅಡ್ವಾಣಿ ರೆಡ್ ಗೌನ್ ಬಟ್ಟೆ ಧರಿಸಿದ್ದು ಅಪ್ಸರೆಯಂತೆ ಕಾಣಿಸಿದ್ದಾರೆ.
ಕಿಯಾರ ಅಡ್ವಾಣಿ ರೆಡ್ ಬಣ್ಣದ ಗೌನ್ ಧರಿಸಿ ಖಾಸಗಿ ವಾಯಿನಿಯ ಸಮಾರಂಭ ಒಂದರಲ್ಲಿ ಪಾಪಾರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಮದುವೆ ಆದ್ರೂ ಪಡ್ಡೆ ಹೈಕ್ಳ ಹಾರ್ಟ್ ಗೆ ಲಗ್ಗೆ ಇಡುವುದನ್ನು ಬಿಟ್ಟಿಲ್ಲ ನಟಿ ಎಂದು ವೈರಲ್ ಆಗಿರುವ ಫೋಟೋಸ್ ನೋಡಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಬಾಲಿವುಡ್ ನಟಿಯರು ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಬರುವ ದೃಶ್ಯ ನೋಡುವುದೇ ಚೆಂದ.
ಅವರ ವಿವಿಧ ರೀತಿಯ ಗೆಟಪ್ ಡ್ರೆಸ್ ಎಲ್ಲವೂ ಜನರನ್ನ ಆಕರ್ಷಿಸುತ್ತವೆ. ಇತ್ತೀಚಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಶೇಷವಾದ ಕೆಂಪು ಬಣ್ಣದ ಗೌನ್ ಧರಿಸಿದ ಕಿಯಾರಾ ಅಡ್ವಾಣಿ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದರು. ಇನ್ನು ಈ ಸಂದರ್ಭದಲ್ಲಿ ಕ್ಯಾಮರಾದ ಎದುರು ಫೋಸ್ ಕೊಟ್ಟಿದ್ದು ಅಲ್ಲದೆ ತಮ್ಮ ಹೊಸ ಬಗೆಯ ವಿನ್ಯಾಸದ ಗೌನ ಬಗ್ಗೆ ವಿಶೇಷವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಟಿ ಕಿಯಾರ ಅಡ್ವಾಣಿ ವೈಯಕ್ತಿಕ ಬದುಕಿನಲ್ಲಿಯೂ ವೃತ್ತಿ ಬದುಕಿನಲ್ಲಿಯೂ ಇದೀಗ ಉತ್ತುಂಗದಲ್ಲಿದ್ದಾರೆ. ತಮ್ಮ ಜೀವನದ ಪ್ರತಿ ಕ್ಷಣವನ್ನ ಸಂತೋಷದಿಂದ ಕಳೆಯುತ್ತಿದ್ದಾರೆ. ನಟಿ ಕಿಯಾರಾ ಅಡ್ವಾಣಿ ಹಾಗೂ ಆಕೆಯ ಬಹುಕಾಲದ ಗೆಳೆಯ ನಟ ಸಿದ್ದಾರ್ಥ ಮಲ್ಹೋತ್ರಾ ಅವರು ಡೇಟಿಂಗ್ ಮಾಡುತ್ತಿರುವ ವಿಚಾರ ಹೊಸದೇನು ಆಗಿರಲಿಲ್ಲ.
ಇವರಿಬ್ಬರೂ ಸಾಕಷ್ಟು ಸಭೆ ಸಮಾರಂಭಗಳಲ್ಲಿ ಒಟ್ಟಾಗಿಯೇ ಕಾಣಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಕಳೆದ ಫೆಬ್ರುವರಿ 7ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ತಮ್ಮ ಪ್ರೀತಿಯನ್ನೂ ಮದುವೆ ಎನ್ನುವ ಬಂಧದಲ್ಲಿ ಗಟ್ಟಿಗೊಳಿಸಿದ್ದಾರೆ. ಕಿಯಾರ ಅಡ್ವಾಣಿ ಮದುವೆ ಮುಗಿಸಿ ಹನಿಮೂನ್ ಕೂಡ ಹೋಗಿದ್ದರು ಈ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗಿತ್ತು.
ಆದರೆ ಕಿಯಾರ ಅಡ್ವಾಣಿ ದಾಂಪತ್ಯ ಜೀವನಕ್ಕೆ ಹೆಚ್ಚು ಸಮಯ ಬ್ರೇಕ್ ತೆಗೆದುಕೊಂಡಿಲ್ಲ ಈಗ ಮತ್ತೆ ಸಿನಿಮಾಕ್ಕೆ ಮರಳಿದ್ದಾರೆ. ಈಗಾಗಲೇ ಕೆಲವು ಪ್ರಾಜೆಕ್ಟ್ ಒಪ್ಪಿಕೊಂಡಿರುವ ನಟಿ ಕಿಯಾರ ಅಡ್ವಾಣಿ ರಾಮಚರಣ್ ಜೊತೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.ಇನ್ನು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಒಂದಲ್ಲ ಒಂದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಮೂಲಕ ಕರಿಯರ್ ಆರಂಭಿಸಿದ ಸಿದ್ದಾರ್ಥ್, ಇತ್ತೀಚಿಗೆ ಅಜಯ್ ದೇವಗನ್ ಜೊತೆ ಥ್ಯಾಂಕ್ಸ್ ಗಾಡ್ ಸಿನಿಮಾದಲ್ಲಿಯೂ ಅಭಿನಯಿಸಿದ್ದು ಈಗಾಗಲೇ ಓ ಟಿ ಟಿ ಯಲ್ಲಿ ಈ ಸಿನಿಮಾ ಲಭ್ಯವಿದೆ. ಆದರೆ ಸಿದ್ದಾರ್ಥ ಮಲ್ಹೋತ್ರ ಅವರ ಸಿನಿಮಾಗಳು ಇತ್ತೀಚಿಗೆ ಅಷ್ಟು ಹಿಟ್ ಆಗುತ್ತಿಲ್ಲ. ಹಾಗಾಗಿ ಬಾಲಿವುಡ್ ನಲ್ಲಿ ಅವರ ಅದೃಷ್ಟದ ಪರೀಕ್ಷೆ ಮುಂದುವರೆದಿದೆ.