ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ ನಟ ಇದೀಗ ವಿಶ್ವದ ರಾಕಿ ಭಾಯ್ ಎಂದು ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ನಂತರ ಯಶ್ ಅವರ ಅದೃಷ್ಟವೇ ಬದಲಾಗಿದೆ. ಕರ್ನಾಟಕ (Karnataka) ದಲ್ಲಿ ಮಾತ್ರ ಅಲ್ಲದೆ ಫ್ಯಾನ್ ಇಂಡಿಯಾ (Pan India) ಯಶ್ ಅವರ ಅಭಿಮಾನಿಗಳು ಇದ್ದಾರೆ. ಯಶ್ ಅವರಿಗೆ ಇದೀಗ ಅಪಾರ ಬೇಡಿಕೆ ಇದ್ದು ಸಿನಿಮಾ ಮಾತ್ರ ಅಲ್ಲದೆ ಜಾಹಿರಾತುಗಳಲ್ಲಿಯೂ ಕೂಡ ಅವರನ್ನೇ ಹಾಕಿಕೊಳ್ಳಲು ಕೆಲವು ಕಂಪನಿಗಳು ತಾ ಮುಂದು ನಾ ಮುಂದು ಎಂದು ಬರುತ್ತಿವೆ.
ಏನು ಕೆಜಿಎಫ್ 2 ಚಿತ್ರದ ನಂತರ ಯಶ್ ಅವರ ಮುಂದಿನ ಸಿನಿಮಾ (Film) ಯಾವುದು ಎನ್ನುವುದರ ಬಗ್ಗೆ ಈಗಲೂ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಯಶ್ ಅವರ ಸಿನಿಮಾ ಯಾವುದು ಯಾವಾಗ ಅನೌನ್ಸ್ ಮಾಡ್ತಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಜನವರಿ 24ರಂದು ಒಂದು ಬಿಗ್ ಅನೌನ್ಸ್ಮೆಂಟ್ ಅಗಲಿತ್ತು ಇದು ಯಶ್ ಅವರ ಮುಂದಿನ ಸಿನಿಮಾದ ಕುರಿತು ಎಂದು ಹಲವರು ಭಾವಿಸಿದ್ದರು ಆದರೆ ಇದು ಬೇರೆಯದೆ ಸುದ್ದಿ.
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾತ್ರವಲ್ಲದೆ ಜಾಹೀರಾತಿ (Advertisement) ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಇದೀಗ ಪೆಪ್ಸಿ ಇಂಡಿಯಾದ ಬ್ರಾಂಡ್ ಅಂಬಾಸಿಡರ್ (Brand Ambassador) ಆಗಿ ನಟ ಯಶ್ ಆಯ್ಕೆಯಾಗಿದ್ದಾರೆ. ಕೆಜಿಎಫ್ ಚಿತ್ರ ಯಶ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ ಅದರಲ್ಲಿನ ಅವರ ಗೆಟಪ್ ಎಲ್ಲರಿಗೂ ಇಷ್ಟವಾಗಿತ್ತು ಯಶ್ ಅದೇ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಯಶ್ ಅವರಿಗೆ ದೇಶದ ದೊಡ್ಡ ದೊಡ್ಡ ಕಂಪನಿಗಳು ಕೂಡ ತಮ್ಮ ಉತ್ಪನ್ನಗಳಿಗೆ ರಾಯಭಾರಿಯಾಗುವಂತೆ ಯಶ್ ಅವರಿಗೆ ಆಫರ್ ಮೇಲೆ ಆಫರ್ ನೀಡುತ್ತಲೇ ಇವೆ. ಈಗಾಗಲೇ ಪಾನ್ ಮಸಾಲ (Pan masala Ad) ಜಾಹೀರಾತನ್ನು ನಾನು ಮಾಡುವುದಿಲ್ಲ ಎಂದು ಯಶ್ ಅಭಿಮಾನಿಗಳ ಕಣ್ಣಲ್ಲಿ ಇನ್ನಷ್ಟು ದೊಡ್ಡವರಾಗಿದ್ದರು. ಇದೀಗ ಪೆಪ್ಸಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು ಯಶ್ ಅವರು ಪಾನ್ ಮಸಾಲ ಜಾಹೀರಾತಿಗೆ ಎಷ್ಟೇ ಕೋಟಿ ಕೋಟಿ ಹಣ ಕೊಡ್ತೀವಿ ಅಂದ್ರು ಕೂಡ ಅದರ ರಾಯಭಾರಿ ಆಗೋದಕ್ಕೆ ಸಂಪೂರ್ಣವಾಗಿ ನಿರಾಕರಿಸಿದ್ದರು. ನನಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರೆಲ್ಲರೂ ನನ್ನನ್ನ ಅನುಸರಿಸುತ್ತಾರೆ. ಹಾಗಾಗಿ ನಾನು ಒಳ್ಳೆಯ ಸಂದೇಶವನ್ನೇ ಸಮಾಜಕ್ಕೆ ನೀಡಬೇಕು. ಪಾನ್ ಮಸಾಲ ಆರೋಗ್ಯಕ್ಕೆ ಹಾನಿಕಾರಕ.
ಆದ್ದರಿಂದ ನಾನು ಅದರ ಜಾಹೀರಾತು ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಯಶ್ ನಿರಾಕರಿಸಿದ್ದರು. ಇದೀಗ ಪೆಪ್ಸಿ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿ ಯಶ್ ಆಯ್ಕೆಗೊಂಡಿದ್ದಾರೆ. ಇದು ದೇಶದ ದೊಡ್ಡ ಉತ್ಪನ್ನ ಸಂಸ್ಥೆಯಾಗಿದ್ದು ಇದಕ್ಕೆ ಮೊಟ್ಟಮೊದಲ ಬಾರಿಗೆ ಕನ್ನಡದ ನಟನನ್ನು ಆಯ್ಕೆ ಮಾಡಲಾಗಿದೆ.
ಇವರಿಗೆ ಸಾಕಷ್ಟು ಕ್ರಿಕೆಟ್ ತಾರೆಯರು ಹಾಗೂ ಬಾಲಿವುಡ್ ನಟ ನಟಿಯರು ಈ ಉತ್ಪನ್ನಕ್ಕೆ ಜಾಹೀರಾತು ನೀಡಿದ್ದರು. ಆದರೆ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಪೆಪ್ಸಿ ಹಿಡಿದು ಜಾಹೀರಾತು ಮಾಡಲಿದ್ದಾರೆ. ಇನ್ನು ಈ ಜಾಹೀರಾತಿನಲ್ಲಿ ಕೆಲವು ಕ್ಷಣಗಳ ಕಾಲ ಕಾಣಿಸಿಕೊಳ್ಳಲು ಯಶ್ ಅವರಿಗೆ ಕೋಟಿಗಟ್ಟಲೆ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.