PhotoGrid Site 1675141179718

ನಟಿ ಕಾಜೋಲ್ ಮದುವೆಯಾದಾಗ, ನಟ ಸುದೀಪ್ ನೊಂದು ಕಣ್ಣೀರು ಸುರಿಸಿದ್ದರಂತೆ, ಕಾಜೋಲ್ ಅಂದ್ರೆ ಸುದೀಪ್ ಗೆ ಅದೆಷ್ಟು ಇಷ್ಟ ಗೊತ್ತಾ? ನೀವು ಊಹಿಸಿರಲ್ಲ ನೋಡಿ!!

ಸುದ್ದಿ

ಈ ಕ್ರಷ್ ಹಾಗೂ ಪ್ರೀತಿ ಹುಟ್ಟಲು ಯಾವುದೇ ಕಾರಣ ಬೇಕಾಗಿಲ್ಲ.‌ಯಾರಿಗೆ ಯಾರ ಮೇಲೆ ಬೇಕಾದರೂ ಯಾವಾಗ ಬೇಕಾದರೂ ಆಗಬಹುದು. ಪ್ರೀತಿಗೆ ಒಂದು ಅರ್ಥ ಆದರೆ ಈ ಕ್ರಷ್ ಅನ್ನುವುದೇ ಬೇರೆ. ಇದೊಂದು ರೀತಿಯ ಆಕರ್ಷಣೆ.ಇವತ್ತು ನಾವು ಈ ವಿಚಾರ ಮಾತನಾಡಲು ಕಾರಣ ಏನು ಗೊತ್ತಾ?! ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಒಂದು ಸ್ಟೇಟ್ ಮೆಂಟ್. ಹೌದು, ಖಾಸಗಿ ಚಾನೆಲ್ ಅವರ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಅವರು ಒಬ್ಬ ಖ್ಯಾತ ನಟಿಯ ಬಗ್ಗೆ ಮಾತನಾಡಿದ್ದಾರೆ.

ಹೌದು ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅವರು ಮದುವೆ ಆದಾಗಾ ಸುದೀಪ್ ಅವರು ತುಂಬಾ ನೊಂದಿದ್ದರಂತೆ.ಕಾಜಲ್ ಅವರಿಗೆ ಮದುವೆ ಆಗಿದ್ದಾಗ ನಾನು ತುಂಬಾ ನೊಂದಿದ್ದೇನೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಹಾಗೇ ಮಾತು ತಮಾಷೆಯಾಗಿ ಮುಂದುವರಿಸಿದ ಸುದೀಪ್ ಅವರು “ನನಗೆ ಮದುವೆ ಆಗಿದೆ ಬೇರೆ ವಿಷಯ, ಆದರೆ ಆಕೆ ಮದುವೆ ಆದಾಗ ನೊಂದಿದ್ದೇನೆ.

ಅವರು ಎಂತಹ ಆಕ್ಟರ್, ಅವರ ಜೊತೆ ಕೆಲಸ ಮಾಡಬೇಕು ಅಂದುಕೊಂಡಿದ್ದೆ” ಎಂದು ಹೇಳಿಕೊಂಡಿದ್ದಾರೆ. ಹೌದು, ಕಿಚ್ಚ ಸುದೀಪ್ ಅವರು ಕಾಜಲ್ ಅವರ ಫ್ಯಾನ್ ಆಗಿದ್ದಾರೆ. ಅವರ ನಟನೆಗೆ ಸುದೀಪ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕಾಜಲ್ ಅವರು,ಹಿಂದಿಯ ‘ಕ್ಯೂ! ಹೋ ಗಯಾ ನಾ’ ಸಿನಿಮಾದ ಮೂಲಕ ಬಣ್ಣದ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

PhotoGrid Site 1656407904301

ಬಾಲಿವುಡ್ ನ ಬಿಗ್ ಸ್ಟಾರ್ ನಟರಾದ ಶಾರುಕ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ನಟಿಸುವ ಮೂಲಕ ಮುಂತಾದ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಾಜಲ್  ಅವರು 24 ಫೆಬ್ರುವರಿ 1999 ರಂದು ಮದುವೆ ಆಗಿದ್ದರು. ಕಾಜಲ್ ಅವರು ಬಹು ಕಾಲದ ನಟ ಅಜಯ್ ದೇವಗನ್ ರವರ ಜೊತೆ ಮದುವೆ ಆದರು.

ಇದೀಗ ಕಾಜಲ್ ಅವರಿಗೆ ಎರಡು ಮಕ್ಕಳು ಕೂಡ ಹುಟ್ಟಿದೆ. ತದನಂತರ ರ ನಂತರದಿಂದ ಕಾಜಲ್ ಅವರು ಯಾವ ಸಿನಿಮಾದಲ್ಲಿ ಕೂಡ ನಟಿಸಿಲ್ಲ. ಆದರೆ ಅವರು ಮತ್ತೆ ಸಿನಿಮಾ ರಂಗಕ್ಕೆ ‌ಕಮ್ ಬ್ಯಾಕ್ ಮಾಡೇ ಮಾಡುತ್ತಾರೆ ಅನ್ನುವ ಭರವಸೆ ಅವರ ಅಭಿಮಾನಿಗಳಿಗಿದೆ. ಆದರೆ ಎಲ್ಲಿಯೂ ಕಾಜಲ್ ಅವರು ಈ ಬಗ್ಗೆ ಹೇಳಿಕೊಂಡಿಲ್ಲ.‌ ಸದ್ಯ ಅವರು ತನ್ನ ಪತಿ ಹಾಗೂ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದು, ತನ್ನ ತಾಯಿತನವನ್ನು ಎಂಜಾಯ್ ಮಾಡುತ್ತಿದ್ದಾರೆ.

ಹೀಗೆ ಅದ್ಭುತ ನಟಿಯಾದ ಕಾಜಲ್ ಬಗ್ಗೆ ಕಿಚ್ಚ ಸುದೀಪ್ ಅವರು ಓಪನ್ ಆಗಿ ಮಾತನಾಡಿದ್ದು, ಕಾಜಲ್ ಮೇಲಿರುವ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಎಲ್ಲರಿಗೂ ಇಷ್ಟ ಆಗುತ್ತಾರೆ.‌ಇರೋದನ್ನು ಇದ್ದ ಹಾಗೆ ಓಪನ್ ಆಗಿ ಹೇಳುವ ಕಿಚ್ಚ ಸುದೀಪ್ ಅವರು ಇದೀಗ‌ ವಿಕ್ರಾಂತ್ ರೋಣ ಸಿನಿಮಾದ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ.ನಿಮಗೆ ಕಿಚ್ಚ ಸುದೀಪ್ ಅವರ ಕುರಿತ ಈ ಮಾಹಿತಿ ಬಗ್ಗೆ ಅನಿಸಿಕೆ ಯನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *