PhotoGrid Site 1678185236941

ಜ್ಯೂನಿಯರ್ ಎನ್ಟಿಆರ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಬಂದ ನಟಿ ಜಾನ್ವಿ ಕಪೂರ್! ಈಕೆಯನ್ನು ಕರೆತರಲು ನಿರ್ಮಾಪಕರು ಸುರಿದ ಹಣ ಅದೆಷ್ಟು ಮೂಟೆ ಗೊತ್ತಾ? ಡಬಲ್ ಖುಷಿಯಲ್ಲಿ ನಿರ್ಮಾಪಕರು ನೋಡಿ!!

ಸುದ್ದಿ

ನಟಿ ಶ್ರೀದೇವಿ ಬಹುಭಾಷಾ ನಟಿಯಾಗಿದ್ದವರು. ಅತ್ಯುತ್ತಮ ಅಭಿನೇತ್ರಿ ಆಗಿದ್ದ ಶ್ರೀದೇವಿ, ಹಿಂದಿಗೂ ಮೊದಲೇ ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಕೆಲಸ ಮಾಡಿದವರು. 60-70ರ ದಶಕದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ ಶ್ರೀದೇವಿ. ಹಲವಾರು ಹಿಟ್ ಸಿನಿಮಾಗಳನ್ನು ನೀಡಿ, ಆಗಿನ ಕಾಲದ ಸೆನ್ಸೇಶನಲ್ ನಟಿ ಎನಿಸಿಕೊಂಡಿದ್ದವರು.

ತೆಲಗು ಸ್ಟಾರ್ ನಟರಾಗಿದ್ದ, ಎನ್‌ಟಿಆರ್ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಶನ್ ಸಿನಿಮಾಗಳೆಲ್ಲವೂ ಬಹುತೇಕ ಹಿಟ್ ಆಗಿರುವ ಸಿನಿಮಾಗಳೇ. ಅಷ್ಟೇ ಅಲ್ಲ, ನಟ ಚಿರಂಜೀವಿ, ನಾಗಾರ್ಜುನ್, ವಿಕ್ಟರಿ ವೆಂಕಟೇಶ್ ಹೀಗೆ ಆಗಿನ ಕಾಲದ ಎಲ್ಲಾ ಸ್ಟಾರ್ ನಟರ ಜೊತೆಗೂ ತೆರೆ ಕಂಚಿಕೊಂಡ ಖ್ಯಾತಿ ಶ್ರೀದೇವಿಯವರದ್ದು.

ನಟಿ ಶ್ರಿದೇವಿಯವರನ್ನು ಈಗ ನೆನಪು ಮಾಡಿಕೊಳ್ಳುತ್ತಿರುವುದು ಯಾಕೆಂದರೆ, ಇದೀಗ ಅವರ ಇಬ್ಬರೂ ಹೆಣ್ಣುಮಕ್ಕಳೂ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿದ್ದಾರೆ. ಶ್ರೀದೇವಿಯವರ ದ್ವಿತೀಯ ಪುತ್ರಿ ಈಗ ಖುಷಿ ಕಪೂರ್ ಈಗತಾನೆ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಶ್ರೀದೇವಿ ಮತ್ತೊರ್ವ ಪುತ್ರಿ ಜಾಹ್ನವಿ ಕಪೂರ್ ಈಗಾಗಲೇ ಬಾಲಿವುಡ್ ನಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಜಾಹ್ನವಿ ಕಪೂರ್ ಇತ್ತೀಚಿಗೆ ತಂದೆ ಬೋನಿ ಕಪೂರ್ ನಿರ್ಮಾಣದಲ್ಲಿ ಮೂಡಿಬಂದಿರುವ ಮಲಯಾಳಂ ನ ’ಹೆಲೆನ್’ ಸಿನಿಮಾದ ರಿಮೇಕ್ ’ಮಿಲಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಜಾಹ್ನವಿ ಕಪೂರ್ ಅವರ ಸಿನಿಮಾಗಳು ಅಷ್ಟಾಗಿ ಹಿಟ್ ಆಗಿಲ್ಲ. ಆದರೆ ಅವರಿಗೆ ಸಿಗುವ ಅವಕಾಶಗಳಂತೂ ಕಡಿಮೆಆಗಿಲ್ಲ.

ಇನ್ನೊಂದು ಹೊಸ ವಿಷಯವೇನಪ್ಪಾ ಅಂದ್ರೆ ನಟಿ ಜಾಹ್ನವಿ ಕಪೂರ್ ಅಮ್ಮನಂತೆ ತೆಲುಗು ಸಿನಿಮಾ ಇಂಡಸ್ಟ್ರಿಗೂ ಎಂಟ್ರಿ ಕೊಡುತ್ತಿದ್ದಾರೆ. ಶ್ರೀದೇವಿ ಪುತ್ರಿ, ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಯಾವಾಗ ತೆಲುಗು ಚಿತ್ರರಂಗಕ್ಕೆ ಬರುತ್ತಿದ್ದಾರೆ ಎನ್ನುವ ಸುದ್ದಿ ಈಗಾಗಲೇ ವೈರಲ್ ಆಗಿದೆ. ಆದರೆ ಯಾವ ಸಿನಿಮಾ? ಯಾರ ಸಿನಿಮಾ ಎಂಬಿತ್ಯಾದಿ ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಜನರ ಕುತೂಹಲಕ್ಕೀಗ ತೆರೆ ಬಿದ್ದಿದೆ.

ಹೌದು, ಬಾಲಿವುಡ್ ನಟಿ ಜಾಹ್ನವಿ ಕಪೂರ್ ತೆಲುಗು ಸಿನಿಮಾ ಒಂದರಲ್ಲಿ ಅಭಿನಯಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಎನ್‌ಟಿಆರ್ ಮೊಮ್ಮಗ ಜೂನಿಯರ್ ಎನ್‌ಟಿಆರ್‌ ಅವರ ಮುಂದಿನ ಸಿನಿಮಾಗೆ ಜಾಹ್ನವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್ ಆರ್ ಆರ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಹೀರೋ ಎನಿಸಿಕೊಂಡಿರುವ.

ಜ್ಯೂ. ಎನ್ ಟಿ ಆರ್ ಕೂಡ ಮುಂದಿನ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಲಿದ್ದು, ಇದರಲ್ಲಿ ಜಾಹ್ನವಿ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಸದ್ಯ ಜ್ಯೂ. ತಾರಕ್ ಹಾಗೂ ಜಾಹ್ನವಿ ಕಪೂರ್ ಇಬ್ಬರ ರೊಮ್ಯಾಂಟಿಕ್ ಹಾಡನ್ನು ನೋಡಲು ಸಿನಿ ಪ್ರಿಯರಂತೂ ಕಾತುರರಾಗಿ ಕಾಯುತ್ತಿದ್ದಾರೆ. ಅಂದಹಾಗೆ ಇದು ಜ್ಯೂ. ಎನ್ ಟಿ ಆರ್ ಅವರ 30ನೇ ಸಿನಿಮಾ. ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಕೊರಟಾಲ ಶಿವ.ಸಿನಿಮಾದ ಹೆಸರು ಇನ್ನೂ ರಿವೀಲ್ ಆಗಿಲ್ಲ. ಸದ್ಯದಲ್ಲಿಯೇ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗಿದೆ.

ಅಂದಹಾಗೆ ಈ ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್ 20 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಸುದ್ದಿ ಕೂಡಾ ಇದೆ, ಜಾನ್ವಿ ಕಪೂರ್ ಮೇಲೆ ಹಣ ಹಾಕಿದರೆ ಖಂಡಿತ ಮೋಸವಿಲ್ಲ ಅನ್ನೋ ಭರವಸೆ ನಿರ್ಮಾಪಕರಿಗೆ, ನಟನೆಗಿಂತ ತನ್ನ ಮೈಮಾಟ ಮೂಲಕವೇ ತುಂಬಾ ಹೆಸರು ಮಾಡಿರುವ ಜಾನ್ವಿ ಸೌತ್ ಇಂಡಸ್ಟ್ರಿಯಲ್ಲಿ ಉಳಿಯುತ್ತಾರ ಕಾದು ನೋಡಬೇಕು. ಮುಂದಿನ ವರ್ಷ ಅಂದರೆ 2024ರ ಏಪ್ರಿಲ್‌ ವೇಳೆಗೆ ಈ ಸಿನಿಮಾ ತೆರೆಗೆ ಬರಬಹುದು.

Leave a Reply

Your email address will not be published. Required fields are marked *