PhotoGrid Site 1679383181053

ಮಾಡಿದ್ದು ಕೇವಲ 6 ಸಿನೆಮಾ, 2 ಕೋಟಿಗೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಟಿ ಜಾನ್ವಿ ಕಪೂರ್! ಈಕೆಯ ಕಾಲ್ ಶೀಟ್ ಗಾಗಿ ನಿರ್ಮಾಪಕರು ಹಣದ ಸೂಟ್ ಕೇಸ್ ಹಿಡಿದು ಕ್ಯೂ ನಿಲ್ಲುತ್ತಾರೆ ನೋಡಿ, ಜಾನ್ವಿ ಮಹಿಮೆ!!

ಸುದ್ದಿ

ಇತ್ತೀಚಿಗೆ ಸಿನಿಮಾ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದು ಬಹಳ ಕಾಮನ್ ಆಗಿದೆ. ಸಿನಿಮಾಗಳಲ್ಲಿ ಬ್ಯುಸಿ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತರಾವರಿ ಫೋಟೋಗಳನ್ನು ಪೋಸ್ಟ್ ಮಾಡುವುದನ್ನಂತೂ ಬಿಡುವುದಿಲ್ಲ. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡೋದ್ರಲ್ಲಿ ಜಾನ್ವಿ ಕಪೂರ್ ಕೂಡ ಇದರಿಂದ ಹೊರತಾಗಿಲ್ಲ.

ಬಹುಭಾಷಾ ನಟಿ ಶ್ರೀದೇವಿ ಅವರನ್ನು ಕಳೆದುಕೊಂಡು ಸುಮಾರು ವರ್ಷಗಳಾಯಿತು. ಆದರೂ ನಾವು ಅವರು ಅಭಿನಯದ ಸಿನಿಮಾಗಳನ್ನಾಗಲಿ ಅಥವಾ ಅವರ ಅದ್ಭುತ ನಟನೆಯನ್ನಾಗಲಿ ಮರೆಯಲು ಸಾಧ್ಯವಿಲ್ಲ. ಸೌತ್ ನಿಂದ ನಾರ್ತ್ ವರೆಗೂ ಹಲವು ಭಾಷೆಗಳಲ್ಲಿ ನಟಿ ಶ್ರೀದೇವಿ ಅಭಿನಯಿಸಿದ್ದಾರೆ. ತಮಿಳು ತೆಲುಗು ಸಿನಿಮಾದ ಮೂಲಕವೇ ತಮ್ಮ ಕರಿಯರ್ ಆರಂಭಿಸಿದ ಶ್ರೀದೇವಿ ಅವರು ಕೊನೆಗೆ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡುವುದರ ಮೂಲಕ ಅಲ್ಲಿಯೇ ಸೆಟಲ್ ಆದರು.

ಇದೀಗ ನಟಿ ಶ್ರೀದೇವಿ ಅವರ ಮಕ್ಕಳಾದ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಇಬ್ಬರು ಸಿನೆಮಾ ರಂಗದಲ್ಲಿ ಸಕ್ರಿಯ ರಾಗಿದ್ದಾರೆ. ಜಾನ್ವಿ ಕಪೂರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ನೋಡುವುದಕ್ಕೂ ಅತ್ಯಂತ ಸುಂದರವಾಗಿರುವ ಜಾನ್ವಿ ಕಪೂರ್, ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುವುದು ಹೆಚ್ಚು. ಇತ್ತೀಚಿಗೆ ಅವರು ನಿರಾಭರಣ ಸುಂದರಿಯಾಗಿ ಕಪ್ಪು ಬಾಡಿ ಖಾನ್ ಬಟ್ಟೆ ಧರಿಸಿ ಕ್ಯಾಮರಕ್ಕೆ ಪೋಸ್ ಕೊಟ್ಟಿದ್ದು.

ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ವೈರಲ್ ಆಗಿವೆ. ನಟಿ ಜಾನ್ವಿ ಕಪೂರ್ ಫೋಟೋಗಳನ್ನು ನೋಡಿ ಥೇಟ್ ಶಿಲಾಬಾಲಿಕೆ ತರವೆ ಕಾಣಿಸುತ್ತೀರಿ ಎಂದು ಕಮೆಂಟ್ ಗಳು ಬರುತ್ತಿವೆ. ನಟಿ ಜಾನ್ವಿ ಕಪೂರ್ ಆಗಾಗ ತಮ್ಮ ಸೌಂದರ್ಯ ಪ್ರದರ್ಶನ ಮಾಡುತ್ತಿರುತ್ತಾರೆ. ತಮ್ಮ ಹಲವಾರು ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ.

ಇನ್ನು ಜಾನ್ವಿ ಕಪೂರ್ ಎಲ್ಲ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ ಅದು ಸಾಂಪ್ರದಾಯಿಕ ಸೀರೆ ಆಗಿರಬಹುದು ಅಥವಾ ಅತ್ಯಾಧುನಿಕ ಡ್ರೆಸ್ ಆಗಿರಬಹುದು. ಆದರೆ ಜಾನ್ವಿ ಕಪೂರ್ ತುಸು ಹೆಚ್ಚೇ ಎನಿಸುವಷ್ಟು ತುಂಡು ಬಟ್ಟೆ ಧರಿಸುತ್ತಾರೆ ಎಂದು ಆಗಾಗ ನೆಟ್ಟಿಗರು ಕಮೆಂಟ್ ಮಾಡುತ್ತಾರೆ. ಯಾರು ಏನೇ ಹೇಳಿದರೂ ಜಾನ್ವಿ ಕಪೂರ್ ಮಾತ್ರ ತಲೆಕೆಡಿಸಿಕೊಳ್ಳುವುದಿಲ್ಲ.

ಅವರು ತಮಗೆ ಹೇಗೆ ಸರಿ ಅನಿಸುತ್ತೋ ಹಾಗೆ ಇರುವ ವ್ಯಕ್ತಿತ್ವ ಹೊಂದಿದ್ದಾರೆ. ಇನ್ನು ಜಾನ್ವಿ ಕಪೂರ್ ಬಾಲಿವುಡ್ ನಲ್ಲಿ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಯಾವ ಸಿನಿಮಾವು ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಗಳಿಸಲಿಲ್ಲ. ಆದರೂ ಜಾನ್ವಿ ಕಪೂರ್ ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತವೆ. ಇತ್ತೀಚಿಗೆ ಅವರ ತಂದೆ ಬೋನಿ ಕಪೂರ್ ಅವರ ಮಿಲಿ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಅಭಿನಯಿಸಿದ್ದರು.

ಇದು ಮಲಯಾಳಂ ನ ಹೆಲೆನ್ ಚಿತ್ರದ ರಿಮೇಕ್. ಈ ಚಿತ್ರ ಕೂಡ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸನ್ನು ಗಳಿಸಿಲ್ಲ. ಸದ್ಯ ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದ ಚಿತ್ರೀಕರಣದಲ್ಲಿ ಜಾನ್ವಿ ಕಪೂರ್ ಬ್ಯುಸಿ ಆಗಿದ್ದಾರೆ. ʼಜನ-ಗಣ-ಮನʼ, ‘ತಖ್ತ್’ ಮತ್ತು ‘ಬಾವಲ್’ ಮೊದಲದ ದೊಡ್ಡ ಪ್ರಾಜೆಕ್ಟ್ ಗಳು ಕೂಡ ಜಾನ್ವಿ ಕಪೂರ್ ಅವರ ಕೈಯಲ್ಲಿದೆ. ಇನ್ನು ಜಾನ್ವಿ ಕಪೂರ್ ಅವರು ಸೌತ್ ನಲ್ಲಿಯೂ ಕೂಡ ಅಭಿನಯಿಸುವ ಸಾಧ್ಯತೆಗಳು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಸಖತ್ ಬೋಲ್ಡ್ ಹಾಗೂ ಹಾಟ್ ಆಗಿ ಕಾಣಿಸಿಕೊಳ್ಳುವ ಜಾನ್ವಿ ಕಪೂರ್ ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *