ಬಾಲಿವುಡ್ ನಲ್ಲಿ ನಟಿ ಜಾನ್ವಿ ಕಪೂರ್ ಹೆಚ್ಚು ಫೇಮಸ್ ಆಗ್ತಾ ಇದ್ದಾರೆ. ಒಂದಲ್ಲಾ ಒಂದು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ ಜಾನ್ವಿ ಕಪೂರ್ ಸಿನಿಮಾಗಳಲ್ಲಿ ಗೆಲ್ಲುವುದಕ್ಕೆ ಮಾತ್ರ ಸ್ಟ್ರಗಲ್ ಮಾಡ್ತಾ ಇದ್ದಾರೆ. ಸ್ಟಾರ್ ಕಿಡ್ (Star Kid) ಆಗಿರುವ ಜಾನ್ವಿ ಕಪೂರ್ ಅವರಿಗೆ ಸಾಕಷ್ಟು ಅವಕಾಶಗಳು ಒಲಿದು ಬರುತ್ತಿವೆ. ಹಾಗಾಗಿ ಇವರು ತಮಗೆ ಸಿಕ್ಕಿರುವ ಅವಕಾಶಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಸಿನಿಮಾ ರಂಗದಲ್ಲಿ ಇನ್ನೂ ಹೆಚ್ಚಾಗಿ ಬೆಳೆಯುತ್ತಾರೆ ಎಂಬುದನ್ನ ಕಾದು ನೋಡಬೇಕು.
ದಿವಂಗತ ನಟಿ ಶ್ರೀದೇವಿ (Shreedevi) ಹಾಗೂ ಬೋನಿ ಕಪೂರ್ (Boni Kapoor) ಅವರ ಮಗಳು ಜಾನ್ವಿ ಕಪೂರ್ ಇದೀಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗಳನ್ನ ಮಾಡುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಜಾನ್ವಿ ಕಪೂರ್ ತುಂಬಾನೇ ಆಕ್ಟಿವ್ ಆಗಿ ಇರುತ್ತಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಕ್ಷಾಂತರ ಜನ ಅನುಯಾಯಿಗಳು ಕೂಡ ಇದ್ದಾರೆ. ಇನ್ನು ಜಾನ್ವಿ ಕಪೂರ್ ತಮ್ಮ ವಿಶೇಷವಾದ ಉಡುಪಿನಿಂದ ಹೆಚ್ಚು ಮೆಚ್ಚುಗೆಯನ್ನ ಗಳಿಸಿಕೊಳ್ಳುತ್ತಾರೆ ಜೊತೆಗೆ ಟ್ರೋಲ್ ಕೂಡ ಆಗುತ್ತಾರೆ. ಇದಕ್ಕೆ ಕಾರಣ ಅವರು ಧರಿಸುವ ಬೋಲ್ಡ್ (Bold) ಹಾಗೂ ಹಾಟ್ ಡ್ರೆಸ್ ಗಳು.
ಹೌದು ಜಾನ್ವಿ ಬಗ್ಗೆ ಯಾರು ಏನು ಹೇಳಿದರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ತಮಗೆ ಹೇಗೆ ಸರಿ ಅನ್ನಿಸುತ್ತೋ ಅಂತಹ ಫ್ಯಾಷನ್ ಮಾಡುತ್ತಾರೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಜಾನ್ವಿ ಕಪೂರ್ ಅವರ ಬಗ್ಗೆ ಸಾಕಷ್ಟು ಗಳು ಆಗಿವೆ. ಆದರೆ ಬಾಲಿವುಡ್ ನ ಸೆಲೆಬ್ರಿಟಿ ಆಗಿರುವ ಜಾನ್ವಿ ಕಪೂರ್ ಕೆಲವು ಬಟ್ಟೆಗಳಲ್ಲಿ ಅಪ್ಸರೆಯಂತೆ ಕಂಗೊಳಿಸುವುದಂತು ಸುಳ್ಳಲ್ಲ. ಇತ್ತೀಚಿಗೆ ನೀರಿನಲ್ಲಿ ಬಿಳಿ ಹಾಗೂ ಚಿನ್ನದ ಬಣ್ಣದ ಸೀರೆಯನ್ನ ಉಟ್ಟು ಫೋಟೋಶೂಟ್ ಮಾಡಿಸಿದ್ದರು. ಇದನ್ನ ನೋಡಿದ ನೆಟ್ಟಿಗರು ಜಲಕನ್ಯೆ ಅಪ್ಸರೆ ಎಂದೆಲ್ಲ ಜಾನ್ವಿ ಕಪೂರ್ ಅವರನ್ನು ಹೊಗಳಿದ್ದಾರೆ.
ಇನ್ನು ಜಾನ್ವಿ ಕಪೂರ್ ಈ ವರ್ಷದ ಆರಂಭದಿಂದಲೇ ಹೊಸ ಹೊಸ ಸಿನಿಮಾಗಳನ್ನ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಜಾನ್ವಿ ಕಪೂರ್ ಅವರ ಮಿಲಿ ಎನ್ನುವ ಸಿನಿಮಾ ಅವರ ತಂದೆ ಬೋನಿ ಕಪೂರ್ ಅವರೇ ನಿರ್ಮಾಣ ಮಾಡಿದ ಸಿನಿಮಾ. ಇದು ಮಲಯಾಳಂನ ಹೆಲನ್ ಎನ್ನುವ ಸಿನಿಮಾದ ರಿಮೇಕ್ ಆಗಿದೆ. ಇದೀಗ ವರುಣ್ ಧವನ್ ಅವರ ಜೊತೆಗೆ ಭವಾಲ್ ಹಾಗೂ ರಾಜಕುಮಾರ ಅವರ ಜೊತೆಗೆ ಮಿಸ್ಟರ್ ಅಂಡ್ ಮಿಸಸ್ ಮಹಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ನಿತಿನ್ ತಿವಾರಿ ನಿರ್ದೇಶನದ ಭವಾಲ್ ಚಿತ್ರ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಇನ್ನು ಜಾನ್ವಿ ಕಪೂರ್ ಡ್ಯಾನ್ಸ್ ಮಾಡುವುದರಲ್ಲಿಯೂ ಕೂಡ ಎತ್ತಿದ ಕೈ ಇತ್ತೀಚೆಗೆ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಜಾನ್ವಿ ಕಪೂರ್ ನೀಲಿ ಬಣ್ಣದ ಬಾಡಿ ಕಾನ್ ಡ್ರೆಸ್ ಧರಿಸಿ ವೇದಿಕೆ ಮೇಲೆ ಇರುವ ಎಲ್ಲರನ್ನೂ ಮಂತ್ರ ಮುಕ್ತರನ್ನಾಗಿ ಮಾಡಿದ್ರು. ಇನ್ನು ಬಾಲಿವುಡ್ ನಾ ಫೇಮಸ್ ಹಾಡಿಗೆ ಕೂಡ ಹಾಕಿರುವ ಜಾನ್ವಿ ಕಪೂರ್ ಅವರ ಬೆಲ್ಲಿ ಡ್ಯಾನ್ಸ್ ಎಲ್ಲರೂ ಮನಸೋತಿದ್ದಾರೆ.