ದಿವಂಗತ ನಟಿ ಶ್ರೀದೇವಿ ಬಹು ಭಾಷೆಯಲ್ಲಿ ನಟಿಸಿ ಫೇಮಸ್ ಆದವರು ದಕ್ಷಿಣ ಭಾರತದ ಸಿಂಹರಮದಲ್ಲಿ ಸ್ಟಾರ್ ನಟಿ ಎನಿಸಿಕೊಂಡಿದ್ದ ಅವರು ಸೌತ್ ಸಿನಿಮಾಗಳ ಮೂಲಕವೇ ಪ್ರತಿ ಜೀವನ ಆರಂಭಿಸಿದವರು. ಶ್ರೀದೇವಿಯವರ ಕಾಲದಲ್ಲಿ ಅವರೇ ಬಹು ಬೇಡಿಕೆಯ ನಟಿ ಆಗಿದ್ದವರು ಎಲ್ಲರನ್ನ ಮೀರಿಸುವ ಪ್ರತಿಭೆ ಹೊಂದಿದ್ದ ಶ್ರೀದೇವಿ ಆಗಿನ ಕಾಲದಲ್ಲಿ ಎಲ್ಲಾ ಭಾಷೆಯ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು.
ಇದೀಗ ಸ್ಟಾರ್ ಕಿಡ್ ಆಗಿರುವ ಜಾನ್ವಿ ಕಪೂರ್ ತಾಯಿಯಂತೆ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ ಈಗಾಗಲೇ ನಾಲ್ಕೈದು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಜಾನ್ವಿ ಅವರ ತಂದೆ ಭೋನಿ ಕಪೂರ್ ನಿರ್ಮಾಣದ ಮಿಲಿ ಸಿನಿಮಾದಲ್ಲಿಯೂ ಕೂಡ ಜಾನ್ವಿ ಅಭಿನಯಿಸಿದ್ದಾರೆ. ಇವರಿಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು ಕೂಡ ಜಾನ್ವಿ ಕಪೂರ್ ಸಿನಿಮಾ ಅಷ್ಟು ಹಿಟ್ ಕಂಡಿಲ್ಲ.
ಆದರೆ ಬಾಲಿವುಡ್ ನಲ್ಲಿ ಸ್ಟಾರ್ ಕಿಡ್ ಗಳಿಗೆ ಬೇಡಿಕೆ ಯಾವಾಗಲೂ ಇರುತ್ತೆ. ಹಾಗಾಗಿ ಜಾನ್ವಿ ಕಪೂರ್ ಅವರಿಗೆ ಮತ್ತೆ ಅವಕಾಶಗಳು ಸಿಗುತ್ತಿವೆ. ಜೊತೆಗೆ ಸಾಕಷ್ಟು ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಜಾನ್ವಿ ಕಪೂರ್ ಸೌತ್ ಸಿನಿಮಾಗಳಲ್ಲಿಯೂ ಕೂಡ ನಟಿಸುತ್ತಾರೆ ಎನ್ನುವ ಸುದ್ದಿ ಆಗಾಗ ಕೇಳಿ ಬರುತ್ತದೆ.

ಇದೀಗ ತೆಲುಗು ಸ್ಟಾರ್ ನಟ ರಾಮ ಚರಣ್ ತೇಜ ಅವರ ಸಿನಿಮಾ ಒಂದಕ್ಕೆ ಜಾನ್ವಿ ಕಪೂರ್ ನಾಯಕಿ ಆಗಲಿದ್ದಾರಂತೆ. ಆರ್ ಆರ್ ಸಿನಿಮಾದ ನಂತರ ರಾಮ್ ಚರಣ್ ತೇಜ ಫ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ಮುಂದಿನ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿಯೇ ತೆರೆಕಾಣಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಕೆ ನಾಯಕಿಯಾಗಿ ಜಾನ್ವಿ ಕಪೂರ್ ರಾಮ್ ಚರಣ್ ಜೊತೆ ಇದ್ದರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ.
ತೆಲುಗು ಸಿನಿಮಾ, ಉಪ್ಪೆನ ಸಿನಿಮಾದ ನಿರ್ದೇಶಕರ ಜೊತೆ ರಾಮ್ ಚರಣ್ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಇದೀಗ ನಿರ್ದೇಶಕ ಶಂಕರ್ ಅವರ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ಬಳಿಕ ಬುಚ್ಚಿ ಬಾಬು ಜೊತೆ ಹೊಸ ಇನ್ನೊಂದು ಸಿನಿಮಾ ಮಾಡಲಿದ್ದಾರೆ.
ರಾಮ್ ಚರಣ್ ನಾಯಕನಾಗಿ ನಟಿಸಲಿರುವ ಈ ಹೊಸ ಸಿನಿಮಾದಲ್ಲಿಯೇ ಇದೀಗ ಜಾನ್ವಿ ಕಪೂರ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತದೆ. ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡಬೇಕಿದೆ. ಈ ಸುದ್ದಿ ನಿಮಗೆ ಇಷ್ಟವಾದರೆ ತಪ್ಪದೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.