ರೆಬಲ್ ಸ್ಟಾರ್ ಅಂಬರೀಶ್ (Rebel Star Ambarish) ಕನ್ನಡ ಸಿನಿಮಾ ರಂಗದ ಎಲ್ಲಾ ಬಹಳನೇ ಮಧುರವಾದ ಬಾಂಧವ್ಯ ಸ್ನೇಹ ಪ್ರೀತಿಯನ್ನು ಹೊಂದಿದ್ದರು. ಯಾರೊಂದಿಗೂ ಕೂಡ ಮುನಿಸಿಕೊಳ್ಳದೆ ಅಜಾತ ಶತ್ರುವಾಗಿದ್ದಂತಹ ಅಂಬರೀಶ್ ಅವರನ್ನು ಕಂಡರೆ ಪ್ರತಿಯೊಬ್ಬ ನಟರಿಗೂ ಕೂಡ ಎಲ್ಲದಂತಹ ಪ್ರೀತಿ ಅವರ ಮೇರು ವ್ಯಕ್ತಿತ್ವ ನೇರವಾದ ಮಾತುಗಾರಿಕೆ ಎಲ್ಲವೂ ಪ್ರತಿಯೊಬ್ಬರಲ್ಲೂ ಮನಸೋಲುವಂತೆ ಮಾಡಿ ಬಿಡುತ್ತಿತ್ತು.
ಇನ್ನು ಅಂಬರೀಶ್ ಕೇವಲ ವಿಷ್ಣುವರ್ಧನ್ ಅವರೊಂದಿಗೆ ಮಾತ್ರವಲ್ಲದೆ ನಟ ಜಗ್ಗೇಶ್ (actor Jaggesh) ಅವರೊಂದಿಗೆ ಕೂಡ ವಿಶೇಷವಾದ ಬಾಂಧವ್ಯವನ್ನು ಹೊಂದಿದ್ದರು. ಹೀಗಿರುವಾಗ ಅದೊಂದು ದಿನ ಕಂಠಪೂರ್ತಿ ಕುಡಿದು ಮಧ್ಯರಾತ್ರಿಯಲ್ಲಿ ಅಂಬರೀಶ್ ಮನೆಗೆ ಜಗ್ಗೇಶ್ ನುಗ್ಗಿದರಂತೆ. ಆನಂತರ ಏನಾಯ್ತು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ. ಹೌದು ಗೆಳೆಯರೇ ಜಗ್ಗೇಶ್ ಸಿನಿಮಾ ಬದುಕಿಗೆ ಕಾಲಿಟ್ಟಂತಹ ಆರಂಭಿಕ ದಿನ ಗಳಲ್ಲಿ ಅವಕಾಶಗಳಿಗಾಗಿ ಪರದಾಡುತ್ತಿದ್ದರು.
ಪಾತ್ರ ಯಾವುದೇ ರೀತಿ ಇದ್ದರೂ ಕೂಡ ನಟಿಸಿ ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಇರುತ್ತಾರೆ. ಅಲ್ಲದೆ ಯಾವುದೇ ಹಿನ್ನೆಲೆ ಇಲ್ಲದೆ ಕೆಲವೇ ಕೆಲವು ರೂಪಾಯಿಗಳನ್ನು ಜೇಬಿ ನಲ್ಲಿ ಇಟ್ಟುಕೊಂಡು ಮದುವೆಯಾಗಿ ಬೆಂಗಳೂರಿಗೆ ಬಂದಿಡಿದಂತಹ ಜಗ್ಗೇಶ್ (Jaggesh) ಅವರು ನೆಲೆ ಕಂಡುಕೊಳ್ಳಲು ಬಹಳ ಕಷ್ಟ ಪಡುತ್ತಿರುತ್ತಾರೆ.
ಹೀಗೆ ತಮ್ಮ ಹಾಸ್ಯ ಪ್ರತಿಭೆಯ ಮೂಲಕ ಕನ್ನಡ ಸಿನಿಮಾ ರಂಗದ ಪೋಷಕ ನಟನಾಗಿ ಹಾಸ್ಯ ನಟನಾಗಿ ಹಾಗೂ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಜಗ್ಗೇಶ್ (Jaggesh) ಅವರು ಸಿನಿಮಾರಂಗದಲ್ಲಿ ಯಶಸ್ಸು ಕಂಡುಕೊಳ್ಳಲು ಮುಖ್ಯ ಕಾರಣರಾದವರೇ ಅಂಬರೀಶ್ (Ambarish) ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಅಂಬರೀಶ್ ಹಾಗೂ ಜಗ್ಗೇಶ್ ಅವರು ಭೇಟಿ ಮಾಡಿದಾಗ ಸೆಕೆಂಡ್ ಆಕ್ಟರ್ ಆಗಿ ಬೇರೆಯವರ ಸಿನಿಮಾದಲ್ಲಿ ನಟಿಸುವ ಬದಲು ನೀನೇ ಹೀರೋ ಆಗು ಎಂಬ ಮಾರ್ಗದರ್ಶನ ನೀಡುತ್ತಾರೆ.
ಅದರಂತೆ ಅಂಬರೀಶ್ ಮಾತು ಕೇಳಿ ಉಪೇಂದ್ರ (Upendra) ಅವರ ತರ್ಲೆ ನನ್ ಮಗ (tarle nanmaga) ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲು ಜಗ್ಗೇಶ್ ಪ್ರಾರಂಭ ಮಾಡಿದರು. ಅನಂತರ ಜಗ್ಗೇಶ್ ಅವರೇ ತಾವು ಕೂಡಿಸಿದ್ದ 5 ಲಕ್ಷ ಹಾಗೂ ತಮ್ಮ ಸಹೋದರನ 5 ಲಕ್ಷ ಹಣವನ್ನು ಸೇರಿಸಿ ಅವರೇ ಬರೆದಂತಹ ಕಥೆಗೆ ಅವರೇ ನಾಯಕ ನಟನಾಗಿ ಬಂಡ ನನ್ನ ಗಂಡ (Banda Nanna Ganda) ಎಂಬ ಸಿನಿಮಾವನ್ನು ಮಾಡುತ್ತಾರೆ.
ಆದರೆ ಈ ಸಿನಿಮಾದ ಬಿಡುಗಡೆ ಸಮಯದಲ್ಲಿ ಸಾಕಷ್ಟು ಏರುಳಿತಗಳು ಕಂಡವು, ಸಿನಿಮಾ ಬಿಡುಗಡೆ ಮಾಡಲು ಇನ್ನು ನಾಲ್ಕು ಲಕ್ಷ ಹೆಚ್ಚು ಖರ್ಚಾಗುತ್ತದೆ ಎಂಬ ಬೇಡಿಕೆ ಇಟ್ಟಾಗ ಆ ಸಿಟ್ಟಿನಲ್ಲಿ ಜಗ್ಗೇಶ್ ಅವರು ಕಂಟಪೂರ್ತಿ ಕುಡಿದು ಮಧ್ಯರಾತ್ರಿಯಲ್ಲಿ ಅಂಬರೀಶ್ ಮನೆಗೆ ನುಗ್ಗುತ್ತಾರೆ. ಆ ಸಂದರ್ಭದಲ್ಲಿ ಅಂಬಿ ಯಾವುದೋ ಸಚಿವರೊಂದಿಗೆ ರಾಜಕೀಯ ವಿಚಾರದ ಕುರಿತಾಗಿ ಮಾತನಾಡುತ್ತಿದ್ದರು, ಅಂತಹ ಸರಿ ಹೊತ್ತಿನಲ್ಲಿ ಜಗ್ಗೇಶ್ (Jaggesh) ಕುಡಿದು ಬಂದಿದ್ದನ್ನು ಕಂಡು ಅಂಬಿ ಚೆನ್ನಾಗಿ ಬಯ್ಯುತ್ತಾರೆ.
ಆದರೆ ಜಗ್ಗೇಶ್ ಬೇಸರ ಮಾಡಿಕೊಂಡು ನಿಮ್ಮ ಮಾತು ಕೇಳಿ ನಾನು ಸಿನಿಮಾ ಮಾಡಿದೆ. ಆದರೆ ಅದು ಈಗ ಬಿಡುಗಡೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದಾಗ ಅಂಬರೀಶ್ ಜಗ್ಗೇಶ್ ಅವರನ್ನು ವಿಷ್ಣುವರ್ಧನ್ (Vishnuvardhan) ಅವರ ಬಳಿ ಕಳುಹಿಸುತ್ತಾರೆ. ಜಗ್ಗೇಶ್ ನಡೆದಂತಹ ಘಟನೆ ಎಲ್ಲವನ್ನು ವಿಷ್ಣು ದಾದನಿಗೆ ಒಪ್ಪಿಸಿ ಸಿನಿಮಾವನ್ನು ಒಮ್ಮೆ ನೋಡುವಂತೆ ಹೇಳುತ್ತಾರೆ.
ವಿಷ್ಣು ಸಿನಿಮಾದ ಕಥೆಯನ್ನು ಬಹಳನೇ ಮೆಚ್ಚಿಕೊಂಡು ಸ್ವತಹ ತಾವೇ ನಾಲ್ಕು ಲಕ್ಷ (4 lakh)ಹಣ ನೀಡಿ ಸಿನಿಮಾ ಬಿಡುಗಡೆ ಮಾಡುವಲ್ಲಿ ಸಹಾಯ ಮಾಡಿದರು. ಕೇವಲ 14 ಲಕ್ಷದಲ್ಲಿ ನಿರ್ಮಾಣವಾದಂತಹ ಈ ಒಂದು ಸಿನಿಮಾ ಬರೋಬ್ಬರಿ 60 ಲಕ್ಷ ಹಣವನ್ನು ಬಾಚಿಕೊಳ್ಳುವ ಮೂಲಕ ಆಗಿನ ಕಾಲದ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಧೂಳೆಬ್ಬಿಸಿತ್ತು.