ಹಿಂದೂ ಪರಂಪರೆಯಲ್ಲಿ ಬಹುತೇಕ ಆಷಾಡ ಮಾಸವನ್ನು ಅಶುಭ ಫಲ ಎಂದು ಪರಿಗಣಿಸಲಾಗುತ್ತದೆ ಹಾಗಾಗಿ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇದರ ಜೊತೆಗೆ ಆಷಾಢ ಮಾಸ ಬಂತು ಅಂದ್ರೆ ನವ ವಧು ವರರು (New Couple) ಒಟ್ಟಿಗೆ ಇರಬಾರದು ಎಂದು ಹೇಳಲಾಗುತ್ತೆ. ಇನ್ನು ಕೆಲವು ಕಡೆ ಅತ್ತೆ ಸೊಸೆ ಒಟ್ಟಿಗೆ ಇರಬಾರದು ಎನ್ನುವಂತಹ ಆಚರಣೆ ಕೂಡ ಇದೆ. ಗಂಡ ಹೆಂಡತಿ (Husband -wife) ಈ ಸಮಯದಲ್ಲಿ ಒಟ್ಟಿಗೆ ಇರಬಾರದು ದೈ-ಹಿ-ಕ ಸಂಬಂಧ ಇಟ್ಟುಕೊಳ್ಳಬಾರದು ಎಂದು ಜ್ಯೋತಿಷ್ಯ ಶಾಸ್ತ್ರ (Jyotishya Shastra) ಹೇಳುತ್ತೆ.
ಇದರ ಹಿಂದೆ ಜ್ಯೋತಿಷ್ಯ ಶಾಸ್ತ್ರದ ಕಾರಣಗಳ ಜೊತೆಗೆ ಕೆಲವು ವೈಜ್ಞಾನಿಕ ಕಾರಣಗಳು ಕೂಡ. ಮೊಟ್ಟ ಮೊದಲನೆಯದಾಗಿ ನಮ್ಮ ವಧು ವರರು ಆಷಾಡ ಮಾಸದಲ್ಲಿ ಬೇರೆ ಇರಬೇಕು. ಇದರಿಂದ ಪುರುಷರಿಗೆ ಬೇಸರವಾದರೂ ಮಹಿಳೆಯರು ಮಾತ್ರ ತವರು ಮನೆಗೆ ಹೋಗುವ ಸಂತೋಷದಲ್ಲಿ ಇರುತ್ತಾರೆ ಬರೋಬ್ಬರಿ ಒಂದು ತಿಂಗಳ ಕಾಲ ಗಂಡನ ಮನೆಯಿಂದ ತೊರೆದು ತಾಯಿಯ ಮನೆ ಸೇರುವುದು ಹೆಣ್ಣು ಮಕ್ಕಳಿಗೆ ಖುಷಿ ವಿಚಾರವೇ ಸರಿ.
ಇನ್ನು ಆಷಾಢ ಮಾಸದಲ್ಲಿ ಗಂಡ ಹೆಂಡತಿ ಸೇರಿದರೆ ಹುಟ್ಟುವ ಮಗು ಬಹುತೇಕ ಏಪ್ರಿಲ್ ತಿಂಗಳಿನಲ್ಲಿ ಹುಟ್ಟುತ್ತದೆ. ಈ ಸಮಯದಲ್ಲಿ ವಿಪರೀತ ಸೆಕೆ ಇರುತ್ತದೆ ನೀರಿನ ಸಮಸ್ಯೆ ಕೂಡ ಇರಬಹುದು ಹಾಗಾಗಿ ನವಜಾತ ಶಿಶುವಿಗೆ ಈ ವಾತಾವರಣ ಅಷ್ಟು ಯೋಗ್ಯವಲ್ಲ ಎನ್ನುವ ಕಾರಣಕ್ಕೆ ಆಷಾಢ ಮಾಸದಲ್ಲಿ ನವ ವಧು ವರರು ಸೇರಬಾರದು ಎಂದು ಹೇಳಲಾಗುತ್ತದೆ.
ಇನ್ನು ಎರಡನೇ ಕಾರಣ ನೋಡುವುದಾದರೆ ಆಷಾಢ ಮಾಸ ಕಳೆದು ಶ್ರಾವಣ ಮಾಸ ಬಂದರೆ ಅದು ಶುಭ ಫಲವನ್ನು ನೀಡುವಂತಹ ಮಾಸ. ಹಾಗಾಗಿ ಈ ಸಮಯದಲ್ಲಿ ಮಗು ಹುಟ್ಟಿದರು ಒಳ್ಳೆಯದು. ಮಗುವಿನ ಜಾತಕದಲ್ಲಿ ಶುಕ್ರ ಹಾಗೂ ಸೂರ್ಯ ಬಲವಾಗಿರಬೇಕು ಎಂದು ಜನ ಭಾವಿಸುತ್ತಾರೆ. ಜೊತೆಗೆ ಬುಧ ದುರ್ಬಲನಾಗಿರಬಾರದು.
ಆಷಾಢ ಮಾಸದಲ್ಲಿ ಮಗು ಹುಟ್ಟಿದರೆ ಬುಧ ದುರ್ಬಲನಾಗಿರುತ್ತಾನೆ. ಈ ಕಾರಣದಿಂದ ಆಷಾಢ ಮಾಸದಲ್ಲಿ ಮಗು ಹುಟ್ಟಬಾರದು ಎಂದು ಹೇಳಲಾಗುತ್ತೆ. ಅದರಲ್ಲೂ ಚೊಚ್ಚಲ ಹೆರಿಗೆ ಸಮಯದಲ್ಲಿ ಹೆಣ್ಣಿಗೆ ಅದು ಮರು ಹುಟ್ಟು ಎಂದೇ ಹೇಳಲಾಗುತ್ತದೆ ಹಾಗಾಗಿ ಸರಿಯಾದ ಸಮಯ ಅವಧಿ ನೋಡಿಕೊಂಡು ಮಗು ಮಾಡಿಕೊಂಡರೆ ಆ ಹೆಣ್ಣಿಗೂ ಕೂಡ ಒಳ್ಳೆಯದು ಎನ್ನುವುದು ನಂಬಿಕೆ.
ಇನ್ನು ಮೂರನೆಯದಾಗಿ ಆಷಾಢ ಮಾಸ ಮುಗಿದು ಶ್ರಾವಣ ಬರವ ಹೊತ್ತಿಗೆ ಕೃಷಿ ಕೆಲಸಗಳು ಕೂಡ ಭರದಿಂದ ಸಾಗುತ್ತವೆ. ಈ ಸಂದರ್ಭದಲ್ಲಿ ಗಂಡ ಹೆಂಡತಿ ಒಟ್ಟಿಗೆ ಇದ್ದರೆ ಗಂಡ ಕೆಲಸವನ್ನು ಮಾಡುವುದನ್ನು ಬಿಟ್ಟು ಹೆಂಡತಿಯ ಜೊತೆಗೆ ಸ-ರ-ಸವಾಡುವುದರಲ್ಲಿ ಕಾಲ ಕಳೆಯುತ್ತಾನೆ ಎನ್ನುವುದನ್ನು ಗಮನಿಸಿ ಹಿರಿಯರು ಈ ನಿಯಮವನ್ನು ಮಾಡಿಟ್ಟಿರಬಹುದು.
ಇದು ನವವಧು ವರರಿಗೆ ಮಾತ್ರ ಅನ್ವಯವಾಗುವುದೆ? ಪ್ರತಿವರ್ಷವು ಆಷಾಢ ಮಾಸ ಬರುತ್ತಲ್ಲ ಉಳಿದ ವರ್ಷ ಆಷಾಢ ಮಾಸದಲ್ಲಿ ಗಂಡ ಹೆಂಡತಿ ಒಟ್ಟಿಗೆ ಇದ್ದರೆ ತೊಂದರೆ ಇಲ್ಲವೇ? ಎರಡನೇ ಮಗು ಹುಟ್ಟುವ ಸಮಯದಲ್ಲಿ ಆಷಾಢ ಮಾಸದಲ್ಲಿ ಒಂದಾದರೂ ಸಮಸ್ಯೆ ಇಲ್ಲವೇ? ಎನ್ನುವಂತಹ ಹಲವಾರು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಬಹುದು.
ಆದರೆ ಪ್ರತಿಯೊಂದು ಆಚರಣೆ ನಂಬಿಕೆಗಳಿಗೆ ಉತ್ತರ ಸಿಗುವುದಿಲ್ಲ ಅಥವಾ ಸರಿಯಾದ ಉತ್ತರ ಯಾರಿಗೂ ತಿಳಿದಿಲ್ಲದೆ ಇರಬಹುದು. ಹಾಗಾಗಿ ಕೆಲವು ಮೊದಲಿನಿಂದ ಆಚರಿಸಿಕೊಂಡು ಬಂದಿರುವ ಪದ್ಧತಿ ಹಾಗೂ ನಂಬಿಕೆಗಳಲ್ಲಿ ಭರವಸೆ ಇಟ್ಟು ಅದನ್ನು ಕೂಡ ನಾವು ಆಚರಣೆ ಮಾಡಿದರೆ ಅದರಿಂದ ಒಳಿತಾಗುತ್ತದೆಯೇ ಹೊರತು ಯಾವ ಸಮಸ್ಯೆಯೂ ಆಗುವುದಿಲ್ಲ.