ಇಂದು ಅದೆಷ್ಟೋ ಸಂಬಂಧಗಳು ಮುರಿದು ಬೀಳುವುದಕ್ಕೆ ಇದುವೇ ಮುಖ್ಯ ಕಾರಣ. ಮದುವೆಯಾದ ನಂತರ ಗಂಡಿರಲಿ ಹೆಣ್ಣಿರಲಿ, ಕಷ್ಟ ಸುಖವನ್ನು ಹಂಚಿಕೊಂಡು ದಾಂಪತ್ಯ ಜೀವನ ನಡೆಸಬೇಕು ಆದರೆ ಇದೀಗ ಈ ಒಂದು ಕಾರಣಕ್ಕೆ ಗಂಡ ಹೆಂಡತಿ ನಡುವೆ ಸಾಕಷ್ಟು ಬಿರುಕು ಮೂಡುತ್ತಿದೆ ಯಾವ ಕಾರಣಕ್ಕೆ ಗೊತ್ತೇ?
ಅದುವೇ ಅ-ಕ್ರ-ಮ ಸಂಬಂಧ. ಗಂಡ ಅಥವಾ ಹೆಂಡತಿ ಮದುವೆಯಾದ ನಂತರ ಸ್ವಲ್ಪ ದಿನ ಚೆನ್ನಾಗಿಯೇ ಇರುತ್ತಾರೆ. ನಂತರ ಪರಸ್ತ್ರೀ ಅಥವಾ ಪರಪುರುಷನ ಸಹವಾಸ ಮಾಡುತ್ತಾರೆ. ಅದ್ಯಾಕೆ ದಾಂಪತ್ಯ ಜೀವನ ಅವರಿಗೆ ಅಷ್ಟು ಬೇಗ ಬೇಸರ ಎನಿಸುತ್ತೋ ಗೊತ್ತಿಲ್ಲ. ಅಂತೂ ಇತರರೊಂದಿಗೆ ಸಂಬಂಧ ಬೆಳೆಸಲು ಹೋಗುತ್ತಾರೆ. ಇದರಿಂದ ಆಗುವ ಅನಾಹುತ ಅಂತೂ ಒಂದೆರಡು ಅಲ್ಲ ಅದಕ್ಕೆ ಉದಾಹರಣೆಯಾಗಿ ಒಂದು ಘಟನೆಯನ್ನು ನಾವು ಹೇಳ್ತಿವಿ ಕೇಳಿ.
ದಿನೇಶ್ ಎನ್ನುವ ವ್ಯಕ್ತಿ ಮದುವೆಯಾಗಿ ಮಕ್ಕಳಿದ್ದರೂ ಕೂಡ ಪರಸ್ತ್ರೀ ಸಹವಾಸ ಮಾಡುತ್ತಾನೆ. ಪತ್ನಿ ನೀಲಂ ಜೊತೆ ತಾನು ವ್ಯಾಪಾರಕ್ಕೆ ಹೊರಗೆ ಹೋಗುವುದಾಗಿ ಹೇಳಿ ತನ್ನ ಗೆಳತಿಯೊಂದಿಗೆ ಪ್ರವಾಸಕ್ಕೆ ಹೋಗುತ್ತಾನೆ. ಪತ್ನಿಗೆ ಗೊತ್ತಿಲ್ಲದೆ ಸಾಕಷ್ಟು ಬಾರಿ ಈ ರೀತಿ ಕೆಲಸಗಳನ್ನು ಮಾಡಿದ್ದಾನೆ. ಪ್ರೇಯಸಿಯ ಜೊತೆಗೆ ಚ-ಕ್ಕಂ-ದ ಮಾಡಿಕೊಂಡು ಲೈಫ್ ಎಂಜಾಯ್ ಮಾಡುತ್ತಿದ್ದ ಆದರೆ ದಿನೇಶನ ಪತ್ನಿಗೆ ಕೆಲವು ದಿನಗಳ ಹಿಂದೆ ಆತನ ಮೇಲೆ ಅನುಮಾನ ಮೂಡಿತು. ಹಾಗಾಗಿ ಗಂಡನ ಚಲನ ವಲನಗಳನ್ನ ಆಕೆ ಸೂಕ್ಷ್ಮವಾಗಿ ಗಮನಿಸುವುದಕ್ಕೆ ಶುರು ಮಾಡಿದಳು.
ದಿನೇಶ್ ತಾನು ಬಿಸಿನೆಸ್ ಟ್ರಿಪ್ ಎಂದು ಹೋಗುವಾಗ ಬಾಯ್ ಮಾಡಿ ಕಳುಹಿಸಿದ ಪತ್ನಿ ಆತನನ್ನ ಗೊತ್ತಾಗದ ಹಾಗೆ ಹಿಂಬಾಲಿಸಿದಳು. ಕೊನೆಗೆ ಹೋಟೆಲ್ ಒಂದರಲ್ಲಿ ಪತ್ನಿಗೆ ಗೊತ್ತಾಗದ ಹಾಗೆ ಪ್ರೇಯಸಿಯ ಜೊತೆಗೆ ಇದ್ದಿದ್ದು ಆಕೆ ರೆಡ್ ಹ್ಯಾಂಡ್ ಆಗಿ ಹಿಡಿದುಬಿಟ್ಟಳು. ಹೌದು, ದೆಹಲಿಯ ಹೋಟೆಲ್ ಒಂದರಲ್ಲಿ ದಿನೇಶ ತನ್ನ ಪ್ರೇಯಸಿಯ ಜೊತೆ ರೂಮ್ ಮಾಡಿಕೊಂಡಿದ್ದನು. ದಿನೇಶ್ ರೂಮಿನಲ್ಲಿ ಗೆಳತಿಯ ಜೊತೆ ಚೆಲ್ಲಾಟ ಆಡುತ್ತಿರುವಾಗ ಪತ್ನಿ ನೀಲಂ ಸ್ಥಳಕ್ಕೆ ಹೋಗಿದ್ದಾಳೆ ಗಂಡನ ಸ್ಥಿತಿ ನೋಡಿ ನೀಲಂ ಬೆಚ್ಚಿಬಿದ್ದಾಳೆ.
ದಿನೇಶ್ ತನ ಸ್ನೇಹಿತನನ್ನು ಕೂಡ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ ಪತಿಯನ್ನು ಈ ಸ್ಥಿತಿಯಲ್ಲಿ ನೋಡಿ ನೀಲಂ ಗೆ ಶಾಕ್ ಆಗಿತ್ತು. ಜೊತೆಗೆ ಸಿಟ್ಟು ಕೂಡ ಬಂದಿತ್ತು ನೀಲಂ ಚಪ್ಪಲಿಯನ್ನು ಕೈಗೆ ತೆಗೆದುಕೊಂಡು ಪತಿ ದಿನೇಶ್ ನನ್ನು ಮನಬಂದಂತೆ ಥಳಿಸಿದ್ದಾಳೆ. ನೀಲಂಳನ್ನು ಬಿಡಿಸಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವೇ ಆಗಲಿಲ್ಲ ಗಂಡನನ್ನ ಅಡ್ಡಾಡಿಸಿಕೊಂಡು ಹೊಡೆದಿದ್ದಾಳೆ ನೀಲಂ.
ಅಷ್ಟೇ ಅಲ್ಲ ದಿನೇಶನ ಪ್ರೇಯಸಿಯನ್ನು ಕೂಡ ಕಾಲಿನಿಂದ ತುಳಿದು ಚೆನ್ನಾಗಿ ಏಟು ಕೊಟ್ಟಿದ್ದಾಳೆ. ದಿನೇಶ್ ಜೊತೆ ಇದ್ದ ಇನ್ನೊಬ್ಬ ಸ್ನೇಹಿತನ ಪತ್ನಿಯನ್ನೂ ಕೂಡ ಹೋಟೆಲ್ ಗೆ ಕರೆಸಲಾಗಿತ್ತು ನಡೆದು ಡ್ರಾಮಾ ಕ್ರಿಯೇಟ್ ಆಗಿತ್ತು. ದಿನೇಶ್ ಹಾಗೂ ದಿನೇಶ್ ಪತ್ನಿ ನೀಲಂ ಮತ್ತು ಆತನ ಪ್ರೇಯಸಿಯ ನಡುವೆ ದೊಡ್ಡ ಜಗಳವೇ ನಡೆದಿತ್ತು ನಂತರ ಹೋಟೆಲ್ ಗೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ ನಂತರ ಈ ಜಗಳ ನಿಲ್ಲಿಸುವುದಕ್ಕೆ ಸಾಧ್ಯವಾಯಿತು.
ಪೊಲೀಸರು ಸ್ಥಳಕ್ಕೆ ಆಗಮಿಸಿ ನಡೆಯುತ್ತಿದ್ದ ಜಗಳವನ್ನು ನಿಲ್ಲಿಸಿದ್ದಾರೆ. ಜೊತೆಗೆ ಸಂಬಂಧಪಟ್ಟವರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಕೊನೆಗೆ ಎರಡು ಕುಟುಂಬಗಳ ನಡುವೆ ರಾಜಿ ಪಂಚಾಯಿತಿ ಕೂಡ ಮಾಡಲಾಗಿದೆ ಆದರೆ ನೀಲಂ ತನ್ನ ಪತಿ ದಿನೇಶ್ ಗೆ ಚಪ್ಪಲಿಯಿಂದ ಹೊಡೆಯುವ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.