ಇತ್ತೀಚಿಗೆ ಮದುವೆ ಎನ್ನುವುದು ಕೂಡ ಒಂದು ಬಿಸಿನೆಸ್ ಆಗಿಬಿಟ್ಟಿದೆ. ವರದಕ್ಷಿಣಿಗೆಗಾಗಿ, ಕಮಿಶನ್ ಗಾಗಿ ಹಾಗೂ ಇನ್ನಿತರ ಪ್ರಯೋಜನಗಳಿಗಾಗಿ ಯಾರನ್ನೋ ಯಾರಿಗೋ ಗಂಟು ಹಾಕಿ ಬಿಡುತ್ತಾರೆ. ಇದರಿಂದ ಮದುವೆಯಾದ ನಂತರ ಹುಡುಗ ಅಥವಾ ಹುಡುಗಿ ಇನ್ನಿಲ್ಲದಷ್ಟು ಕಷ್ಟ ಪಡಬೇಕಾಗುತ್ತದೆ. ಹೀಗೆ ಯಾರದ್ದೋ ಆಸೆಗೆ ಬಲಿಯಾದ ಅದೆಷ್ಟೋ ಜೋಡಿಗಳು ಇವೆ ಬಿಡಿ.
ಮದುವೆಯಾಗಿ ಸಂಸಾರ ಮಾಡುವ ಬದಲು ಹಣಕ್ಕಾಗಿ ಮದುವೆ ಆಗುವವರೆ ಹೆಚ್ಚು. ಹೀಗೆ ಬೆಂಗಳೂರಿನ ಹತ್ತಿರದಲ್ಲಿ ವಾಸವಾಗಿದ್ದ ಒಬ್ಬ ವ್ಯಕ್ತಿ ವರದಕ್ಷಿಣೆಗಾಗಿ ಒಬ್ಬ ಹುಡುಗಿಯನ ಮದುವೆ ಆಗುತ್ತಾನೆ ನಂತರ ಹಣ ಆಭರಣ ಎಲ್ಲವನ್ನೂ ದೋಚಿ ಪರಾರಿ ಆಗಿದ್ದಾನೆ. ಇಂತಹ ಘಟನೆ ಒಂದು ಕಡೆಯಾದರೆ ಇನ್ನೊಬ್ಬ ವ್ಯಕ್ತಿ ಮೊದಲ ಹೆಂಡತಿಗೆ ಮೋಸ ಮಾಡಿ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.
ಕೊನೆಗೆ ಆತನ ಮನೆಯವರು ಮತ್ತೊಬ್ಬ ಸಾಫ್ತ್ ವೇರ್ ಉದ್ಯೋಗಿಯ ಜೊತೆ ಮದುವೆ ಮಾಡಿಸುತ್ತಾರೆ. ಹೌದು 2018ರಲ್ಲಿ ಸಾಫ್ಟ್ವೇರ್ ಉದ್ಯೋಗಿಯ ಜೊತೆ ಆತ ಮದುವೆ ಆಗಿದ್ದ. ಎರಡು ವರ್ಷಗಳ ಕಾಲ ಅವರಿಬ್ಬರ ನಡುವೆ ಮೊದಲ ರಾತ್ರಿ ನಡೆದಿರಲಿಲ್ಲ ಹೆಂಡತಿ ಹತ್ತಿರ ಬಂದಾಗಲೆಲ್ಲ ಆತ ದೂರ ಸರಿಯುತ್ತಿದ್ದ. ಏನಾದರು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದ.
ಆದರೆ ಆಕೆ ತಾನು ಓದಬೇಕು ಎನ್ನುವ ಕಾರಣಕ್ಕೆ ಈ ವಿಷಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಹೀಗೆ ಜೀವನ ಸಾಗಿತ್ತು. ಆದರೆ ಎರಡು ವರ್ಷ ಆದರೂ ಇವರಿಬ್ಬರಿಗೆ ಮಕ್ಕಳು ಆಗಲಿಲ್ಲ ಎಂದು ಮನೆಯವರಿಗೆ ಚಿಂತೆ ಶುರುವಾಯಿತು. ಇವರಿಗೆ ಬೇಗ ಮಕ್ಕಳಾಗಬೇಕು ಎನ್ನುವ ಕಾರಣಕ್ಕೆ ಒತ್ತಾಯಿಸಿ ಮತ್ತೊಮ್ಮೆ ಮೊದಲ ರಾತ್ರಿಯ ವ್ಯವಸ್ಥೆಯನ್ನು ಮಾಡುತ್ತಾರೆ.
ಪೋಷಕರು ಆದರೆ ಆತ ಮಾತ್ರ ಇದಕ್ಕೆ ಒಪ್ಪುವುದಿಲ್ಲ ಕೊನೆಗೆ ಹೆಂಡತಿಯ ಬಳಿ ಕಾರಣ ಏನು ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ಆತ ಹೆಂಡತಿಯನ್ನು ಇಷ್ಟು ದಿನ ದೂರ ತಳ್ಳಿದ್ದು ಯಾಕೆ ಗೊತ್ತಾದ್ರೆ ನಿಜಕ್ಕೂ ನಿಮಗೆ ಶಾಕ್ ಆಗಬಹುದು. ಹೌದು ಕೆಲವೊಮ್ಮೆ ಆತನ ನಡವಳಿಕೆಯಲ್ಲಿ ಬದಲಾವಣೆ ಆಗುತ್ತಿದ್ದದ್ದನ್ನು ಆಕೆ ಗಮನಿಸಿದ್ದಳು ಜೊತೆಗೆ ಕೆಲವು ಡೇಟಿಂಗ್ ವೆಬ್ಸೈಟ್ ಗಳಲ್ಲಿಯೂ ಕೂಡ ಆತ ಅಕೌಂಟ್ ಕ್ರಿಯೆಟ್ ಮಾಡಿರುವುದು ಅವಳಿಗೆ ಗೊತ್ತಾಗಿತ್ತು.
ಕೊನೆಗೆ ಆತನನ್ನ ಮತ್ತೊಮ್ಮೆ ವಿಚಾರಿಸಿದಾಗ ಅವನಿಗೆ ಹುಡುಗಿಯರಲ್ಲಿ ಆಸಕ್ತಿ ಇಲ್ಲ ಹುಡುಗರಲ್ಲಿ ಮಾತ್ರ ಆಸಕ್ತಿ ಇರೋದು ಎನ್ನುವುದು ಅರಿವಿಗೆ ಬಂದಿದೆ ಎಂದು ಹುಡುಗ ಹಾಗೂ ಆತನ ಮನೆಯವರ ವಿರುದ್ಧ ಹುಡುಗಿಯ ಮನೆಯವರು ದೂರು ನೀಡಿದ್ದಾರೆ ಈ ಸಂಬಂಧ ಪೊಲೀಸರು ಆ ಹುಡುಗನ ಹಾಗೂ ಮನೆಯವರನ್ನ ವಿಚಾರಣೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ