ಹಣಕ್ಕಾಗಿ ಆಸ್ತಿಗಾಗಿ ಎಂಥವರು, ಎಂಥವರ ಮೇಲೆ ಸಿಟ್ಟು ದ್ವೇಷ ತೀರಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಹಲವಾರು ಘಟನೆಗಳು ಸಾಕ್ಷಿಯಾಗುತ್ತವೆ ಕೆಲವೊಮ್ಮೆ ಆಸ್ತಿಗಾಗಿ ನಡೆಯುವ ಜಗಳ, ಹೊಡೆದಾಟ, ಕೊ-ಲೆ ಮೊದಲಾದವು ಮನಸ್ಸಿನಲ್ಲಿ ಭಯ ಹುಟ್ಟಿಸುತ್ತವೆ ಇಂತಹ ಒಂದು ಭ-ಯಾನಕ ಘಟನೆ ತೆಲಂಗಾಣ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.
ಸೋನಿ ಎಂಬ ಮಹಿಳೆ ಸಯ್ಯದ್ ಎನ್ನುವ ವ್ಯಕ್ತಿಯನ್ನು ಮದುವೆ ಆಗಿದ್ದಳು. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದು ಹತ್ತು ವರ್ಷಗಳ ಸಂಸಾರ ನಡೆಸಿದ್ದಾರೆ. ಸೈಯದ್ ಗೆ 34 ವರ್ಷ ವಯಸ್ಸು ಇವರಿಬ್ಬರ ಸಂಸಾರ ಚೆನ್ನಾಗಿತ್ತು. ಸೈಯದ್ ಬಳಿ ಸ್ವಲ್ಪ ಜಮೀನು ಇದ್ದು ಆತ ತನ್ನ ಬಳಿ ಇದ್ದ ಒಂದು ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸುತ್ತಾನೆ.
ಅದರಿಂದ 19 ಲಕ್ಷ ಹಣ ಕೂಡ ಬರುತ್ತದೆ. ಈ ಹಣವನ್ನು ನೋಡಿದ್ದೆ ತಡ, ಸೈಯದ್ ಪತ್ನಿ ಸೋನಿ ಮನಸ್ಸಿನಲ್ಲಿ ಇನ್ನಿಲ್ಲದ ಆಸೆಗಳು ಚಿಗುರಿವೆ. ಸೋನಿ ಭೂಮಿ ಮಾರಾಟ ಮಾಡಿದ ಹಣ ಹಾಗೂ ಇತರ ಆಸ್ತಿಗಳು ತನಗೆ ಬೇಕು ಎಂದು ಗಂಡನ ಬಳಿ ಜಗಳ ಮಾಡುವುದಕ್ಕೆ ಆರಂಭಿಸಿದಳು. ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆಯಬೇಕು ಎಂದು ಗಲಾಟೆ ಮಾಡುವುದಕ್ಕೆ ಶುರು ಮಾಡಿದಳು.
ಹೀಗೆ ಜಗಳ ಆಗಿ ಸೋನಿ ತಂದೆ ತಾಯಿ ಕೂಡ ಅವರ ಮನೆಗೆ ಬಂದಿದ್ದರು. ಸೈಯದ್ ಬಳಿ ಆಸ್ತಿ ಪೂರ್ತಿ ಬಾಂಡ್ ಪೇಪರ್ ಮೇಲೆ ಬರೆದು ಸಹಿ ಹಾಕಿ ಕೊಡಬೇಕು ಎಂದು ಒತ್ತಾಯ ಮಾಡಿದರು ಆದರೆ ಸಯ್ಯದ್ ಇದಕ್ಕೆ ಒಪ್ಪಲಿಲ್ಲ ಕೊನೆಗೆ ಸೋನಿ ಸೈಯದ್ ಜೊತೆಗೆ ಜೋರಾಗಿ ಜಗಳ ಆಡಿದ್ದಾಳೆ, ಈ ಜಗಳ ತಾರಕಕ್ಕೆ ಹೋಗಿ ಸೋನಿ ತಂದೆ ತಾಯಿ ಜೊತೆ ಸೇರಿಕೊಂಡು ಸಯ್ಯದ್ ನನ್ನು ಮುಗಿಸಿ ಬಿಟ್ಟಿದ್ದಾಳೆ.
ಸೈಯದ್ ಹಾಗೂ ಸೋನಿ ದಂಪತಿಗೆ ಹೆಣ್ಣು ಮಕ್ಕಳು ಕೂಡ ಇದ್ದಾರೆ ಇದೀಗ ಆ ಮಕ್ಕಳು ತಂದೆಯನ್ನ ಕಳೆದುಕೊಂಡು ಅನಾಥವಾಗಿದ್ದಾರೆ. ಈ ಘಟನೆಯ ಬಳಿಕ ಸೈಯದ್ ಅವರ ಅಕ್ಕ ಸೋನಿ ಹಾಗೂ ಆಕೆಯ ತಂದೆ ತಾಯಿಯ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಸೋನಿ ಹಾಗೂ ಆಕೆಯ ತಂದೆ ತಾಯಿ ಪೊಲೀಸರ ಕಸ್ಟಡಿಯಲ್ಲಿ ಇದ್ದು, ಘಟನೆಗೆ ಸಂಬಂಧಪಟ್ಟ ಹಾಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.