ಭೂಮಿ ಮೇಲೆ ಇರುವ ಎಲ್ಲಾ ಸಂಬಂಧಗಳಲ್ಲಿ ಪತಿ-ಪತ್ನಿ ಸಂಬಂಧ ಬಹಳ ಪ್ರಮುಖವಾದದ್ದು. ಗಂಡ ಹೆಂಡತಿ ಒಟ್ಟಾಗಿ ಸೇರಿ ಜೀವನಪರ್ಯಂತ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು ತಮ್ಮ ಮುಂದಿನ ಪೀಳಿಗೆಯನ್ನು ಸೃಷ್ಟಿಸಬೇಕು ಇದು ಪ್ರಾಕೃತಿಕ ನಿಯಮವು ಹೌದು. ಮದುವೆ ಅನ್ನೋದು ಅರೆಂಜ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ ಇಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಬಹಳ ಮುಖ್ಯ.
ಇನ್ನು ಮದುವೆಯಾಗುವ ಪುರುಷ ಹಾಗೂ ಸ್ತ್ರೀಯರ ನಡುವೆ ಎಷ್ಟು ವರ್ಷದ ಅಂತರ ಇದ್ದರೆ ಉತ್ತಮ ಎನ್ನುವುದನ್ನ ತಿಳಿದುಕೊಳ್ಳಬೇಕು. ಇತ್ತೀಚಿಗೆ ವಯಸ್ಸಿನ ಅಂತರವೇ ಇಲ್ಲದೆ ಮದುವೆಯಾಗುವ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಆದರೆ ವಯಸ್ಸು ಇಬ್ಬರ ನಡುವೆ ಕೆಲವು ಅಂತರವನ್ನ ಕಾಯ್ದುಕೊಂಡರೆ ಸಾಂಸಾರಿಕ ಜೀವನ ಸುಖವಾಗಿರುತ್ತದೆ ಎಂದು ಹೇಳಲಾಗುತ್ತೆ.
ಹೌದು ಹುಡುಗ ಹಾಗೂ ಹುಡುಗಿಯರ ನಡುವೆ ಇರುವ ವಯಸ್ಸಿನ ಅಂತರ ಸಾಂಸಾರಿಕ ಜೀವನದಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ ಹಾಗಾದರೆ ಹುಡುಗ ಹಾಗೂ ಹುಡುಗಿಯರ ನಡುವೆ ಎಷ್ಟು ವಯಸ್ಸಿನ ಅಂತರ ಇರಬೇಕು ಹಾಗಿದ್ದರೆ ಸುಖವಾಗಿ ಸಂಸಾರ ನಡೆಸಬಹುದು ಎಂಬ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಕೊಟ್ಟಿದ್ದೇವೆ ಮುಂದೆ ಓದಿ.
ಪತಿ ಪತ್ನಿ ಸುಖವಾಗಿ ಸಂಸಾರ ನಡೆಸುವುದಕ್ಕೆ ವಯಸ್ಸು ಕೂಡ ಮುಖ್ಯ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಹಕರಿಸಿಕೊಂಡು ಹೋಗಲು ಅವರ ನಡುವೆ ವಿಚಾರಧಾರೆಗಳ ಸಮಾನ ಮನಸ್ಥಿತಿ ಕೂಡ ಬೇಕು. ಹಿರಿಯರು ಹೇಳುವಂತೆ ಐದು ವರ್ಷ ವಯಸ್ಸಿನ ಅಂತರ ಇದ್ದರೆ ಆ ಮದುವೆ ಚೆನ್ನಾಗಿ ಇರುತ್ತದೆ. ಇನ್ನು ಆರರಿಂದ ಎಂಟು ವರ್ಷ ವಯಸ್ಸಿನ ಅಂತರ ಇದ್ದರೂ ಒಳ್ಳೆಯದೇ ಎಂದು ಹೇಳುತ್ತಾರೆ.
ಆದರೆ ಗಂಡು ಹೆಣ್ಣಿನ ನಡುವೆ ಆಧುನಿಕ ವಿಚಾರಗಳ ರೀತಿಯಲ್ಲಿ ನೋಡುವುದಾದರೆ ಮೂರರಿಂದ ನಾಲ್ಕು ವರ್ಷಗಳಷ್ಟೇ ಅಂತರ ಇರಬೇಕು. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ವಯಸ್ಸು ಜಾಸ್ತಿ ಇದ್ದರೆ ಅವರು ಹೊಂದಿಕೊಂಡು ಹೋಗುತ್ತಾರೆ ಎಂದು ಹೇಳಲಾಗುತ್ತೆ. ಹೆಂಡತಿಯೂ ಕೂಡ ಗಂಡನಿಗೆ ಪ್ರತಿಯೊಂದು ವಿಚಾರದಲ್ಲಿಯೂ ಸರಿಯಾದ ರೀತಿಯಲ್ಲಿ ತನ್ನ ಸಲಹೆಯನ್ನು ನೀಡಬೇಕು.
ಬುದ್ಧಿ ಮಟ್ಟ ಅವಳಲ್ಲಿ ಇರಬೇಕು ಹಾಗಾಗಿ ಹೀರೋ ಸಣ್ಣ ವಯಸ್ಸಿನವರನ್ನು ಮದುವೆಯಾದರು ಪ್ರಯೋಜನವಿಲ್ಲ. ಅದೇ ವಯಸ್ಸಿನಲ್ಲಿ ಹೆಚ್ಚು ಅಂತರವಿದ್ದರೂ ಪ್ರಯೋಜನವಿಲ್ಲ. ಇದರ ಬದಲು ಗಂಡು ಹೆಣ್ಣಿನ ನಡುವೆ ಕೇವಲ ಮೂರರಿಂದ ನಾಲ್ಕು ವರ್ಷ ವಯಸ್ಸಿನ ಅಂತರವಿದ್ದರೆ ಸಂಸಾರವು ಸುಖದಿಂದ ಸಾಗುತ್ತದೆ.
ಮೂರರಿಂದ ನಾಲ್ಕು ವರ್ಷ ವಯಸ್ಸಿನ ಅಂತರ ಇರುವ ಜೋಡಿ ಪರಸ್ಪರ ಅರ್ಥ ಮಾಡಿಕೊಳ್ಳುವಲ್ಲಿ ಸಹಾಯಕವಾಗುತ್ತದೆ ಯಾಕೆಂದರೆ ಇವರಿಬ್ಬರ ಒಂದೇ ರೀತಿಯಾಗಿ ಇರುತ್ತದೆ. ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಯಾಗಲು ಸಹಾಯಕವಾಗುತ್ತದೆ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.